ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಚಿತ್ತಾಪುರ: ಆ.5:ತಾಲೂಕಿನಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಧಿಕಾರಿಗಳಿಗೆ ಸಸ್ಪೆಂಡ್ ಅಥವಾ ವರ್ಗಾವಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ಕೆಲ ಅಧಿಕಾರಿಗಳು ಮೈಮರೆತಿದ್ದರು. ಆದರೆ, ಈಗ ಆ ತರ ಎಲ್ಲ ನಡೆಯುವುದಿಲ್ಲ. ನೀವು ಸರಿಯಾಗಿ ಕೆಲಸ ಮಾಡದಿದ್ದರೇ ನಾನೇ ನಿಮ್ಮನ್ನು ವರ್ಗಾವಣೆ ಮಾಡಿಸುತ್ತೇನೆ. ಇದನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಅನುಕೂಲವಾಗುವಂತ ಆಡಳಿತ ನೀಡಲು ನೀವು ಸಹಕಾರ ನೀಡಬೇಕು. ಅನುದಾನ ತರುವುದು ನನಗೆ ಬಿಡಿ ಆದರೆ ಈಗಾಗಲೇ ಬಿಡುಗಡೆಯಾದ ಅನುದಾನ ಖರ್ಚು ಮಾಡುವುದರ ಕಡೆ ನೀವು ಗಮನಕೊಡಿ, ನೀವು ಅನುದಾನ ಖರ್ಚು ಮಾಡದಿದ್ದರೆ ಮುಂದಿನ ಆರ್ಥಿಕ ವರ್ಷದಲ್ಲಿ ಯಾವ ಇಲಾಖೆ ಅಡಿಯಲ್ಲಿ ನಿಮಗೆ ಅನುದಾನ ಸಿಗುವುದಿಲ್ಲ ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

ಕೆಬಿಜೆಎನ್‍ಎಲ್, ಕೆಎ???ನ್‍ಎಲ್, ಕೆಆ???ಡಿಎಲ್, ಪಿಆರ್ ಇ, ನಿರ್ಮಿತಿ ಕೇಂದ್ರ, ಆರ್ ಡಿ ಡಬ್ಲ್ಯೂ ಇಲಾಖೆಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲೇಬೇಕು. ಇದು ನಿಮಗೆ ನೀಡುತ್ತಿರುವ ಎಚ್ಚರಿಕೆಯಾಗಿದೆ ಇದನ್ನು ಮತ್ತೊಮ್ಮೆ ಸರಿಯಾಗಿ ಅರಿತುಕೊಂಡು ಕೆಲಸ ಮಾಡಿ ಎಂದು ಅವರು ಪುನರುಚ್ಚರಿಸಿದರು.

ಅಧಿಕಾರಿಗಳು ಕೈಗೊಂಡ ಕಾಮಗಾರಿಗಳ ಕುರಿತು ಸಮಗ್ರ ಚರ್ಚೆಗೆ ಪ್ರತಿ ತಿಂಗಳು 5 ನೇ ತಾರೀಖು ಸಭೆ ನಡೆಸಿ ಅದರ ಅನುಪಾಲನಾ ವರದಿ 7 ನೇ ತಾರೀಖು ನನಗೆ ತಲುಪಿಸಬೇಕು ಈ ಬಗ್ಗೆ ಕಚೇರಿ ಆದೇಶ ಹೊರಡಿಸುವಂತೆ ತಹಸೀಲ್ದಾರ ಶಾ ವಲಿ ಅವರಿಗೆ ಸೂಚಿಸಿದರು.

ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಸಾರ್ವಜನಿಕ ಸ್ಥಳ, ಶಾಲೆಗಳ ಹಾಗೂ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಸಸಿ ನೆಡಬೇಕು. ಪದೇ ಪದೇ ಹೇಳಿದರೂ ಕೂಡಾ ಪಟ್ಟಣದಲ್ಲಿ ಒಂದೇ ಒಂದು ಸ್ವಚ್ಛವಾದ ಉದ್ಯಾನವನ ನಿರ್ಮಿಸಲಾಗಿಲ್ಲ. ಈ ಬಗ್ಗೆ ಕೂಡಲೇ ಈ ಎರಡು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿ ಮಾಡಬೂಳ ಬಳಿ ಅಂದಾಜು ರೂ 29 ಕೋಟಿ ವೆಚ್ಚದಲ್ಲಿ ಪ್ರಾಣಿ ಸಂಗ್ರಹಾಲಯ ನಿರ್ಮಾಣಕ್ಕಾಗಿ ನಿರ್ಧರಿಸಲಾಗಿತ್ತು. ಈ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಅರಣ್ಯಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಚಿತ್ತಾಪುರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಅಭಿವೃದ್ದಿಗಾಗಿ ನೀಲನಕ್ಷೆ ತಯಾರಿಸಿಕೊಂಡು ಬನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಗೆ ಬಾರದ ಅಧಿಕಾರಿಗಳ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಅಂತವರ ವಿರುದ್ದ ಕಾರಣ ಕೇಳಿ ನೋಟೀಸು ಜಾರಿ ಮಾಡುವಂತೆ ಹೇಳಿ,
ಪಿಡಿಓಗಳ ದುರ್ವರ್ತನೆ ಸೇರಿದಂತೆ ಕೆಳಹಂತದ ಅಧಿಕಾರಿಗಳ ಬೇಜವ್ದಾರಿತನವನ್ನು ಸಹಿಸಲಾಗದು ಅದಕ್ಕೆ ತಾಪಂ ಇಓಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.