ನಿರಾಶ್ರಿತ ಕೇಂದ್ರಕ್ಕೆ ಆಕ್ಸಿ ಮೀಟರ್ ವಿತರಣೆ

ಚಿಕ್ಕಮಗಳೂರು.ಮೇ.೨೮; ಎ  ಐ ಎಂ  ಡಿ ಎಫ್ ವತಿಯಿಂದ  ನಿರಾಶ್ರಿತ ಕೇಂದ್ರಕ್ಕೆ ಆಕ್ಸಿ ಮೀಟರ್ ಹಾಗೂ ಮಾಸ್ಕ್ ಗಳನ್ನು ನೀಡುವುದರ ಜೊತೆಯಲ್ಲಿ ದಿನದ ಊಟದ ವ್ಯವಸ್ಥೆ ಮಾಡಲಾಯಿತು.ಇಂದು ಎ ಐ ಎಂ  ಡಿ ಎಫ್  ಸಹಾಯ ತಂಡ  ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ಬೇಕಾದಂತಹ  ಬಟ್ಟೆ ಆಹಾರ ಪದಾರ್ಥಗಳ ಬಗ್ಗೆ ಮತ್ತು  ಆರೋಗ್ಯದ ಬಗ್ಗೆ  ಮಾಹಿತಿಯನ್ನು ಪಡೆದರು  ನಂತರ ರಾಷ್ಟ್ರೀಯ ಅಧ್ಯಕ್ಷ ನಸೀರ್ ಅಹ್ಮದ್ ಮಾತನಾಡಿ  ನಿರಾಶ್ರಿತರ  ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ   ಮಲೆನಾಡು ಕ್ರೈಸ್ತ ಅಭಿವೃದ್ಧಿ ಸಂಘದ ಸದಸ್ಯರು ಮತ್ತು ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರಿಗೆ ಎ ಐ ಎಂ ಡಿ ಎಫ್  ತಂಡದಿಂದ  ಗೌರವ ಸಲ್ಲಿಸಿದರು.ಇಂತಹ ಕಷ್ಟದ ಸಂದರ್ಭದಲ್ಲೂ     ಜಿಲ್ಲಾಡಳಿತ ಮತ್ತು ನಗರಸಭೆ ಆಯುಕ್ತರು ಈ ನಿರಾಶ್ರಿತ ಕೇಂದ್ರಕ್ಕೆ ಉತ್ತಮವಾದ ವ್ಯವಸ್ಥೆಯನ್ನು ನೆರವೇರಿಸಿದ್ದಾರೆ ಅವರಿಗೂ  ಧನ್ಯವಾದಗಳನ್ನು ಅರ್ಪಿಸಿದರು    ದೇಶದಲ್ಲಿ ಎಲ್ಲೆಡೆ ಕೊರೊನಾ ಕಾಯಿಲೆ ಹೆಚ್ಚಾಗುತ್ತಿದ್ದು ಕೊರೊನಾ   ಮಹಾಮಾರಿಯನ್ನು ತಡೆಗಟ್ಟಲು ನಾವೆಲ್ಲರೂ ಪ್ರಾಮಾಣಿಕವಾಗಿ ಜಿಲ್ಲಾಡಳಿತ ಹಾಗೂ ಸರ್ಕಾರದ ಜತೆ ಕೈಜೋಡಿಸಬೇಕು. ಆದರೆ ಕೆಲವು ಜನನಾಯಕರ ಕುತಂತ್ರದಿಂದ ಇಂತಹ ಸಂದರ್ಭದಲ್ಲೂ ಕೆಲ ಶಾಸಕರು ದೆಹಲಿಗೆ ಹೋಗಿ ಸರ್ಕಾರವನ್ನು ಬೀಳಿಸುವ ಅಥವಾ ಸಿ.ಎಂ ಬದಲಾವಣೆ ವಿಚಾರವನ್ನು ಚರ್ಚಿಸುತ್ತಿದ್ದಾರೆ ಇಂತಹ ಜನಪ್ರತಿನಿಧಿಗಳಿಗೆ ಆಯಾ ಕ್ಷೇತ್ರದ ಮತದಾರರೇ ಉತ್ತರ ನೀಡಬೇಕು ಇಂತಹ ಕೆಟ್ಟ ರಾಜಕೀಯವನ್ನು ಬಿಟ್ಟು ಜಾತಿ ಧರ್ಮ ಭೇದ ಭಾವ ಮರೆತು ಪ್ರಾಮಾಣಿಕವಾಗಿ ಜನರ ಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಮಲೆನಾಡು ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ರೂಬಿನ್ ಮೊಸಸ್ .ಟೋನಿ .ಪ್ಯಾಟ್ರಿಕ್. ಸರ್ವಧರ್ಮ ಇಬ್ರಾಹಿಂ .ಅಸ್ಗರ್. ಅಬ್ದುಲ್ ರಹೀಮ್ .ಇರ್ಫಾನ್.ಅರ್ಫಾನ್ ಉಪಸ್ಥಿತರಿದ್ದರು.