ನಿರಾಶ್ರಿತ ಕುಟುಂಬಗಳಿಗೆ ಹೋಳಿಗೆ ಊಟ

ಮುದ್ದೇಬಿಹಾಳ:ಜೂ.2: ಕೋರೊನಾ ಎನ್ನುವ ಮಹಾಮಾರಿ ಬೇಗ ತೊಲಗಿ ಎಲ್ಲ ಜನರು ಮೊದಲಿನಂತೆ ಉದ್ಯೋಗ, ವ್ಯಾಪಾರ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಇನ್ನು ಕೆಲವು ದಿನಗಳವರೆಗೆ ಮಾಸ್ಕ ಧರಿಸುವುದು, ಆಗಗಾಗ ಸ್ಯಾನಿಟೈಜರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದಯಕೊಳ್ಳುವುದೆ ಸೇರಿದೆ ಸರಕಾರದ ಮಾರ್ಗ ಸೂಚಿಗಳನ್ನು ಪಾಲಿಸುವುದರೊಂದಿಗೆ ಕೊರೊನಾ ಮುಕ್ತ ನಾಡನ್ನಾಗಿ ಮಾಡೋಣ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭಗೌಡ ದೇಸಾಯಿ ಹೇಳಿದರು.

ಪಟ್ಟಣದ ಇಲ್ಲಿನ ಬಿದರಕುಂದಿ ರಸ್ತೆ ಬದಿಯಲ್ಲಿ ಸುಮಾರು 20ಕ್ಕು ಹೆಚ್ಚು ಬಡ ಹಾಗೂ ನಿರಾಶ್ರೀತ ಕುಟುಂಭಗಳಿಗೆ ಹೋಳಿಗೆ, ಮಾವಿನ ಹಣ್ಣಿನ ಶಿಕರಣಿ, ಅನ್ನ ಸಾಂಬರ ಹಾಗೂ ಕುಡಿಯುವ ನೀರಿನ ಬಾಟಲ್ ಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.

ಈಗಾಗಲೇ ಕಳೇದ ಎರಡು ತಿಂಗಳಿಂದ ಕೋರೊನಾ ಎರಡನೇ ಅಲೇಯಿಂದಾಗಿ ಇತ್ತ ವ್ಯಾಪರ ಉದ್ಯೋಗ, ದುಡಿಮೆ ಇಲ್ಲದೇ ಬಡವರು ಮದ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆತಿನ್ನೋಂದು ಕಡೆ ಕೋರೊನಾ ಮಹಾಮಾರಿ ಸೊಂಕು ಉಲ್ಘಣಗೊಂಡು ಸಾವು ನೋವುಗಳ ಚಿಂತನೆ. ಈ ಮದ್ಯೆ ಒಂದು ಹೊತ್ತು ಊಟಕ್ಕೂ ಪರಿತಪಿಸುವಂತ ವಾತಾವರಣ ನಿರ್ಮಾಣಗೊಂಡಿದೆ.

ಇದನ್ನರಿತ ನಮ್ಮ ಆತ್ಮೀಯ ಸ್ನೇಹಿತರು ಪ್ರಭು ದೇಸಾಯಿ ಅಭಿಮಾನಿ ಬಳಗ ಹಾಗೂ ಆರ್ ಎಸ್ ಪಾಟೀಲ(ಕೂಚಬಾಳ) ಅವರ ಅಭಿಮಾನ ಬಳಗ ಕಟ್ಟಿಕೊಂಡು. ಕಳೇದ 15 ದಿನಗಳಿಂದ ನಾಲ್ಕೈದು ವಾಹನಗಳಲ್ಲಿ ನಮ್ಮೇಲ ಯುವಕ ಪಡಯ ಸ್ನೇಹಿತ ಮುದ್ದೇಬಿಹಾಳ ಮತಕ್ಷೇತ್ರದ ಬಹುತೇಕ ಎಲ್ಲ ಗ್ರಾಮ ಹೋಬಳಿ ಪಟ್ಟಣಗಳಲ್ಲಿರುವ ತೀರಾ ನಿರ್ಗತಿಕರಿಗೆ, ನಿರಾಶ್ರಿತರಿಗೆ, ಸಾಧು ಸಂತರಿಗೆ ನಿತ್ಯ ಆಹಾರ ಕುಡಿಯಲು ಶುದ್ಧ ನೀರಿನ ಬಾಟಲ್ ಕೋಟ್ಟು ಮಹಾದಾಸೋಹ ಕಾರ್ಯ ತೊಡಗಿಸಿಕೊಂಡಿದ್ದಾಗಿದೆ.

ಅದರಂತೆ ಎಲ್ಲಿಯವರೆಗೆ ಲಾಕ್ ಡೌನ ಇರುತ್ತದೆಯೋ ಅಲ್ಲಿಯವರೆಗೂ ನಿತ್ಯ ದಾಸೋಹ ಕಾರ್ಯ ಪ್ರಾರಂಭವಾಗಿರುತ್ತದೆ ಎಂದರು

ಈ ವೇಳೆ ಗಣ್ಯ ಉದ್ಯಮಿ ಸುನಿಲ ಇಲ್ಲೂರ, ತಾಲೂಕಾ ಬಿಜೆಪಿ ಕಾರ್ಯದರ್ಶಿ ಸಿದ್ದು ಹೆಬ್ಬಾಳ, ಮಂಜುನಾಥ ರತ್ನಾಕರ, ಶಿವು ದಡ್ಡಿ, ಆನಂದ ಪತ್ತಾರ, ಅಶೋಕ ಬಳಬಟ್ಟಿ, ರಾಘು ಜಾಯವಾಡಗಿ, ನಾರಾಯಣ ದೋಟಿಹಾಳ, , ಮಾನಪ್ಪ ತಮದಡ್ಡಿ, ವಿರುಪಾಕ್ಷೀ ಇಟಗಿ, ಗುರು ಇಟಗಿ, ವಿಜಯಕುಮಾರ ಬಡಿಗೇರ,ಬಸವರಾಜ ಹಂದ್ರಾಳ ಸೇರಿದಂತೆ ಹಲವರು ಇದ್ದರು.