ನಿರಾಶ್ರಿತ ಕುಟುಂಬಗಳಿಗೆ ಬಟ್ಟೆ ವಿತರಣೆ

ಅಫಜಲಪುರ: ಮೇ.11:ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ದಿ. ರಾಜಶೇಖರ ಬಡದಾಳ ಅವರ 10 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ನಿರಾಶ್ರಿತರ ವಸತಿ ಗುಡಿಸಲುಗಳಿಗೆ ತೆರಳಿದ ರಾಜಶೇಖರ ಬಡದಾಳ ಅವರ ಹಿತೈಷಿಗಳು ಹಾಗೂ ಸ್ನೇಹಿತರು ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ಬಟ್ಟೆ ವಿತರಿಸಿ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ದತ್ತು ಬೋಳಶೆಟ್ಟಿ, ಚಂದ್ರು ಬಡದಾಳ, ಪ್ರಮೋದ ಅಂಬೂರೆ, ಸಿದ್ದು ಖೇಡ, ಲಕ್ಷ್ಮೀಪುತ್ರ ಡಾಂಗೆ, ಶಂಕರ ಪಿಂಪಳೆ, ಯಲ್ಲಪ್ಪ ಪಾಟೀಲ, ರೂಪಾ ಸಾಲೋಟಗಿ ಅನೇಕರಿದ್ದರು.