
ಕೆಂಭಾವಿ:ಮಾ.11:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಸಮೀಪ ಯಾಳಗಿ ಗ್ರಾಮದಲ್ಲಿ ವಾತ್ಸಲ್ಯ ಯೋಜನೆಯಡಿ ನಿರ್ಗತಿಕ ಮಹಿಳೆಗೆ ಮನೆ ಕಟ್ಟಿಸಿ ಶುಕ್ರವಾರ ಹಸ್ತಾಂತರ ಮಾಡಲಾಯಿತು.
ಮನೆ ಹಸ್ತಾಂತರ ಮಾಡಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಸಂತೋಷ, ಮಾತೃಶ್ರೀ ಹೇಮಾವತಿ ಅಮ್ಮನವರ ಮನದಲ್ಲಿ ಮೂಡಿಬಂದ ವಾತ್ಸಲ್ಯಮಯಿ ಕಾರ್ಯಕ್ರಮವೆ ಈ ವಾತ್ಸಲ್ಯ ಮನೆ ಹಂಚಿಕೆ ಕಾರ್ಯ. ಎಷ್ಟೊ ನಿರ್ಗತಿಕರ ಬದುಕನ್ನು ಹಸನಾಗಿಸಿರುವ, ಬದುಕು ಕಟ್ಟಿಕೊಟ್ಟ ಕಾರ್ಯಕ್ರಮವಿದು. ಯಾಳಗಿ ಗ್ರಾಮದ ರತ್ನಮ್ಮ ಖಂಡಪ್ಪ ಎಂಬ ಮಹಿಳೆಗೆ ಅಮ್ಮನವರ ಆಶಯದಂತೆ ಇಂದು ವಾತ್ಸಲ್ಯ ಎಂಬ ಮನೆ ಕಟ್ಟಿ ಹಸ್ತಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲನಗೌಡ ಮಾಲಿಪಾಟೀಲ, ಅಬ್ದುಲಸಾಬ ಸಿಪಾಯಿ, ಸಾಯಬಣ್ಣ ದೊಡ್ಡಮನಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಒಕ್ಕೂಟ ಅಧ್ಯಕ್ಷ ಮಾಸಾಬಿ, ವಲಯ ಮೇಲ್ವಿಚಾರಕ ಶಶಿಕುಮಾರ, ಖಾದರಬಿ, ಸುವರ್ಣ, ಶಶಿಕಲಾ ಸೇರಿದಂತೆ ಸ್ಥಳೀಯ ಸೇವಾ ಪ್ರತಿನಿಧಿ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.