ನಿರಾಶ್ರಿತರ ಕೇಂದ್ರ ಭ್ರಷ್ಟಾಚಾರ: ಪಾಲಯ್ಯ ಅಮಾನತಿಗೆ ಆಗ್ರಹ

ರಾಯಚೂರು,ಮಾ.೨೩- ನಗರದ ಸಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಕೇಂದ್ರದಲ್ಲಿ ಭಾರಿ ಭ್ರಷ್ಟಾಚಾರ ತಾಂಡಾವಾಡುತ್ತಿದೆ ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಪಾಲಯ್ಯ ಅವರನ್ನು ಅಮಾನತು ಮಾಡವಂತೆ ಡಾ.ಬಿ.ಆರ್ ಅಂಬೇಡ್ಕರ್ ದಲಿತ ಸೇವ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಕೇಂದ್ರ ಅವ್ಯವಸ್ಥೆಯಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದರಿ ಕೇಂದ್ರದಲ್ಲಿ ೧೦೦ ಕ್ಕೂ ಅಧಿಕ ಪುರುಷರು ನಿರಾಶ್ರಿತ ಕೇಂದ್ರದಲ್ಲಿದ್ದಾರೆ. ಇವರಿಗೆ ಸರಿಯಾದ ಮೂಲಭೂತ ಸೌಕರ್ಯ ಗುಣಮಟ್ಟದ ಆಹಾರ ಕೊರೆತೆ ಮತ್ತು ಔಷದೋಪಾಚಾರ ವ್ಯವಸ್ಥೆ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರೂ, ಗುಣಮಟ್ಟದ ಆಹಾರಕ್ಕಾಗಿ ಸೋನಾಮಸೂರಿ ಅಕ್ಕಿ ಖರೀದಿ ಮಾಡಿ ಅದರಿಂದ ಅಡುಗೆ ಮಾಡದೇ ಪಡಿತರ ಅಕ್ಕಿಯಿಂದ ಆಡುಗೆ ಮಾಡಿ ನೀಡುತ್ತಾರೆ. ಅಲ್ಲದೇ ಮೆನು ವೇಳಾಪಟ್ಟಿಯಂತೆ ಆಹಾರ ವಿತರಿಸುತ್ತಿಲ್ಲ. ಇಲ್ಲಿ ಅಡುಗೆ ಮಾಡುವವರು ನಿರಾಶ್ರಿತರೇ ಆಗಿದ್ದಾರೆ.
ಹಾಗಾದರೆ ಅಡುಗೆ ಮಾಡುವ ಸಿಬ್ಬಂದಿ ಇದ್ದು ಇವರು ಪ್ರತಿ ತಿಂಗಳು ಸಂಬಳ ತೆಗೆದುಕೊಳ್ಳುತ್ತಾ ಕೆಲಸವೂ ಮಾಡುವುದಿಲ್ಲ ಪ್ರತಿದಿನ ಕೆಲಸಕ್ಕೆ ಹಾಜರಾಗಿರುವುದಿಲ್ಲ. ಆದರೆ ಹಾಜರಿ ಮಾತ್ರ ೧೦೦% ಇರುತ್ತದೆ. ಇಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಇದ್ದು, ಹಾಜರಾತಿ ಇರುತ್ತದೆ. ಸರಿಯಾಗಿ ಬರುವುದೇ ಇಲ್ಲ. ಯಾವುದೇ ನಿರಾಶ್ರಿತರಿಗೆ ಔಷದೋಪಾಚಾರ ಇಲ್ಲದೇ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.೧೪ ೨೦೨೨ ರಂದು ರವಿ ಎಂಬ ನಿರಾಶ್ರಿತನು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದು ಇದಕ್ಕೆ ನಿರಾಶ್ರಿತರ ಕೇಂದ್ರದ ಅಧಿಕಾರ ಅರೆ ವೈದ್ಯರ ನಿರ್ಲಕ್ಷದಿಂದ ಮೃತ ಪಟ್ಟಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಪ್ರತಿ ಒಬ್ಬ ನಿರಾಶ್ರಿತನಗೆ ತಿಂಗಳಿಗೆ ೩ ಸಾವಿರ ರೂ ಸರಕಾರ ಹಣ ಕೊಡುತ್ತಿದ್ದು, ಆದರೆ ಇಲ್ಲಿ ಕೇವಲ ೧೦ ಜನರಿಗೆ ಮಾತ್ರ ಹಣ ಸಂದಾಯ ಮಾಡುತ್ತಾರೆ. ಉಳಿದ ೯ ಜನರ ಹಣ ಎಲ್ಲಿ ಹೋಗುತ್ತೆಂಬುದು ವಿಚಾರಣೀಯ ವಿಷಯ.ನಿರಾಶ್ರಿತರನ್ನು ನೋಡಲು ಬಂದ ಸಂಬಂಧಿಕರಿಂದ ಸಾವಿರ ಗಟ್ಟಲೇ ಹಣವನ್ನು ತೆಗೆದು ಕೊಳ್ಳುತ್ತಾರೆ. ನಿರಾಶ್ರಿತರಿಂದ ಹಣವನ್ನು ಪಡೆದು ಬಿಡುಗಡೆಮಾಡುತ್ತಾರೆ. ನಿರಾಶ್ರಿತರಿಂದ ಬಟ್ಟೆಗಳನ್ನು ತೊಳೆಯುವ ಕೆಲಸ ಮಾಡಿಸುತ್ತಾರೆ.
ನಿರಾಶ್ರಿತರಿಂದ ಪಾತ್ರೆ ಮತ್ತು ಕ್ಷೌರ ಮಾಡಿಸಿಕೊಳ್ಳುತ್ತಾರೆ ಸಿಬ್ಬಂದಿಗಳು ತಮ್ಮ ವೈಯಕ್ತಿತ ಕೈ, ಕಾಲು, ಸೊಂಟ, ಒತ್ತಿಸಿ ಕೊಳ್ಳುವ ಕೆಲಸಗಳನ್ನು ನಿರಾಶ್ರಿತರಿಂದ ಮಾಡಿಸಿಕೊಳ್ಳುತ್ತಾರೆ.
ರಾತ್ರಿ ಸಮಯದಲ್ಲಿ ನಿರಾಶ್ರಿತ ಸದರಿ ಕೇಂದ್ರದ ಸಿಬ್ಬಂದಿ ಮೋಜು ಮಸ್ತಿ ಮಾಡುವರು. ಮಧ್ಯ ಸೇವನೆ ಕುಡಿತ, ನಿರಾಶ್ರಿತರ ಸಂಬಂಧಿ ಅಥವಾ ಇನ್ನಿತರೆ ಮಹಿಳೆಯರನ್ನು ಕರೆದುಕೊಂಡು ಬಂದು ಮಜಾ ಮಾಡುತ್ತಾರೆ.
ಈ ಕೂಡಲೇ ಅಧಿಕಾರಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎನ್. ನರಸಿಂಹಲು, ಮಲ್ಲೇಶ, ಹನುಮೇಶ, ಅಮರೇಶ ಶೆಟ್ಟಿ, ಗೋವಿಂದ ಸೇರಿದಂತೆ ಉಪಸ್ಥಿತರಿದ್ದರು.