ನಿರಾಶ್ರಿತರಿಗೆ ಸೂರು ಒದಗಿಸಲು ಸರ್ಕಾರಕ್ಕೆ ಪತ್ರ:ಶಾಸಕ ನಾಡಗೌಡ

ಮುದ್ದೇಬಿಹಾಳ: ಸೆ.28:ಪಟ್ಟಣ ಸೇರಿದಂತೆ ಸಮಗ್ರ ಮತಕ್ಷೇತ್ರ ಅಭಿವೃದ್ಧಿ ಪಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ ಹಾಗಾಗಿ ವಾಸ ಮಾಡಲು ಮನೆ ಇಲ್ಲದ ಕಡುಬಡವರು ನಿರಾಶ್ರಿತರಿಗೆ ಸೂರು ಒದಗಿಸುವ ಉದ್ದೇಶದಿಂದ ಈ ಗಾಗಲೇ 300 ಮನೆಗಳನ್ನು ಮಂಜೂರಿ ಮಾಡಬೇಕು ಎಂದು ಸರಕಾರಕ್ಕೆ ಪತ್ರಬರೆಯಲಾಗಿದೆ ಕಾರಣ ಸರಕಾರ ಅನುಮೋದನೆ ನೀಡಿದ ಕೂಡಲೇ ನಿಜವಾದ ಅರ್ಹ ಫಲಾನುಭವಿಗಳನ್ನು ಪಾದರ್ಶಕವಾಗಿ ಆಯ್ಕೆ ಮಾಡುವ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಸಿ ಎಸ್ ನಾಡಗೌಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಅಧಿಕಾರಿಗಳ ಹಾಗೂ ಪುರಸಭೆ ಸರ್ವ ಸದಸ್ಯರ ತುರ್ತು ಸಭೆ ನಡೆಸಿ ಅಧಿಕಾರಿಗಳ ಪ್ರಗತಿ ಪರಿಶಿಲನೆ ನಡೆಸಿ ಅವರು ಮಾತನಾಡಿದರು.
ಪಟ್ಟಣದ ಕೆಲ ಮುಖ್ಯ ರಸ್ತೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪುರಸಭೆ ಪರವಾನಿಗೆ ಪಡೆಯದೇ ಖಾಸಗಿ ಕಟ್ಟಡಗಳು ತಲೆ ಎತ್ತಿ ನಿಂತಿವೆ ಮಾತ್ರವಲ್ಲದೇ ಸರಕಾರದ ಜಾಗೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಲ್ಲವೂ ಗೊತ್ತಿದ್ದರೂ ಗೊತ್ತೊಲ್ಲದವರಂತೆ ಅಧಿಕಾರಿಗಳು ಯಾಕೇ ಅಂತಹ ಕಟ್ಟಡಗಳ ಮಾಲಿಕರಿಗೆ ನೋಟಿಸು ನೀಡಿ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪುರಸಭೆ ಮುಖ್ಯಧಿಕಾರಿಗಳಿಗೆ ಪ್ರಶ್ನಿಸಿದರು.
ಪುರಸಭೆ ವ್ಯಾಪ್ತಿಯ ನೀರಿನ ಕರ, ಸ್ವಯಂಘೋಷಿತ ಆಸ್ತಿ ತೆರಿಗೆ ಹಾಗೂ ಇತರೇ ಕರವನ್ನು ಯಾರು ಎಷ್ಟೇ ದೊಡ್ಡವರಿರಲಿ ಕಡ್ಡಾಯವಾಗಿ ವಸೂಲಿ ಮಾಡುವ ಮೂಲಕ ಪುರಸಭೆ ಆದಾಯ ಹೆಚ್ಚಿಸಬೇಕು ಇದರಿಂದ ಪಟ್ಟಣದ ಬೀದಿ ದೀಪಗಳು ರಸ್ತೆಗಳು, ಚರಂಡಿ ಸೇರಿದಂತೆ ಹಲವರು ರೀತಿಯ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ.ಜೊತೆಗೆ ಪಟ್ಟಣ ವ್ಯಾಪ್ತಿಯ ಯಾವೂದೇ ಇಲಾಖೆಯಿಂದಾಗಲಿ ಪ್ರಾರಂಭಗೊಂಡಿರುವ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕು ಎಂದರು.
ಪುರಸಭೆ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡನಲ್ಲಿ ಸಮರ್ಪಕ ಕುಡಿಯುವ ನೀರು, ರಸ್ತೆ, ಚರಂಡಿ ಸ್ವಚ್ಚತೆ, ವಿದ್ಯುತ್ ಸೇರಿದಂತೆ ಮೂಲಬೂತ ಸೌಲಭ್ಯ ಒದಗಿಸಲು ಮತ್ತು ಕಸಮುಕ್ತ ಪಟ್ಟಣ ಸುಂದರವನ್ನಾಗಿ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಜನರ ಸೇವೆಗೆ ಮುಂದಾಗಬೇಕು. ನಾನ್ಯಾವತ್ತೂ ಪುರಸಭೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಪಟ್ಟಣದ ಪುರಸಭೆ ವ್ಯಾಪ್ತಿಯ ಯಾವೂದೇ ಕಾಮಗಾರಿಗಳು ನಡೆಸಬೇಕಾದರೂ ಪುರಸಭೆ ಪರವಾನಿಗೆ ಪಡೆದು ಕಾಮಗರಿ ನಡೆಸಬೇಕು ಮತ್ತು ಸಂಪೂರ್ಣ ಅಧಿಕಾರಿ ಎಲ್ಲ ಸದಸ್ಯರದ್ದಾಗಿರುತ್ತದೆ ಹಾಗಾಗಿ ಆಯಾ ವಾರ್ಡನ ಸದಸ್ಯರು ತೀರಾ ಬಡುವರು ಮನೆ ಇಲ್ಲದೇ ಇರುವ ನಿಜವಾದ ಬಡವನ್ನು ಗುರ್ತಿಸಿ ಪಟ್ಟಿ ಸಿದ್ಧಪಡಿಸಿ ನನಗೆ ಕೋಡಬೇಕು ಎಂದು ಸದಸ್ಯರಿಗೆ ಸೂಚಿಸಿದರು.
ಈ ವೇಳೆ ವಿಜಯಪುರ ಉಪವಿಬಾಗಾಧಿಕಾರಿ ಹಾಗೂ ಆಢಲಿತಾಧಿಕಾರಿ ಬಸವರಾಜ ಕುಲಶೇಟ್ಟಿಯವರು ಮಾತನಾಡಿ ಪಟ್ಟಣದಲ್ಲಿ ಅನಧಿಕೃತ ಲೇಔಟಗಳಿಗೆ ಬೇಕಾಬಿಟ್ಟಿಯಾಗಿ ಉತಾರ ನೀಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಇನ್ನುಮುಂದೆ ಯಾವೂದೇ ಕಾರಣಭಕ್ಕೂ ಟೌನ್ ಪ್ಲ್ಯಾನ್ ಹಾಗೂ ಕೆ ಜೆಪಿ ಇಲ್ಲದ ಲೇಔಟಗಳ ಪ್ಲಾಟುಗಳಿಗೆ ಉತಾರ ಕೊಡಬಾರದು. ಕಳೆದ ಒಂದು ವರ್ಷದಿಂದ ಪಟ್ಟಣದ ಬಹುತೇಕ ವಾರ್ವುಗಳಲ್ಲಿ ರಸ್ತೆ ಕಾಮಗಾರಿಗಳು ಗುಣಮಟ್ಟ ಕಳೆದುಕೊಂಡು ಕಳಪೆಯಾಗಿ ನಿರ್ವಸಲಾಗಿದೆ ಅಂತಹ ಗುತ್ತಿಗೆದಾರರ ಮೇಲೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಕಾಮಗಾರಿ ಅರ್ಧಮರ್ದ ಮಾಡಿ ಹಾಗೇ ಬಿಟ್ಟಿರುವ ಗುತ್ತಿಗೆದಾರರನ್ನು ಕರೆದು ಕಾಮಗಾರಿ ಪ್ರಾರಂಭಿಸಬೇಕು ಇಲ್ಲದಿದ್ದರೇ ಅವರ ಮೇಲೂ ಕಾನೂನು ರಿತ್ಯ ಕ್ರಮ ಕೈಗೊಳ್ಳಬೇಕು ಎಂದು ಹಾಗೂ ಶಾಸಕ ಸಿ ಎಸ್ ನಾಡಗೌಡ ಸಾಹೇಬರು ಹಾಗೂ ಪುರಸಭೆ ಸದಸ್ಯರು ಪಟ್ಟಣದ ಅಭಿವೃದ್ಧಿಯ ಹಿತದೃಷ್ಠಿಯಿಂದ ಇಲಾಖೆಯ ಕೆಲ ನಿನ್ಯೂತೆ ಹಾಗೂ ಸಲಹೆಗಳನ್ನು ನೀಡಿದ್ದಾರೆ ಅವುಗಳನ್ನೇಲ್ಲವನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸಲು ಕ್ರಮ ಕೈಗೊರ್ಳಲುವುದಾಗಿ ಹೇಳಿದರು.
ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಡಿಯುಡಿಸಿ ಎಇಇ ಅನಿಲಕುಮಾರ ಮುದ್ದಾ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಇತರರು ಇದ್ದರು.

ಸರಕಾರದ ನಿಯಮಾನುಸಾರ ಕಾಮಗಾರಿಗೆ ಬಳಸಬೇಕಾದ ವಸ್ತುಗಳನ್ನು ಸಮರ್ಪಕವಾಗಿ ಬಳಸಿ ನಿಗದಿತ ಸಮಯದೊಳಗಾಗಿ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆಕೊಟ್ಟಿದ್ದೇನೆನಾನು ಯಾವೂದೇ ಕಾರಣಕ್ಕೂ ಯಾವೂದೇ ಗುತ್ತಿಗೆದಾರರಿಗಾಗಲಿ ಅಥವಾ ಅಧಿಕಾರಿಗಳಿಗಾಗಲಿ ಕಾಮಗಾರಿ ನಿಲ್ಲಿಸಿ ಎಂದು ಯಾವತ್ತಿಗೂ ಹೇಳಿಲ್ಲ. ಆ ಗುತ್ತಿಗೆದಾರರು ತಮಗೆ ಲಾಭವಾಗುವುದಿಲ್ಲ ಎಂದು ತಮ್ಮಷ್ಟಕ್ಕೆ ತಾವೇ ಕಾಮಗಾರಿ ನಿಲ್ಲಿಸಿದ್ದಾರೆ ಇದರಲ್ಲಿ ನಮ್ಮ ಯಾವ ಮುಖಂಡರುಆಗಲಿ ಸದಸ್ಯರಾಗಲಿ ಕಾರ್ಯಕರ್ತರಾಗಲಿ ನಿಲ್ಲಿಸಿಲ್ಲ.ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವೆಂದು ಹೇಳಿದ್ದೇನೆ ಅಷ್ಟೇ.

ಶಾಸಕ ಸಿ ಎಸ್ ನಾಡಗೌಡ