ನಿರಾಶ್ರಿತರಿಗೆ ಮಿಡಿದ ಬೇಳೂರು

ಬೆಂಗಳೂರು, ಡಿ. ೭- ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಅವರು, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ ಹಾಗೂ ರಾಜಾ ಮಾರ್ಕೆಟ್‌ಗಳಲ್ಲಿ ರಸ್ತೆಬದಿ ಮಲಗಿದ್ದ ವಸತಿಹೀನರಿಗೆ ಬೆಡ್‌ಶೀಟ್ ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ರಾತ್ರಿಯ ವೇಳೆ ಚಳಿ – ಮಳೆಯನ್ನು ಲೆಕ್ಕಿಸದೆ ರಸ್ತೆಬದಿಯಲ್ಲಿ ಮಲಗುವ ಜನರನ್ನು ಕಂಡು ಅವರ ಜೊತೆ ಸ್ವಲ್ಪ ಸಮಯ ಕಳೆದು ಅವರೊಂದಿಗೆ ಮಾತನಾಡಿದ್ದು, ತಮಗೆ ವಿಶೇಷ ಅನುಭವ ನೀಡಿದೆ ಎಂದು ಅವರು ಹೇಳಿದ್ದಾರೆ.
ಕೇಕ್, ಪುಷ್ಪಗುಚ್ಛ ಹೀಗೆ ಹಣ ಖರ್ಚು ಮಾಡುವ ಬದಲು ಅದೇ ಹಣದಲ್ಲಿ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಅವರು ಮನವಿ ಮಾಡಿದ್ದಾರೆ.