ನಿರಾಶ್ರಿತರಿಗೆ ಮಧ್ಯಾಹ್ನ ಊಟ, ನೀರಿನ ಬಾಟಲ್ ವಿತರಣೆ

ಮೈಸೂರು: ಜೂ.01: ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮ ಸಹಯೋಗದೊಂದಿಗೆ ಮಹರಾಣಿ ಕಾಲೇಜು ಹಳೇ ವಿದ್ಯಾರ್ಥಿನಿಯರ ರಕ್ತಸಂಭಂಧಿ ಬಳಗ ವತಿಯಿಂದ ಮೈಸೂರಿನ ರೈಲ್ವೆ ನಿಲ್ದಾಣ ಚೆಲುವಾಂಬ ಆಸ್ಪತ್ರೆಯ ಬಳಿ ಸಂಕಷ್ಟದಲ್ಲಿರುವ ರೋಗಿಗಳ ಕುಟುಂಬದವರಿಗೆ ಮತ್ತು ನಿರಾಶ್ರಿತರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಆಹಾರ ಪೆÇಟ್ಟಣ ಮತ್ತು ಕುಡಿಯುವ ನೀರಿನ ಬಾಟಲ್ ವಿತರಿಸಲಾಯಿತು.
ಇದೇ ಸಂಧರ್ಭದಲ್ಲಿ ಜೀವಧಾರ ಪದವಿಧರರ ಸಮಿತಿಯ ಕಾರ್ಯದರ್ಶಿ ವರಲಕ್ಷ್ಮಿ .ಆರ್ ಮಾತನಾಡಿ ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ನಿಂದಾಗಿ ದಿನಗೂಲಿ ನೌಕರರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ನೆರವಾಗಲೆಂದು ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಪ್ರತಿನಿತ್ಯ ಸಾವಿರಾರು ಮಂದಿಗೆ ವಿವಿದೆಡೆ ಆಹಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ, ಮಾನವೀಯತೆಯ ಸಂಧರ್ಭದಲ್ಲಿ ಪುಣ್ಯದ ಕೆಲಸ ಇದರಲ್ಲಿ ನಮ್ಮ ಮಹಾರಣಿ ಕಾಲೇಜಿನ ಹಳೇ ವಿದ್ಯಾರ್ಥಿನಿಯರ ರಕ್ತಸಂಬಂಧಿ ಬಳಗ ಭಾಗವಹಿಸಿದೆ.
ಕೊವಿಡ್ 3ನೇ ಅಲೆ ಸಣ್ಣಪುಟ್ಟ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವ ವೈದ್ಯ ತಜ್ಞರ ನಿರ್ದೇಶನವಿದ್ದು ನಮ್ಮ ಮನೆಯಲ್ಲಿರುವ ಹಾಗೂ ಸುತ್ತಮುತ್ತಲಿನ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಬೇಕು, ಹಾಗೂ ಜಿಲ್ಲಾಡಳಿತ ನಗರಪಾಲಿಕೆ ಆರೋಗ್ಯ ಇಲಾಖೆ ಮುಂಜಾಗೃತ ಕ್ರಮ ವಹಿಸಿ ಮಕ್ಕಳ ತಜ್ಞರ ಸಮಿತಿ, ಮಕ್ಕಳ ಅಸ್ಪತ್ರೆಯ ಬಗ್ಗೆ ಗಮನ ವಹಿಸಬೇಕಿದೆ ಎಂದರು.
ಈ ಸಂಧರ್ಭದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ವಿನಯ್ ಬಾಬು, ಜೀವಧಾರ ಪದವೀಧರ ಸಮಿತಿಯ ವರಲಕ್ಷ್ಮಿ ಆರ್, ಬಿಜೆಪಿ ಮುಖಂಡರಾದ ಜಯಶಂಕರ್, ಸಚ್ಚಿನ್, ಯುವ ಮುಖಂಡ ಅಜಯ್ ಶಾಸ್ತ್ರಿ, ರಕ್ತಸಂಬಂಧಿ ಬಳಗದ ಅಧ್ಯಕ್ಷೆಯಾದ ಶೀಲಾ, ಸರಸ್ವತಿ, ಸೌಮ್ಯ, ಸಿಂಧೂ, ಪಲ್ಲವಿ, ರಶ್ಮಿ, ಮುಖಂಡರಾದ ರವಿ, ದೇವರಾಜು, ನಾಗೇಂದ್ರ, ಮಹಲಿಂಗು, ಸುಮನ್, ಮಧುರ, ನಂದಿನಿ ಹಾಗೂ ಇನ್ನಿತರರು ಭಾಗವವಹಿಸಿದ್ದರು.