ದೇವದುರ್ಗ,ಜೂ.೨೩-
ತಾಲೂಕಿನ ಗಬ್ಬೂರಿನ ಸರ್ವೇ ನಂ.೧೦೦೭ ಹಾಗೂ ೯೪೨ರಲ್ಲಿ ಹಲವು ವರ್ಷಗಳಿಂದ ವಾಸಿಸುವ ನಿರಾಶ್ರಿತರಿಗೆ ಪ್ರಭಾವಿಗಳು ದೌರ್ಜನ್ಯ ಮಾಡಿ ಜಾಗಬಿಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಿರಾಶ್ರಿತರು ಗುರುವಾರ ಪ್ರತಿಟನೆ ನಡೆಸಿದರು.
ಸರ್ವೇ ನಂ.೧೦೦೭ರಲ್ಲಿ ೩ಎಕರೆ, ೯೪೨ರಲ್ಲಿ ೨ಎಕರೆ ಸೇರಿ ೫ಎಕರೆಯಲ್ಲಿ ಸುಮಾರು ೩೦ವರ್ಷಗಳಿಂದ ಬಡವರು ಮನೆಕಟ್ಟಿಕೊಂಡು ವಾಸಿಸುತ್ತಿದ್ದು ಸದರಿ ಜಮೀನು ೧೯೯೧-೯೨ನೇ ಸಾಲಿನಲ್ಲಿ ರಾಜ್ಯಪಾಲಕರ ಹೆಸರಿಗೆ ನೋಂದಣಿಯಾಗಿ ಸರ್ಕಾರದಿಂದ ಆಶ್ರಯ ಪ್ಲಾಟ್ ಮಾಡಲಾಗಿದೆ. ಇದರಲ್ಲಿ ಹಲವರು ಮನೆಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಹಿಂದಿನ ಭೂಮಾಲೀಕರು ವಿನಾಕಾರಣ ಇಲ್ಲಿನ ಜನರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಿ ಮನೆತೆರವು ಮಾಡುವುದಾಗಿ ಬೆದರಿಸುತ್ತಿದ್ದಾರೆ. ಇದರಿಂದ ನಿರಾಶ್ರಿತರು ಭಯದಿಂದ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ತಾಲೂಕು ದಂಡಾಧಿಕಾರಿಗಳು ಮಧ್ಯಪ್ರವೇಶ ಮಾಡಿ ನಿರಾಶ್ರಿತರಿಗೆ ಜೀವನ ಭದ್ರತೆ ಒದಗಿಸಬೇಕು. ಸರ್ವೇ ನಂ.೧೦೦೭ರ ೩ಎಕರೆ, ೯೪೨ರ ೨ಎಕರೆ ಸೇರಿ ೫ಎಕರೆ ಜಾಗ ಸರ್ವೇ ಮಾಡಿಸಿ ಹದ್ದುಬಸ್ತು ಮಾಡಬೇಕು. ನಿರಾಶ್ರಿತರ ಮೇಲೆ ದೌರ್ಜನ್ಯ ಮಾಡುತ್ತಿರುವವವರ ವಿರುದ್ಧ ಗೂಂಡಾಕೇಸ್ ದಾಖಲಿಸಿ ಕಾನೂನುಕ್ರಮ ಜರುಗಿಸಬೇಕು. ಸದರಿ ಜಾಗದಲ್ಲಿ ಲೇಔಟ್ ನಿರ್ಮಿಸಿ ಪ್ಲಾಟ್ ಬಡವರಿಗೆ ಹಂಚಿಕೆ ಮಾಡಿ ಗಬ್ಬೂರು ಗ್ರಾಪಂ ಡಿಮಾಂಡ್ ರಜಿಸ್ಟರ್‌ನಲ್ಲಿ ಸೇರಿಸಬೇಕು. ಸದರಿ ಕಾಲನಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಸಿದರು.
ಮುಖಂಡರಾದ ರಾಜಪ್ಪ ಸಿರವಾರಕರ್, ಮರೆಪ್ಪ ಮಲದಕಲ್, ಶಾಂತಕುಮಾರ, ಮಲ್ಲಪ್ಪಗೌಡ, ನರಸಪ್ಪ, ಮಾರ್ತಂಡ, ಲಕ್ಷ್ಮಿ ತಳಗಡ್ಡಿ, ಸರಸ್ವತಿ, ಮುದ್ದಮ್ಮ, ರೇಣುಕಾ, ಗುರುಬಸಮ್ಮ, ಯಲ್ಲಮ್ಮ ಬಿಚ್ಚಾಲಿ, ಲಕ್ಷ್ಮಿ, ಪಾರ್ವತೆಮ್ಮ, ಅನುಸೂಯಮ್ಮ, ಶಿವಮ್ಮ, ಸಿದ್ದಮ್ಮ, ಬೂದೆಮ್ಮ, ಸುಮಂಗಲ, ಬಸಮ್ಮ, ಈರಮ್ಮ ಇತರರಿದ್ದರು.
೨೩-ಡಿವಿಡಿ-೧