ನಿರಾಶ್ರಿತರಿಗೆ ಕೊರೊನಾ ಅರಿವು: ಮಾಸ್ಕ್ ಸ್ಯಾನಿಟೈಸರ್ ವಿತರಣೆ

ಧಾರವಾಡ, ಮೇ 3: ಮಹಾಮಾರಿ ಕೊರೊನಾದ ಅಟ್ಟಹಾಸವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಇದರಿಂದ ನಿರಾಶ್ರಿತರಿಗೆ ತೊಂದರೆ ಆಗಬಾರದು ಎಂಬ ಭಾವನೆಯಿಂದ ಸರಕಾರದ ನಿಯಮದಂತೆ ಅವರ ಜೀವನ ನಿರ್ವಹಣೆ ಮತ್ತು ಕೋವಿಡ್ ಅರಿವು ಕುರಿತು ಜಾಗೃತಿ ಮಾಡಲಾಯಿತು ಎಂದು ರೆಡ್ ಕ್ರಾಸ್ ಸಂಸ್ಥೆಯ ಧಾರವಾಡದ ಸಭಾಪತಿ ಡಾ.ಕವನ ದೇಶಪಾಂಡೆ ಹೇಳಿದರು.
ಅವರು ಧಾರವಾಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ರಾಯಾಪೂರದ ನಿರಾಶ್ರಿತರ ಕೇಂದ್ರದಲ್ಲಿಯ ನಿರಾಶ್ರಿತರಿಗೆ ಕೋವಿಡನಿಂದ ರಕ್ಷಣೆ ಮತ್ತು ಮಾಸ್ಕ, ಸ್ಯಾನಿಟೈಜರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಲಾಕ್‍ಡೌನ್‍ನಿಂದ ಅಲ್ಲಿ ಇಲ್ಲಿ ಊಟ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದ ನಿರಾಶ್ರಿತರಿಗೆ ಊಟ ಇಲ್ಲದೆ ಪರದಾಡುವುದನ್ನು ಕಂಡ ರೆಡ್ ಕ್ರಾಸ್ ಸಂಸ್ಥೆಯು ನಿರಾಶ್ರಿತರ ಕೇಂದ್ರದಲ್ಲಿ ಅವರಿಗೆ ವ್ಯವಸ್ಥೆ ಮಾಡಿದ್ದಲ್ಲದೆ ಉತ್ತಮ ಆರೋಗ್ಯದ ರಕ್ಷಣೆ ಮಾಡಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು, ಸಾಹಿತಿಗಳಾದ ಮಾರ್ತಾಂಡಪ್ಪ ಎಮ್. ಕತ್ತಿ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯ ಜೊತೆಗೂಡಿ ಕಳೆದ ವರ್ಷ ನಿರಾಶ್ರಿತರನ್ನು ಗುರುತಿಸಿ ಊಟದ ಪೊಟ್ಟಣ ವಿತರಣೆ ಮಾಡಲಾಗಿತು. ಅದರ ಜೊತಗೆ ಈ ಬಾರಿ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಜರ ವಿತರಿಸಿ ಜಾಗೃತಿಯ ಅಭಿಯಾನ ಮಾಡುತ್ತಿರುವುದು ನಮ್ಮ ರಕ್ಷಣೆ ನಮ್ಮ ಹೊಣೆಯ ಜೋತೆಗೆ ಇತರಿಗೂ ನಿಮ್ಮಿಂದ ತೊಂದರೆಯಾಗದಿರಲಿ ಎಂದು ಹೇಳಿದರು.
ಡಾ. ಉಮೇಶ ಹಳ್ಳಿಕೇರಿ ಮಾತನಾಡಿ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ನಿಯಮ ಉತ್ತಮವಾಗಿದ್ದು ಅದಕ್ಕೆ ಸಹಕಾರ ನೀಡುವ ಜೊತೆಗೆ ಸಾಮಾಜಿಕ ಕಳಕಳಿಯಲ್ಲಿ ಈ ಸೇವೆ ಮಾಡಿರುವುದಾಗಿ ಹಾಗೂ ಈ ಸಮಾಜಸೇವೆಗೆ ಎಲ್ಲರೂ ಸಹ ಸಹಕಾರ ನೀಡಿದ್ದಾರೆ. ಅವರಿಗೆ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಡಾ. ಧೀರಜ ವೀರನಗೌಡರ, ನಿರಾಶ್ರಿತರ ಕೇಂದ್ರದ ಅಧಿಕ್ಷಕರಾದ ಪ್ರಿಯದರ್ಶಿನಿ ಹಿರೇಮಠ, ಸೈಮನ್ ರಾಜ, ಪ್ರೇಮಾನಂದ ಶಿಂಧೆ ಇದ್ದರು. ಈ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ನಿರಾಶ್ರಿತರಿಗೆ ಮಾಸ್ಕ, ಸ್ಯಾನಿಟೈಜರಗಳನ್ನು ಅವರಿದ್ದಲೇ ವಿತರಿಸಲು ಸೂಚಿಸಲಾಯಿತು.