ನಿರಾಶ್ರಿತರಿಗೆ ಆಹಾರ ವಿತರಣೆ

ಹುಬ್ಬಳ್ಳಿ,ಜೂ1: ಎಸ್ ಎಸ್ ಕೆ ಶ್ರೀ ಸಹಸ್ರಾರ್ಜುನ ಅಖಂಡ ಜ್ಯೋತಿ ಸಮಿತಿ* ವತಿಯಿಂದ ಅಧ್ಯಕ್ಷರಾದ ಲಕ್ಷ್ಮಣ ದಲಬಂಜನ್* ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ೀ ಜಗದೀಶ್ ಶೆಟ್ಟರ್* ಅವರ ಅಭಿಮಾನಿ ಬಳಗದ ವತಿಯಿಂದ ಕರೋನಾ ವೈರಸ್ಸಿನಿಂದ ನಗರದಲ್ಲಿ ಹೊರ ಊರಿನಿಂದ ಬಂದ ಸುಮಾರು 500 ಕ್ಕಿಂತ ಅಧಿಕ ನಿರಾಶ್ರಿತ ಜನರಿಗೆ *ಪಲಾವ್, *ನೀರಿನ ಪಾಕೆಟ್* ವಿತರಣಾ ಕಾರ್ಯಕ್ರಮವನ್ನು ನಗರದ ಕೆ,ಎಂ,ಸಿ ಆಸ್ಪತ್ರೆ ಚನ್ನಮ್ಮ ವೃತ್ತ, ರೈಲ್ವೆ ಸ್ಟೇಷನ್ ಮತ್ತು ಚಿಟಗುಪ್ಪಿ ಆಸ್ಪತ್ರೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ವರ್ಲ್ಡ್ ಸ್ಕ್ವೇರ್ ಇದರ ಮಾಲಕರಾದ ಯೊಗೇಶ ಹಬೀಬ್ ನೇತೃತ್ವದಲ್ಲಿ ಉಚಿತ ಆಕ್ಸಿಜನ್ ನೀಡುವ ವಾಹನಕ್ಕೆ ಚಾಲನೆ ನೀಡಲಾಯಿತು.
ಸೇವಾ ಕಾರ್ಯಕ್ರಮದ ಉದ್ಘಾಟನೆಯನ್ನು ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರು ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯ ಅಧ್ಯಕ್ಷ ಅರವಿಂದ ಬೆಲ್ಲದ ಅವರು ನೆರವೇರಿಸಿದರು.
ಸೇವಾ ಕಾರ್ಯದ ನೇತೃತ್ವವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ರಾಜು ವಿ ಜರತಾರಘರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಮಹಾಪೌರg ಡಿ ಕೆ ಚವಾಣ ಸಮಿತಿಯ ಸದಸ್ಯರಾದ ವಿಜಯ ಮೆಹರವಾಡೆ,ಮಂಜುನಾಥ್ ದಲಬಂಜನ್, ಸದು ಕಬಾಡೆ , ಮಿಥುನ್ ಚವಾಣ್, ಅಮೃತ್ ದಾನಿ, ದೀಪಕ್ ಜಿತೂರಿ, ಕಿತ್ತು ಲದವಾ,ರಾಘು ಪವಾರ್,ವಿನಾಯಕ್ ಮೆಹರ್ವಾಡೆ, ನಾಗರಾಜ್ ಜರತಾರಘರ, ಅಕ್ಷಯ್ ಖೋಡೆ,ನಾರಾಯಣ ಭುರೆ,ಪ್ರವೀಣ್ ಹಬೀಬ್, ಚಂದನ್ ಬಂಕಾಪೂರ, ದೀಪಕ್ ಭಾಂಡಗೆ, ಸಿದ್ಧಾರ್ಥ್ ಜರತಾರಘರ , ಕೇಶವ್ ಹಬೀಬ್, ಪ್ರಥಮ್ ಖೋಡೆ , ನಾಗರಾಜ್ ಮಿಸ್ಕಿನ್ ,ಶ್ರೀಧರ್ ಭುರೆ ,ಸುರಜ ಜರತಾರಘರ, ಹಬೀಬ್ , ದೀಪಕ್ ಪವಾರ್ ಹಾಗೂ ಅನೇಕ ನಮ್ಮ ತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.