ನಿರಾಶೆದಾಯಕ ಬಜೆಟ್:ಬಬಲೇಶ್ವರ

ವಿಜಯಪುರ:ಫೆ.2:ಹೊಸ ಸಂಸತ್ ಭವನದಲ್ಲಿ ಮಂಡನೆಯಾಗಿರುವ ಬಜೆಟ್ ನಲ್ಲಿ ಹೊಸತನವನ್ನು ನಿರೀಕ್ಷಿಸಿದ್ದ ಸಮಸ್ತ ಭಾರತೀಯರಿಗೆ ನಿರಾಸೆಯಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.
ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಚುನಾವಣೆ ಭಿತ್ತಿಪತ್ರದಂತೆ ಈ ಬಜೆಟ್ ಭಾಸವಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಿವಿಗೆ ಇಂಪಾದ ಸೊಗಸಾದ ಇಂಗ್ಲಿಷಿವಲ್ಲಿ ಬಜೆಟ್‍ನ್ನು ಮಂಡಿಸಿದ್ದಾರೆ. ಅದು ಕೇಳಲು ಇಂಪಾಗಿದೆ ಹೊರತು ಜನರ ಬದುಕು ಕಟ್ಟಿಕೊಡುವಲ್ಲಿ ವಿಫಲವಾಗಿರುವುದು ವಿಫಲತೆಯತ್ತಲೇ ಸಾಗಿರುವುದು ದೇಶದ ಜನತೆಯ ದೌರ್ಭಾಗ್ಯ ಎಂದು ತಿಳಿಸಿದ್ದಾರೆ.