ನಿರಾತಂಕದ ಅಧಿಕಾರಿಗಳ ವರ್ಗಾವಣೆ : ಶಾಸಕರ ಪತ್ರಕ್ಕಿಲ್ಲಾ ಕಿಮ್ಮತ್ತು ವರ್ಗಾವಣೆಯ ದಂದೆಗೆ ಮಾಜಿ ಶಾಸಕರೇ ಅಂತಿಮ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಠಿ.


ಅನಂತ ಜೋಶಿ
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜು 22: ಸರ್ಕಾರ ಬದಲಾಗುತ್ತಿದ್ದಂತೆಯೇ ಅಧಿಕಾರಿಗಳ ವರ್ಗಾವಣೆ ಸಹಜ, ಹಾಲಿ ಶಾಸಕರ ಪ್ರಭಾವ ಸಾಮಾನ್ಯ ಆದರೆ ಕಾಂಗ್ರೆಸ್ ಸರ್ಕಾರದ ಈ ಬದಲಾವಣೆಯಲ್ಲಿ ಮಾಜಿ ಶಾಸಕರ ಪ್ರಭಾವವೇ ಹೆಚ್ಚಾಗಿ ಹಾಲಿ ಶಾಸಕರಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿರುವುದು ಇದೀಗ ಬೆಳಕಿಗೆ ಬಂದಿದ್ದು ಅಧಿಕಾರಿಗಳ ವರ್ಗ ಇವರಾರ ಗಮನಕ್ಕೂ ಬಾರದೆ ನಿರಾತಂಕವಾಗಿ ನಡೆದಿದೆ.
ಸದ್ಯ ಶಾಸಕ ಹೆಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ ಸೇರಿದಂತೆ ಯಾವುದೆ ಶಾಸಕರು ಪತ್ರನೀಡಿದರು ಕ್ಯಾರೆ ಎನ್ನದೆ ನಿರಾತಂಕವಾಗಿ ವರ್ಗಾವಣೆಯಲ್ಲಿ ತೊಡಗಿರುವ ಶಾಸಕ ಭೀಮಾನಾಯ್ಕ್ ಎಲ್ಲಾ ಹಂತದ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯ ಮಂತ್ರಿಗಳ ಕಚೇರಿಯ ಸಹಾಯದಿಂದ ನಡೆಸುತ್ತಿರುವುದು ಹೊಸಪೇಟೆ ಉಪವಿಭಾಗದ ಸಹಾಯಕ ನಿಬಂಧಕ ಬಿರೇಂದ್ರ ವರ್ಗಾವಣೆಯಿಂದ ಬಹಿರಂಗವಾಗಿದೆ.
ಈಗಾಗಲೇ ವರ್ಗಾವಣೆಯಾಗಿ ಹುದ್ಧೆಗುರುತಿಸಿಕೊಳ್ಳುವಲ್ಲಿ ವಿಫಲರಾಗಿರುವ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ವರ್ಗಾವಣೆಗೊಂಡು ಬಿರೇಂದ್ರ, ವರ್ಗಾವಣೆಯ ಅಂಚಿನಲ್ಲಿರುವ ಡಿವೈಎಸ್‍ಪಿ ವಿಶ್ವನಾಥರಾವ್ ಕುಲಕರ್ಣಿ,  ಹೀಗೆ ಪಟ್ಟಿ ಬೆಳೆಯುತ್ತಿದ್ದು ಜಿಲ್ಲಾ ಕುಷ್ಟರೋಗ ನಿಮೂರ್ಲನಾಧಿಕಾರಿಗಳು ಸೇರಿದಂತೆ ಅನೇಕರು ಈ ಸಾಲಿನಲ್ಲಿದ್ದು   ಈ ಎಲ್ಲಾ ವರ್ಗಾವಣೆಯ ಹಿಂದೆ ಹಾಲಿ ಶಾಸಕ ಹೆಚ್.ಆರ್.ಗವಿಯಪ್ಪ ಡಾ.ಎನ್.ಟಿ.ಶ್ರೀನಿವಾಸ ರವರ ಪತ್ರಕ್ಕೆ ಕಿಂಚಿತ್ತು ಕಿಮ್ಮತ್ತಿಲ್ಲದಂತೆ ವರ್ಗಾವಣೆ ನಿರಾತಂಕವಾಗಿ ಮಾಜಿ ಶಾಸಕ ಭೀಮಾನಾಯ್ಕ್ ಕೈವಾಡ ಬಯಲಾಗಿದೆ ಪ್ರತಿಪಕ್ಷಗಳು ಆರೋಪಿಸಿದಂತೆ ವರ್ಗಾವಣೆ ದಂದೆ ಎನ್ನುವುದಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎನ್ನುವುದು ಬಹಿರಂಗವಾದಂತಾಗಿದೆ. 
ಜೂನ್ 1 ರಿಂದ 15 ದಿನಗಳ ಕಾಲಾವಕಾಶ ನೀಡಿ ಇಲಾಖೆಯ ಒಟ್ಟು ಸಿಬ್ಬಂದಿಯನ್ನು ಆಯಾ ವೃಂದ ಜೇಷ್ಠತೆಯಲ್ಲಿ ಶೇ 6 ದಾಟದಂತೆ ವರ್ಗಾವಣೆ ಮಡಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿತ್ತು. ಅದರಂತೆ ಕೆಲ ಹಂತದ ಇಲಾಖಾಧಿಕಾರಿಗಳು ವರ್ಗಾವಣೆಯಾಗಿದ್ದು ಇನ್ನು ಕೆಲ ಹಂತದ ಅಧಿಕಾರಿಗಳ ವರ್ಗಾವಣೆ ಬಾಕಿ ಇದೆ ಈ ಮದ್ಯಯೇ ತೆರೆ ಮರೆಯಲ್ಲಿ ದೊಡ್ಡ ಹಂತದ ವರ್ಗಾವಣೆಗಳು ನಡೆದಿದ್ದು ಬಹುತೇಕ ಮಾಜಿ ಶಾಸಕ ಭೀಮಾನಾಯ್ಕ್ ಕೆಎಂಎಫ್ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವುದರ ಜೊತೆ ಕೆಲ ಹಂತದ ಪ್ರಮುಖ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರೊಂದಿಗೆ ಇರುವ ಸ್ನೇಹವನ್ನು ಬಳಸಿಕೊಂಡು ಬದಲಾಯಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಅನೇಕ ಅಧಿಕಾರಿಗಳು ಪಕ್ಷಾತೀತವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಖ್ಯಾತರಾಗಿದ್ದರೂ,  ಅವಧಿ ಇದ್ದರೂ ವರ್ಗಾವಣೆಗೊಂಡಿರುವುದು ಪಕ್ಷ, ಪ್ರತಿಪಕ್ಷಗಳಂತೆ ಇಲಾಖೆಯ ನೌಕರರು ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.   
@12bc = ಮಾಜಿ ಶಾಸಕ ಭೀಮಾನಾಯ್ಕ್ ಉಚ್ಛಾಟನೆಗೆ ಒತ್ತಾಯ:
ಮಾಜಿ ಶಾಸಕ ಭೀಮಾನಾಯ್ಕ್ ವರ್ತನೆಯಿಂದ ಶಾಸಕರು, ಪಕ್ಷದ ಕಾರ್ಯಕರ್ತರು ಸಿಡಿದಿದ್ದಾರೆ ಎನ್ನಲಾಗುತ್ತಿದ್ದು ಜಿಲ್ಲಾಧ್ಯಕ್ಷರು ಪ್ರಮುಖ ನಾಯರು ಇರುವ ವಾಟ್ಸ್‍ಫ್ ಗ್ರೂಪ್‍ಗಳಲ್ಲಿ ಭೀಮಾನಾಯ್ಕ್ ತಮ್ಮ ಅಹಂಕಾರದಿಂದಲೇ ಈ ಭಾರಿ ಚುನಾವಣೆಯಲ್ಲಿ ಸೋತಿದ್ದರೂ ಅಹಂಕಾರ, ಭ್ರಷ್ಟಾಚಾರ ದುರಾಡಳಿತ ಮುಂದುವರೆಸಿದ್ದಾರೆ, ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿರುವ ಪಕ್ಷದ ಘನತೆ ಗೌರವಗಳಿಗೆ ಅಗೌರವ ಮಾಡುತ್ತಿದ್ದು ಅಮಾನತು ಮಾಡುವಂತೆ ಸಂದೇಶಗಳನ್ನು ಹಾಕುವ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶ ತೋರುತ್ತಿದ್ದು ಗಮನಿಸಬೇಕಾದ ಅಂಶವಾಗಿದೆ.
ಕಾರ್ಯಕರ್ತರ ಶ್ರಮ ಹಾಗೂ ಪಕ್ಷದ ಪ್ರನಾಳಿಕೆಯ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದಿದ್ದು ಜನತೆಯ ಅವಶ್ಯಕತೆಯಂತೆ ಕಾರ್ಯನಿರ್ವಹಿಸಬೇಕಾಗಿದೆ. ಪಕ್ಷದ ಕಾರ್ಯಕರ್ತರು ನೋವಾಗದಂತೆ ಪಕ್ಷ ಕೆಲಸ ನಿರ್ವಹಿಸಬೇಕು ದೂರಗಳನ್ನು ಯಾವುದೆ ಕಾರ್ಯಕರ್ತರು, ಯಾರ ವಿರುದ್ದವೇ ನೀಡಿದರು ಮಾತನಾಡುವೆ
ಶಿರಾಜ್‍ಶೇಖ್
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ವಿಜಯನಗರ.
ಕಾಂಗ್ರೆಸ್ ಪಕ್ಷ ಬೇಕು ಎಂದು ಅಧಿಕಾರಕ್ಕೆ ತಂದಿದ್ದಲ್ಲಾ, ಬಿಜೆಪಿಯ ಭ್ರಷ್ಟತೆ ಸಾಕಿದೆ ಎಂದು ಹಾಲಿನೋ, ಮಾಜಿನೋ ಇಂತಹ ಬಹಿರಂಗ ಭ್ರಷ್ಟಾಚಾರಕ್ಕೆ ಮುಂದಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದರಿಂದ ಬಿಜೆಪಿಯಂತೆ ಕಾಂಗ್ರೆಸ್ ಸಹ ಮುಂದಿನ ದಿನಗಳಲ್ಲಿ ತಿರಸ್ಕಾರಕ್ಕೆ ಗುರಿಯಾಗಬೇಕಾಗುತ್ತದೆ.
ಕೊಟ್ರೇಶ್
ಮತದಾರ
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಬದಲಾದಂತ ಬದಲಾವಣೆ ಸಹಜ ಸ್ಥಳೀಯ ಶಾಸಕರ ಅನುಮತಿಯಂತೆಯೇ ಅಧಿಕಾರಿಗಳ ವರ್ಗಾವಣೆ ಸಹಜ ನಮ್ಮ ವಿನಂತಿಯನ್ನು ಮೀರಿ ಕಾಣದ ಕೈಗಳ ಪ್ರಭಾವ ಬದಲಾವಣೆಗೆ ಕಾರಣವಾಗಿದೆ ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚೆರ್ಚಿಸುವೆ
ಹೆಚ್.ಆರ್.ಗವಿಯಪ್ಪ
ಶಾಸಕರು ವಿಜಯನಗರ ವಿಧಾನಸಭಾ ಕ್ಷೇತ್ರ