ನಿರಾಣಿಗೆ ಸಚಿವ ಸ್ಥಾನ ಅಭಿಮಾನಿಗಳಿಂದ ವಿಜಯೋತ್ಸವ

ಮುದ್ದೇಬಿಹಾಳ:ಜ.14: ಬೀಳಗಿ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಮುರುಗೇಶ ನಿರಾಣಿಯವರ ಸಹನೆ, ಮತ್ತು ತಾಳ್ಮೇ ಹಾಗೂ ಸೌಮ್ಯ ಸ್ವಭಾವ ಸೇರಿದಂತೆ ವಿವಿಧ ಸಾಮಾಜಿಕ ಸೇವೆಯನ್ನು ಗುರ್ತಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬುಧುವಾರ ಮುರುಗೇಶ ನಿರಾಣಿಯವರನ್ನು ಕ್ಯಾಬನೇಟ್ ದರ್ಜೆಯ ಸಚಿವ ಸ್ಥಾನ ನೀಡುವ ಮೂಲಕ ಗೌರವಿಸಿದ್ದಕ್ಕೆ ಮುದ್ದೇಬಿಹಾಳ ಬಿಜೆಪಿ ಮಂಡಲದ ಮುಖಂಡರರಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಬಿಜೆಪಿ ಹಿರಿಯ ಮುಖಂಡ ಶಿವಶಂಕರಗೌಡ ಹಿರೇಗೌಡರ ಹೇಳಿದರು.

ಪಟ್ಟಣದ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಮುರುಗೇಶ ನಿರಾಣಿಯವರು ಸಚಿವರಾಗಿ ಬುಧುವಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೇಲೆಯಲ್ಲಿ ತಾಲೂಕಾ ಬಿಜೆಪಿ ಮಂಡಲದಿಂದ ಹಾಗೂ ನಿರಾಣಿ ಅಭಿಮಾನಿ ಬಳಗದಿಂದ ಸಂಜೆ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು.

ನಿರಾಣಿಯವರು ಇಡಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಹಾನಿಯಾಗಿ ನಿಂತಹೋಗಿ ತೀವೃ ತೊಂದರೆ ಅನುಭವಿಸುತ್ತಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳನ್ನು ಪುನಃ ಸ್ಥಾಪಿಸಿ ಸಾವಿರಾರು ಜನ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ಸಮರ್ಪಕವಾಗಿ ನಿಭಾಯಿಸುವ ಮೂಲಕ ಔದ್ಯೋಗಿಕ ಕ್ರಾಂತಿ ಸಾಧಿಸಿದ್ದಾರೆ ಮಾತ್ರವಲ್ಲದೇ ಬ್ರಹತ್ ಉದ್ಯಮಿಗಳಾಗಿ ಆಯಾ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಏಕೈಕ ರಾಜಕಾರಿಣಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಮಲಕೇಂದ್ರಾಯಗೌಡ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪೂರ, ಮುಖಂಡರಾದ ಗೀರಿಶಗೌಡ ಪಾಟೀಲ, ರಾಜು ಬಳ್ಳೋಳ್ಳಿ, ಅಶೋಕ ರಾಠೋಡ, ಹಣಮಂತ ನಲವಡೆ, ರಾಜು ಹೊಳಿ, ಸಂಗಣ್ಣ ಹತ್ತಿ, ಶ್ರೀಶೈಲ ದೊಡಮನಿ, ಮಹಾಂತೇಶ ನೀಡಗುಂದಿ, ರಾಜು ಮ್ಯಾಗೇರಿ, ವಿನೋದ ಹಿರೇಗೌಡರ ಸೇರಿದಂತೆ ಹಲವರು ಇದ್ದರು.