ನಿರಂತರ 7ತಾಸು ವಿದ್ಯುತ್ ಸರಬರಾಜಿಗೆ ರೈತರ ಆಗ್ರಹ


ಸಂಜೆವಾಣಿ ವಾರ್ತೆ
ಸಂಡೂರು:ಅ: 19: ಸರ್ಕಾರ 7 ತಾಸು ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದ್ದು ಅದರೆ ರೈತರಿಗೆ ಕೇವಲ 2 ತಾಸು ಮಾತ್ರ ಕಣ್ಣಾಮುಚ್ಚಾಲೆ ಎಂತೆ ನೀಡುತ್ತಿರುವುದು ಎಷ್ಟು ಸರಿ ತಕ್ಷಣ ರೈತರಿಗೆ ನಿಗದಿಯಂತೆ 7 ತಾಸು ವಿದ್ಯುತ್ ಪೂರೈಸುವ ಮೂಲಕ ಬಿತ್ತಿದ ಬೆಳೆಗಳನ್ನು ಉಳಿಸಬೇಕು ರೈತರನ್ನು ರಕ್ಷಿಸಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಚಂದ್ರಶೇಖರ ಮೇಟಿ ಒತ್ತಾಯಿಸಿದರು.
ಅವರು ಪಟ್ಟಣದ ಜೆಸ್ಕಾಂ ಕಛೇರಿಯ ಅವರಣದಲ್ಲಿ ತಾಲೂಕಿನ ಯಶವಂತನಗರ, ಧರ್ಮಾಪುರ, ದೌಲತ್‍ಪುರ, ಭುಜಂಗನಗರ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿ ಮಳೆಬಾರದೆ ರೈತರು ಬಿತ್ತಿದ ಬೆಳೆ ಒಣಗಿಹೋಗುತ್ತಿವೆ, ಪಂಪಸೆಟ್ ಇರುವ ರೈತರು ಹೇಗಾದರೂ ಮಾಡಿ ನೀಡು ಬಿಡಬೇಕೆಂದು ಪ್ರಯತ್ನಿಸಿದರೆ ವಿದ್ಯುತ್ ನಿರಂತರವಾಗಿ ನಿಲುಗಡೆ ಮಾಡುತ್ತಿದ್ದಾರೆ, ಅಲ್ಲದೆ ತೋಟಗಾರಿಕೆ ಬೆಳಗಳಾದ ಅಡಿಕೆ, ಬಾಳೆ, ದಾಳಿಂಬೆ ಬೆಳೆಗಳಿಗೆ ನೀರು ಬಿಡಲೂ ಸಹ ವಿದ್ಯುತ್ ಇಲ್ಲದ ಕಾರಣ ರೈತರು ದಿಕ್ಕು ಗಾಣದಾಗಿದ್ದಾರೆ, ಲಕ್ಷಾಂತರ ಬಂಡವಾಳವನ್ನು ಸಾಲಶೂಲಮಾಡಿ ಹಾಕಿದ್ದಾರೆ, ಈಗ ವಿದ್ಯುತ್ ನಿಲುಗಡೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿಯನ್ನು ಜೆಸ್ಕಾಂ ಉಂಟುಮಾಡುತ್ತಿದ್ದು ರೈತರೊಂದಿಗೆ ಕಣ್ಣಾಮುಚ್ಚಾಲೆ ಹಾಡುತ್ತಿದ್ದಾರೆ, ಅಲ್ಲದೆ ತಿಂಗಳಲ್ಲಿ ಕನಿಷ್ಠವೆಂದರೂ 4 ರಿಂದ 5 ಬಾರಿ ಲೈನ್ ತೆಗೆಯುತ್ತಿದ್ದಾರೆ, ಖಾಸಗಿ ಕಂಪನಿಗಳಿಗೆ ಲೆಕ್ಕಕ್ಕೆ ಇಲ್ಲದ ರೀತಿಯಲ್ಲಿ ಅಕ್ರಮವಾಗಿಯೂ ಸಹ ವಿದ್ಯುತ್ ಪೂರೈಕೆಯಾಗುತ್ತಿರುವುದು ಕಂಡು ಬರುತ್ತಿದೆ, ರೈತರಿಗೆ ಎಳೆದ ಲೈನಿನಲ್ಲಿಯೇ ಕತ್ತರಿಸಿ ಕಂಪನಿಗಳಿಗೆ ನೀಡುತ್ತಿರುವುದು ಕಂಡುಬರುತ್ತಿದ್ದು, ರೈತರು ಬಿತ್ತಿದ ಬೆಳೆಗಳಿಗೆ ನೀರುಣಿಸಲು ಸಹ ಅಗದಂತೆ ಮಾಡುತ್ತಿರುವುದು ಅಧಿಕಾರಿಗಳ ವ್ಯವಸ್ಥಿತವಾಗಿ ರೈತರನ್ನು ಬೀದಿಪಾಲು ಮಾಡುತ್ತಿದ್ದಾರೆ ಅದ್ದರಿಂದ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ನಿರಂತರವಾಗಿ 7 ತಾಸು ವಿದ್ಯುತ್ ಪೂರೈಸಬೇಕು ಇಲ್ಲವಾದಲ್ಲಿ ಇಡೀ ತಾಲೂಕಿನಾದ್ಯಂತ ರೈತರು ಮುಷ್ಕರ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಎಲ್.ಕೆ. ನಾಯ್ಡು ಮಾತನಾಡಿ ಮಳೆ ಇಲ್ಲದಾಗಿದೆ, ಜೊತೆಗೆ ವಿದ್ಯುತ್ ಸಹ ನೀಡದೇ ಇರುವುದು ರೈತರಿಗೆ ಬಿತ್ತಿದ ಬೆಳೆ ಕೈಗೆ ಸಿಗದಂತಹ ದುಸ್ಥಿತಿ ಉಂಟಾಗುತ್ತಿದೆ ಇದಕ್ಕೆ ಕಾರಣ ವಿದ್ಯುತ್ ಕಣ್ಣಾಮುಚ್ಚಾಲೆ, ಒಂದು ಕಡೆ ಮಾನ್ಸೂನ್ ಕೈಕೊಟ್ಟಿದೆ, ಮತ್ತೊಂದು ಕಡೆ ಜೆಸ್ಕಾಂ ಕೃತಕವಾಗಿ ಕೈಕೊಡುತ್ತಿದ್ದಾರೆ, ಇದಕ್ಕೆ ಕಾರಣ ಅಧಿಕಾರಿಗಳ ದಿವ್ಯ ನಿರ್ಲಕ್ಷತ್ಯೆ ಅದ್ದರಿಂದ ತಕ್ಷಣ ಕ್ರಮವಹಿಸಿ ನಿಗದಿಯಂತೆ 7 ತಾಸು ವಿದ್ಯುತ್ ಪೂರೈಸಿ ರೈತರನ್ನು ರಕ್ಷಿಸಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾದ ಹೆಚ್.ಹನುಮಂತಪ್ಪ, ಹೆಚ್.ಕುಮಾರಸ್ವಾಮಿ, ಯು.ವಿ.ಯೋಗೀಶ್, ಸೋಮಶೇಖರರಡ್ಡಿ, ಗೋಪಿನಾಥ, ಕೆ.ಬಸವರಾಜ, ಶಿವಮೂರ್ತಿ, ಕುಮಾರಸ್ವಾಮಿ ಮಂದಾಲ್, ಹಂಪಣ್ಣ, ರಮೇಶ್, ನಿಂಗಪ್ಪ, ಬಿ.ಕುಮಾರಸ್ವಾಮಿ, ಶಂಕರ್ ರಾವ್, ಹಾಗೂ ತಾಲೂಕಿನ ಭುಜಂಗನಗರ, ಯಶವಂತನಗರ, ನಂದಿಹಳ್ಳಿ, ರಣಜಿತ್‍ಪುರ, ಧರ್ಮಾಪುರ ಗ್ರಾಮಗಳ ರೈತರು ಸೇರಿ ಜೆಸ್ಕಾಂ ಅಧಿಕಾರಿ ರಾಜಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು, ಅಲ್ಲದೆ ಪಿ.ಎಸ್.ಐ. ವೀರೇಶ್ ಅವರು ಉಪಸ್ಥಿತರಿದ್ದರು,

One attachment • Scanned by Gmail