ನಿರಂತರ ಸಮಾಜ ಸೇವೆಯಲ್ಲಿ ನಮ್ಮ ಎಸ್.ವಿ.ಕೆ ಕುಟುಂಬ: ಶ್ಯಾಮ್‌ರಾಜ್‌ಸಿಂ

ಗ್ಸಂಜೆವಾಣಿ ವಾರ್ತೆ,ಮರಿಯಮ್ಮನಹಳ್ಳಿ, ಆ.29: ನಮ್ಮ ಎಸ್.ವಿ.ಕೆ ಕುಟುಂಬ ನಿರಂತರ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಭವಿಷ್ಯದಲ್ಲೂ ಸೇವೆಗೆ ಬದ್ಧ ಎಂದು ಗಣಿ ಉದ್ಯಮಿ ಹಾಗೂ ಸಮಾಜ ಸೇವಕ ಶ್ಯಾಮ್ ರಾಜ್ ಸಿಂಗ್ ಹೇಳಿದರು.ಅವರು  ಮರಿಯಮ್ಮನಹಳ್ಳಿಗೆ ಸಮೀಪದ ದೇವಲಾಪುರ ಗ್ರಾಮದಲ್ಲಿನ ಗಾದಿಲಿಂಗ ಬಸವೇಶ್ವರ ದೇವಸ್ಥಾನದ ಕಾಂಪೌಂಡ್  ಉದ್ಘಾಟಿಸಿ ಮಾತನಾಡಿದರು.ಕಳೆದ ಕೆಲ ದಿನಗಳ ಹಿಂದೆ ದೇವಲಾಪುರ ಗ್ರಾಮದ ಗ್ರಾಮಸ್ಥರು ಗಾದ್ರಿಲಿಂಗೇಶ್ವರ ದೇವಸ್ಥಾನಕ್ಕೆ ಕಾಂಪೌಂಡ್ ನಿರ್ಮಿಸಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡುವಂತೆ ಮನವಿ ಮಾಡಿದ್ದರು. ಅವರ ಬೇಡಿಕೆಯಂತೆ ದೇವಸ್ಥಾನಕ್ಕೆ ಕಾಂಪೌಂಡ್ ನಿರ್ಮಿಸಿದ್ದೇವೆ. ಅಲ್ಲದೇ ನಮ್ಮ ಕುಟುಂಬ ಮೊದಲಿನಿಂದಲೂ ಗಾದಿ ಲಿಂಗೇಶ್ವರ ದೇವಸ್ಥಾನಕ್ಕೆ ಸೇವೆ ಮಾಡುತ್ತಾ ಬಂದಿದ್ದು, ಜೊತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೂ ಅನುಕೂಲವಾಗುವ ದೃಷ್ಠಿಯಿಂದ ಕಾಂಪೌಂಡ್ ನಿರ್ಮಾಣ ಮಾಡಿದ್ದೇವೆ ಎಂದರು. ಇದೇ ವೇಳೆ ದೇವಲಾಪುರದ ಗ್ರಾಮಸ್ಥರು ಶ್ಯಾಮ್ ರಾಜ್ ಸಿಂಗ್‌ರನ್ನು ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ರಂಜಿತಾ ಸಿಂಗ್, ಶ್ಯಾಮ್ ರಾಜ್ ಸಿಂಗ್ ಆಪ್ತ ಸಹಾಯಕ ಸಿದ್ದಪ್ಪ, ದೇವಸ್ಥಾನದ ಅರ್ಚಕ ಮೇಘಾನಾಯ್ಕ್, ಗ್ರಾ.ಪಂ ಸದಸ್ಯರಾದ ಉಪ್ಪಾರ ವೆಂಕಟೇಶ್, ಕುರುಬರ ರಮೇಶ್, ಮುಖಂಡರಾದ ಸೆರೆಗಾರ ನಾಗಪ್ಪ, ಹಿರೇಮನಿ ಪರಶುರಾಮ,  ಉಪ್ಪಾರ ಕೊಟ್ರೇಶ್, ಯು ಪಂಪಾಪತಿ, ಹೆಚ್.ಎಂ.ಸಿದ್ದೇಶ್, ಅಂಬರೀಶ್, ರಾಜೇಶ್, ದುರುಗೇಶ್ ಹಾಗೂ ಇತರರು ಇದ್ದರು.