ನಿರಂತರ ವಿದ್ಯುತ್ ಪೂರೈಕೆಗೆ ಗೋರಸೇನಾ ಆಗ್ರಹ

ಔರಾದ : ಸೆ.4: ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಗೋರಸೇನಾ ಸಂಘಟನೆ ಕಾರ್ಯಕರ್ತರು ತಹಸೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ತಾಲ್ಲುಕಿನಲ್ಲಿ ಈ ವರ್ಷ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿ ರೈತರ ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಜೂನ್ ತಿಂಗಳಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದೆ. ಅಗಷ್ಟ ತಿಂಗಳಿನಲ್ಲಿ ಮಳೆ ಇಲ್ಲದ ಕಾರಣ ಬೆಳೆ ಒಣಗಿ ಹೋಗುತ್ತಿದೆ. ರೈತರಿಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು, ಹಾಗೂ ಹಳ್ಳಿಗಳಲ್ಲಿ ನಿರಂತರ ಜ್ಯೋತಿ ಪೆÇರೈಕೆಯಾಗುತ್ತಿಲ್ಲ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ರೈತರಿಗೆ ಹಾಗೂ ಸಾರ್ವಜನಿಕರಿಗೆ ನಿರಂತರವಾಗಿ ವಿದ್ಯುತ ಪೆÇರೈಸಬೇಕು. ಇಲ್ಲವಾದರೆ ರಾಷ್ಟ್ರೀಯ ಗೋರಸೇನಾ ಸಂಘಟನೆ ವತಿಯಿಂದ ಬೃಹತ್ ಪ್ರಮಾಣದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೋರಸೇನಾ ಅಧ್ಯಕ್ಷ ಉತ್ತಮ ಜಾಧವ, ಬಾಳಾಸಾಹೇಬ ರಾಠೋಡ, ದಿನೇಶ ರಾಠೋಡ, ಅಮೂಲ ಪವಾರ, ಲಕ್ಷ್ಮಣ ಪವಾರ, ರಾಜಕುಮಾರ ರಾಠೋಡ, ನಿಶಿಕಾಂತ ಪವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.