ನಿರಂತರ ಲಸಿಕೆ ಅಭಿಯಾನದಿಂದಾಗಿ ನಗರ ಪ್ರದೇಶದಲ್ಲಿ ಕೋವಿಡ್ ಸೊಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಃ ಶಾಸಕ ಬಸನಗೌಡ

ವಿಜಯಪುರ, ಜೂ.6-ನಿರಂತರ ಲಸಿಕೆ ಅಭಿಯಾನದಿಂದಾಗಿ ನಗರ ಪ್ರದೇಶದಲ್ಲಿ ಕೋವಿಡ್ ಸೊಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಇಂದು ವಾರ್ಡ ನಂ-31ರ ಗೋಡಬೋಳೆ ಮಾಳಾದ, ಶಾಹುನಗರ ಗುಂಡಬಾವಡಿಯ ಕಾಳಿಕಾ ಗುಡಿ ಆವರಣದಲ್ಲಿ, ವಾರ್ಡ ನಂ.21ರ ಇಬ್ರಾಹಿಂಪೂರ ಶ್ರೀ ಚಂದ್ರಕಾಂತ ನೀಲಪ್ಪ ಸಜ್ಜನ್ ಶಾಲೆಯ ಆವರಣದಲ್ಲಿ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ನಗರ ಶಾಸಕರ ಸೂಚನೆ ಮೇರೆಗೆ ಪ್ರಾರಂಭಿಸಲಾದ ಬಾಗಲಕೋಟ ರಸ್ತೆಯ ಪಿ.ಡಿ.ಜೆ ಪ್ರೌಢಶಾಲೆ ಹತ್ತಿರದ ಶ್ರೀ ಕೃಷ್ಣಮಠದಲ್ಲಿ ನಿರಂತರ ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಉಚಿತವಾಗಿ ಕೋವಿಡ್ ಲಸಿಕೆ ಹಾಕುವ ಆರೋಗ್ಯ ಇಲಾಖೆಯ ಲಸಿಕಾ ಕೇಂದ್ರಕ್ಕೆ ಬೇಟಿ ನೀಡಿ ಚಾಲನೆ ನೀಡಿದರು.
ನಗರದಲ್ಲಿ 45 ವರ್ಷ ಮೇಲ್ಪಟ್ಟವರು ಯಾರು ಲಸಿಕೆ ಪಡೆದುಕೊಂಡಿಲ್ಲವೋ ಅವರು ಲಸಿಕೆ ಪಡೆದುಕೊಳ್ಳಿ, ನಗರದ ಎಲ್ಲ ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗಳಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿ, ಹಾಕಿಸಿಕೊಳ್ಳಿ ಲಸಿಕೆ ಪಡೆದರೆ ಈ ರೋಗದಿಂದ ಆರೋಗ್ಯದಲ್ಲಿ ತೀರ್ವತರ ತೊಂದರೆಯಾಗುವದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು.
ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಲು, ಕೋವಿಡ್ ರೋಗಿಗಳಿರುತ್ತಾರೆ ಎಂದು ಭಯ ಪಟ್ಟು ಅಲ್ಲಿಗೆ ಹೋಗುತ್ತಿರಲಿಲ್ಲ, ಆದ್ದರಿಂದ ನಾವು ನಾಗರಿಕರ ಅನಕೂಲಕ್ಕಾಗಿ, ವಿಜಯಪುರ ನಗರದಾದ್ಯಂತ, ನಿರಂತರವಾಗಿ ಉಚಿತ ಲಸಿಕೆ ಅಭಿಯಾನ ಮಾಡುತ್ತಿದ್ದೇವೆ, ನಿರಂತರ ಲಸಿಕೆ ಅಭಿಯಾನದಿಂದಾಗಿ ವಿಜಯಪುರ ನಗರ ಪ್ರದೇಶದಲ್ಲಿ ಕೋವಿಡ್ ಸೊಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ನಾಗರಿಗರು ಈ ಲಸಿಕೆ ಅಭಿಯಾನದ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ್, ಚಂದ್ರು ಚೌಧರಿ, ಸಂತೋಷ ಪಾಟೀಲ್, ಶ್ರೀನಿವಾಸ ಬೆಟಗೇರಿ, ಶಿವರುದ್ರ ಬಾಗಲಕೋಟಿ, ರಾಜಶೇಖರ ಭಜಂತ್ರಿ, ಪ್ರಕಾಶ ಚವ್ಹಾಣ, ನಾಗರಾಜ ಮುಳವಾಡ ಉಪಸ್ಥಿತರಿದ್ದರು.