ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ಸಮೃದ್ಧಿ: ಡಾ. ಗುರುಸಿದ್ಧರಾಜಯೋಗೀಂದ್ರ ಶ್ರೀ

ಹುಬ್ಬಳ್ಳಿ,ಮಾ29: ಫೆÇೀಟೋ ಮತ್ತು ವಿಡಿಯೋಗ್ರಾಫರ್ ಸಂಘ ಮತ್ತು ವಿಶ್ವಚೇತನ ಯೋಗ ಸಂಶೋಧನ ಕೇಂದ್ರ ಹುಬ್ಬಳ್ಳಿ ಇದರ ಸಂಯುಕ್ತ ಆಶ್ರಯದಲ್ಲಿ ಕಳೆದ 15 ದಿನಗಳಿಂದ ಮೂರುಸಾವಿರ ಮಠದ ಆವರಣದಲ್ಲಿ ಯೋಗಾಭ್ಯಾಸವನ್ನು ಯೋಗ ಗುರೂಜಿ ಬಸವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮುಕ್ತಾಯ ಸಮಾರಂಭ ಜರುಗಿತು.
ಇದರ ಸಾನಿಧ್ಯವನ್ನು ನಗರದ ಮೂರುಸಾವಿರ ಮಠದ ಶ್ರೀ ಮಹಾರಾಜ ನಿರಂಜನ್ ಜಗದ್ಗುರು, ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಿ ಮಾತನಾಡಿದ ಅವರು, ಛಾಯಾಗ್ರಾಹಕರು ತಾವು ಬರೇ ಹೊರಗಿನ ಛಾಯಾಚಿತ್ರ ತೆಗೆಯುತ್ತೀರಿ. ಆದರೆ ನಿಮ್ಮ ದೇಹದಲ್ಲಿರುವ ಒಳಗಿನ ಛಾಯಾಚಿತ್ರ ತೆಗೆಯಲು ಪ್ರಯತ್ನಿಸಬೇಕು. ಅದೇ ಯೋಗಾ. ಮನುಷ್ಯನ ಜೀವನದಲ್ಲಿ ಯೋಗದ ಮಹತ್ವ ಬಹಳ ಪ್ರಮುಖವಾದದ್ದು. ಯಾವ ವ್ಯಕ್ತಿ ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡುತ್ತಾನೆ ಆ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಮನುಷ್ಯನ ಇಂದ್ರಿಯಗಳು ಹೊರಪ್ರಪಂಚದ ರುಚಿಯ ಮೇಲೆ ಹೆಚ್ಚು ಆಸಕ್ತ ಆಗಿರುತ್ತವೆ. ಈ ಚಂಚಲ ಮನಸ್ಸು ಕೆಟ್ಟ ವಿಷಯಗಳನ್ನು ಹೆಚ್ಚು ಇಷ್ಟಪಡುತ್ತವೆ. ಆದ್ದರಿಂದ ಈ ಪಂಚೇಂದ್ರಿಯಗಳನ್ನು ಯೋಗಾಭ್ಯಾಸದಿಂದ ನಾವು ನಿಯಂತ್ರಿಸಬಹುದು. ಮನುಷ್ಯ ಆಲಸಿ ಬೆಳೀಗ್ಗೆ ಬೇಗ ಏಳುವುದಿಲ್ಲ. ಹಕ್ಕಿಗಳನ್ನು ನೋಡಿ ನಾವು ಕಲಿಯಬೇಕು. ಅವು ಬೇಗ ಎದ್ದು ಎಷ್ಟು ಚಟುವಟಿಕೆಯಿಂದ ಹಾರಾಡುತ್ತಿರುತ್ತವೆ ಹಾಗೆ ಮನುಷ್ಯ ಕೂಡ ಬೇಗ ಎದ್ದು ಯೋಗಾಭ್ಯಾಸ ಮಾಡಿ ತಮ್ಮದೇಹವನ್ನು ಉಲ್ಲಸಿತ ಗೊಳಿಸಿದಾಗ ದಿನವಿಡೀ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಅಲ್ಲದೆ ಯೋಗಾಭ್ಯಾಸವನ್ನು ಕ್ಷಣಕಾಲ ವೀಕ್ಷಿಸಿದ ಜಗದ್ಗುರುಗಳು ಬಸವಾನಂದ ಗುರೂಜಿಯವರು ಕಲಿಸುವ ರೀತಿ ಕಂಡು ಹರ್ಷಿತರಾಗಿ ಅವರನ್ನು ಕೊಂಡಾಡಿ ಅವರನ್ನು ಸತ್ಕರಿಸಿದರು. ಹುಬ್ಬಳ್ಳಿ ಫೆÇೀಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷರಾದ ಕಿರಣ್ ಬಾಕಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಹುಬ್ಬಳ್ಳಿ ಫೆÇೀಟೋಗ್ರಾಫರ್ ಹಗಲು-ರಾತ್ರಿಯೆನ್ನದೆ ಕಾರ್ಯಕ್ರಮದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿರುತ್ತಾನೆ. ಅವರ ಆರೋಗ್ಯದ ದೃಷ್ಟಿಯಿಂದ ಈ ಶಿಬಿರವನ್ನು ಯಶಸ್ವಿಯಾಗಿ ನಡೆದಿದ್ದು ಬಹಳ ಸಂತೋಷವಾಗಿದೆ. ಬಸವಾನಂದ ಗುರೂಜಿ ಮಹಾನ್ ಯೋಗ ಗುರುಗಳು. ಇವರು ನಮಗೆಲ್ಲರಿಗೂ ಯೋಗಾಭ್ಯಾಸದ ಜೊತೆಗೆ ಆಧ್ಯಾತ್ಮಿಕ ಜ್ಞಾನ ಧ್ಯಾನ ಶ್ಲೋಕ ಮಂತ್ರ ಉಚ್ಚಾರದೊಂದಿಗೆ ಬಹಳ ಸರಳ,ಸುಲಭ ರೀತಿಯಲ್ಲಿ ಹೇಳಿಕೊಟ್ಟಿದ್ದಾರೆ ನಮ್ಮ ಸಂಘದ ಸದಸ್ಯರು ಎಲ್ಲರೂ ದಿನನಿತ್ಯ ಯೋಗ ಅಭ್ಯಾಸವನ್ನು ಮುಂದುವರಿಸಿ ತಮ್ಮ ಆರೋಗ್ಯವನ್ನು ಉತ್ತಮ ಗೊಳಿಸಬೇಕೆಂದು ಹೇಳಿದರು.
ವಿರಕ್ತಮಠ ಹಾನಗಲ್. ಸಿಂಧೂಗಿ ಮುನವಳ್ಳಿ, ಬಸವಾನಂದ ಗುರೂಜಿ ಅವರಿಗೆ ಪೂಜ್ಯರಿಂದ ಫಲ, ಪುಷ್ಪ, ಸನ್ಮಾನ ಮತ್ತು ಗೌರವ ಕಾಣಿಕೆ ಕೊಡಲಾಯತು.
ಯೋಗ ಶಿಬಿರವನ್ನು ನಡೆಸಿಕೊಟ್ಟ ಬಸವಾನಂದ ಗುರೂಜಿಯವರಿಗೆ ಸನ್ಮಾನಿಸಲಾಯಿತು.ಹಾಗೂ ಹಿರಿಯ ಛಾಯಾಗ್ರಹಕರಾದ ಈಶ್ವರ್ ತಿಗಡಿ ಆಯಿಲ್ ಪೈಂಟ್ ಪೆÇೀಟ್ರೈಟ್ ಫೆÇೀಟೋವನ್ನು ನೀಡಲಾಯತು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ಯೋಗದಿಂದ ತಮಗಾದ ಲಾಭವನ್ನು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಘದ ಉಪಾಧ್ಯಕ್ಷರಾದ ದಿನೇಶ ದಾಬಡೆ ಅವರು ಸ್ವಾಗತಿಸಿದರು ಸಂಘದ ಆಡಳಿತ ಮಂಡಳಿಯ ಸದಸ್ಯರಾದ ರವೀಂದ್ರ ಕಾಟೀಗರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ವಿನಾಯಕ ಸಫಾರೆ ಶಿವಾನಂದ ಹಳಿಜೊಳ್, ಆನಂದ ರಾಜಳ್ಳಿ, ಪ್ರಕಾಶ್ ಬಸವಾ, ದತ್ತು ಧೋಂಗಡಿ ಇನ್ನಿತರರು ಹಾಜರಿದ್ದರು.