ನಿರಂತರ ಮಳೆ: ಚಾಮುಂಡಿಬೆಟ್ಟದಲ್ಲಿ ಮತ್ತಷ್ಟು ಭೂ ಕುಸಿತ


ಮೈಸೂರು,ನ.18:- ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಬೀಳುತ್ತಿದ್ದು, ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ ಹೋಗುವ ರಸ್ತೆ ಮತ್ತಷ್ಟು ಕುಸಿದಿದೆ.
ಭೂ ಕುಸಿತವಾಗಿದ್ದ ಸ್ಥಳದಲ್ಲೇ ಬಿರುಕು ಬಿಟ್ಟಿದೆ. ಮಳೆ ಮುಂದುವರಿದರೆ ರಸ್ತೆ ಕುಸಿಯುವ ಆತಂಕ ಎದುರಾಗಿದೆ. ನಿನ್ನೆ ರಾತ್ರಿಯಿಡೀ ಮಳೆ ಸುರಿದಿದೆ. ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ರಸ್ತೆ ಕುಸಿತಗೊಂಡಿದೆ.
ಇತ್ತೀಚಿಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಸ್ತೆ ಕಾಮಗಾರಿಗೆ ಚಿಂತನೆ ನಡೆಸಿದ್ದರು. ಆದರೆ ಭೂಮಿ ಕುಸಿದಿರುವ ಜಾಗದ ಅನತಿ ದೂರದಲ್ಲೇ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಮತ್ತಷ್ಟು ವಿಳಂಬ ಆಗಬಹುದು ಎನ್ನಲಾಗುತ್ತಿದೆ.