ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿತ

ಹುಬ್ಬಳ್ಳಿ,ಜು12 : ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳು ಸಂಪೂರ್ಣವಾಗಿ ಕುಸಿತಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ನಗರದ ಕಮರಿಪೇಟೆಯ ನಿವಾಸಿಯಾದ ಮುರಳೀಧರ್ ಇರಕಲ್ ಇವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಅಲ್ಲದೆ ನಗರದ ಕೆಲವೆಡೆ ಮನೆಗಳ ಗೋಡೆಗಳು ಕುಸಿತಗೊಂಡಿದ್ದು ಮನೆಯ ನಿವಾಸಿಗಳು ಆತಂಕಕ್ಕೆ ಈಡಾಗೀದ್ದಾರೆ.
ಗೋಡೆ ಕುಸಿತದಿಂದ ಮಳೆಯಲ್ಲಿ ವಾಸಿಸಲು ಕಷ್ಟವಾಗುತ್ತಿದೆ ಎಂದು ಸಮಸ್ಯೆ ತೊಡಿಕೊಂಡಾಗ ಸ್ಥಳದಲ್ಲಿದ್ದ ವಾರ್ಡ್ ನ ಸದಸ್ಯರಾದ ಸುನಿತಾ ಬುರಬುರೆ ಅವರ ಪತಿ ಪ್ರಕಾಶ ಅವರು ಮಾತನಾಡಿ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮನೆ ಗೋಡೆ ಕುಸಿದಿದ್ದನ್ನು ಪರಿಶೀಲಿಸುತ್ತಾರೆ. ನಂತರ ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.