
ಕೋಲಾರ,ಸೆ,೧೪-ನಿರಂತರ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯಎಂದುಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕತರಬೇತಿ ಸಂಸ್ಥೆಯ ನಿರ್ದೇಶಕ ಬಿ.ಎನ್.ಸುರೇಶ್ ಕಿವಿ ಮಾತು ತಿಳಿಸಿದರು.
ನಗರದ ಟಿ.ಚನ್ನಯ್ಯರಂಗ ಮಂದಿರದಲ್ಲಿ ವಿವೇಕ್‌ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವೇಕ ರತ್ನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ೨೦೨೩ ನೇ ಸಾಲಿನ ರಾಜ್ಯಮಟ್ಟದ ವಿವೇಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸ್ಪರ್ಧಾರ್ಥಿಗಳು ಮೊದಲಿನಿಂದಲೇ ತಯಾರಿಯನ್ನು ನಡೆಸಿದಾಗ ಮಾತ್ರ ಪರೀಕ್ಷೆಗಳನ್ನು ಉತ್ತಮವಾಗಿ ಫಲಿತಾಂಶವನ್ನು ಪಡೆಯಲು ಸಾಧ್ಯ. ಪರೀಕ್ಷೆ ದಿನಾಂಕ ಪ್ರಕಟಗೊಂಡಾಗ ತಯಾರಿಯನ್ನು ನಡೆಸಲು ಪ್ರಾರಂಭಿಸಿದರೆ ಪರೀಕ್ಷೆಗಳಲ್ಲಿ ಯಶಸ್ವಿ ಗಳಿಸುವುದು ಕಷ್ಟ ಎಂದರು.
ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ವಿದ್ಯಾರ್ಥಿಗಳು ತಮ್ಮಲ್ಲಿ ಶಿಸ್ತು, ಸಂಯಮ ಮತ್ತು ಸಮಯ ಪ್ರಜ್ಞೆಯನ್ನು ರೂಡಿಸಿಕೊಳ್ಳಬೇಕು. ಪರೀಕ್ಷೆಗೆ ತಯಾರಿ ನಡೆಸುವವರು ಬೇರೆ ಕೆಲಸಗಳನ್ನು ಬದಿಗೊತ್ತಿ ಪಠ್ಯಕ್ರಮದ ಪ್ರಕಾರ ಸಿದ್ದತೆಯನ್ನು ನಡೆಸ ಬೇಕು ಎಂದು ತಿಳಿಸಿದರು. ವಿವೇಕ್‌ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ನಿರ್ದೇಶಕ ಎ. ಪ್ರಮೋದ್‌ಕುಮಾರ್ ಅವರು ಮಾತನಾಡಿ, ಸ್ಪಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ವಿವೇಕ್‌ಇನ್ಫೋಟೆಕ್ ಸಂಸ್ಥೆಯುಅತಿ ಹೆಚ್ಚಿನ ಫಲಿತಾಂಶವನ್ನು ನೀಡುವ ಮೂಲಕ ಸ್ಪರ್ಧಾತ್ಮಕ ಜಗತ್ತಿನಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಹೇಳಿದರು.
ಬೆಳಕು ಸಂಸ್ಥೆಯ ಹರೀಶ್ ಮಾತನಾಡಿ, ವಿವೇಕ್‌ಇನ್ಪೋಟೆಕ್ ಸಂಸ್ಥೆಯು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿನ್ನು ನೀಡುಲು ಉಚಿತ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರ. ರಾಜ್ಯದ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಸಂಸ್ಥೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಇದನ್ನು ಜಿಲ್ಲೆಯ ಸ್ಪರ್ಧಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ವಿವೇಕರತ್ನ ಪುರಸ್ಕೃತ ಬಿ.ಎನ್.ಸುರೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಧಾರವಾಡದ ಖ್ಯಾv ಉಪನ್ಯಾಸಕ ಕುಮಾರ್‌ಚೌಹಾಣ್ ಸಂವಿಧಾನ ಮತ್ತು ಪಂಚಾಯತ್ ರಾಜ್ ವಿಷಯವನ್ನು ಹಾಗೂ ಮಹ್ಮದ್‌ಇಲಿಯಾಸ್ ಅವರು ಭೂಗೋಳ ವಿಷಯವನ್ನು ಕಾರ್ಯಾಗಾರದಲ್ಲಿ ಬೋಧಿಸಿದರು.
ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಕಿರಣ್‌ಕುಮಾರ್, ಎನ್.ಕೆ.ನಾಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.