ನಿರಂತರ ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯ

ಕಲಬುರಗಿ:ಜ.31: ನಮ್ಮ ಭಾಗದವಿದ್ಯಾರ್ಥಿಗಳು ನಮ್ಮಿಂದಅಸಾಧ್ಯವೆಂಬ ತಮ್ಮಲ್ಲಿನ ಕೀಳರಿಮೆ ತೊರೆದು ನಿರಂತರವಾದ ಪ್ರಯತ್ನ ಮಾಡಬೇಕು. ಇಂದುತೀವ್ರ ಸ್ಪರ್ಧಾತ್ಮಕತೆಯನ್ನುಎದುರಿಸಬೇಕಾಗಿರುವದರಿಂದ ನಿರಂತರವಾದಅಧ್ಯಯನ ಮಾಡಿದರೆ, ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಎಂದು ಸಿಬಿಸಿ ಉಪಾಧ್ಯಕ್ಷರವೀಂದ್ರಕುಮಾರ ವೈ.ಕೋಳಕೂರ ಹೇಳಿದರು.
ಜೇವರ್ಗಿಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿಬುಧವಾರಏರ್ಪಡಿಸಲಾಗಿದ್ದಕಾಲೇಜಿನ ವಾರ್ಷಿಕೋತ್ಸವ,ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆಮತ್ತು ಪ್ರತಿಭಾ ಪುರಸ್ಕಾರಸಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಾಚಾರ್ಯ ಬಸವರಾಜ ಬಿರಾಜಾದಾರ ಮಾತನಾಡಿ, ವಿದ್ಯಾರ್ಥಿಗಳಾದ ನೀವು ಶಿಕ್ಷಕರು, ಪಾಲಕ-ಪೋಷಕ ವರ್ಗದವರ ಮಾರ್ಗದರ್ಶನಪಡೆಯಿರಿ. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಬೇಡ. ಅದನ್ನು ಸಂಭ್ರಮದಿಂದ ಸ್ವೀಕರಿಸಿ. ಸಮಯದ ಸದುಪಯೋಗವನ್ನು ಮಾಡಿಕೊಳ್ಳಿ. ತಂದೆ-ತಾಯಿಂದಿರುತಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಬೆಳೆಸಿ. ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧನೆ ಮಾಡಿದರೆಮತ್ತು ವಿದ್ಯಾಥಿಗಳು ತುಂಬಾಆಸಕ್ತಿಯಿಂದಅಧ್ಯಯನ ಮಾಡಿದರೆಉತ್ತಮ ಫಲಿತಾಂಶ ಪಡಿಯಲು ಸಾಧ್ಯವಾಗುತ್ತದೆಎಂದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರವೀಂದ್ರಕುಮಾರಸಿ.ಬಟಗೇರಿ ಮಾತನಾಡಿ,ವಿದ್ಯಾರ್ಥಿದೆಸೆಯಿಂದಲೇದೇಶಪ್ರೇಮ, ಭ್ರಾತೃತ್ವ ಭಾವನೆ ಮೈಗೂಡಿಸಿಕೊಳ್ಳಿ. ತಂದೆ-ತಾಯಿ, ಗುರು-ಹಿರಿಯರಿಗೆಗೌರವ ನೀಡಿ. ಯಾರೇ ಆಗಲಿ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ. ಸೂಕ್ತ ಯೋಚನಾ ಶಕ್ತಿ ಇರಲಿ. ಸ್ವಾರ್ಥಜೀವನಕ್ಕಿಂತ, ಸಾರ್ಥಕಜೀವನ ಶ್ರೇಷ್ಠವಾಗಿದೆ. ಅಂಕಪಟ್ಟಿಯಿಂದ ಮಾತ್ರಜೀವನ ನಿರ್ಧಾರವಾಗದು. ಅನೇಕ ಮಹನೀಯರಜೀವನ, ಸಾಧನೆಯನ್ನುಅಧ್ಯಯನ ಮಾಡಿ. ಸಮಯದಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೀಶೈಲ್ ಮತ್ತು ಮುಸ್ಕಾನ್‍ಅವರಿಗೆ ಸತ್ಕರಿಸಲಾಯಿತು. ಎನ್.ಎಸ್.ಎಸ್‍ಅಧಿಕಾರಿಎಚ್.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ಷಿಕ ವರದಿ ಮಂಡಿಸಿದರು. ಉದ್ಯಮಿ ಪ್ರೇಮಾನಂದ ಸಾಹು ಶೆಟಗಾರ, ಪ್ರಾಚಾರ್ಯ ಶಿವಶರಣಪ್ಪ ಮಸ್ಕನಳ್ಳಿ, ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ,ನಯಿಮಾ ನಾಹಿದ್, ಮಲ್ಲಿಕಾರ್ಜುನದೊಡ್ಡಮನಿ, ಮಲ್ಲಪ್ಪರಂಜಣಗಿ, ಶಂಕ್ರೆಪ ಹೊಸದೊಡ್ಡಿ, ಪ್ರಕಾಶ ಪಾಟೀಲ,ರೇಣುಕಾಚಿಕ್ಕಮೇಟಿ, ಸಾಹೇಬಗೌಡ್ ಪಾಟೀಲ, ನಾಗಮ್ಮ ಹಾದಿಮನಿ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ದ್ವಿ.ದ.ಸ ರಾಮಚಂದ್ರಚವ್ಹಾಣ, ಸೇವಕ ಭಾಗಣ್ಣ ಹರನೂರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.