ನಿರಂತರ ಪರಿಶ್ರಮದಿಂದ ಸಾಧನೆ

ವಿಜಯಪುರ.ಸೆ೨೬:ಮಕ್ಕಳು ಯಾವುದಾದರೂ ವಿಷಯದಲ್ಲಿ ನಿರಂತರ ಪರಿಶ್ರಮ ಹಾಕಿದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪುರಸಭಾ ಸದಸ್ಯರಾದ ನಂದಕುಮಾರ್ ತಿಳಿಸಿದರು.
ಅವರು ಶ್ರೀ ವಿನಾಯಕ ಭಕ್ತ ಮಂಡಳಿ ವತಿಯಿಂದ ಏರ್ಪಡಿಸಲಾದ ಶ್ರೀ ವಿನಾಯಕ ಸ್ವಾಮಿ ರವರ ೮೮ನೇ ವರ್ಷದ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಗತಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು ವ್ಯಾಸಂಗ ಮಾಡುತ್ತಿರುವ ಯುವಕಲಾಕಾರ ಪ್ರಜ್ವಲ್ ರವರು ಕೇವಲ ಮೂರು ನಿಮಿಷಗಳಲ್ಲಿ ಕಣ್ಣಿಗೆ ಬಟ್ಟೆ ಕೊಂಡು ಅತ್ಯಾಕರ್ಷಕ ವಿನಾಯಕ ಸ್ವಾಮಿರವರ ಚಿತ್ರ ಬಿಡಿಸುವುದನ್ನು ಪ್ರಶಂಶಿಸಿ ಮಾತನಾಡುತ್ತಿದ್ದರು.
ಮತ್ತೊಬ್ಬ ಪುರಸಭಾ ಸದಸ್ಯರಾದ ಬೈರೇಗೌಡರವರು ಮಾತನಾಡುತ್ತಾ ಸಾಧನೆ ಎಂಬುದು ಯಾರೊಬ್ಬರ ಸ್ವತ್ತಾಗಿರದೆ ಅದು ಸಾಧಕನ ಸ್ವತ್ತಾಗಿದ್ದು ನಿರಂತರವಾಗಿ ಸಾಧನೆ ಮಾಡದೆ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು
ಈ ಸಂದರ್ಭದಲ್ಲಿ ಮಹಬೂಬ್ ಪಾಷ, ಮಹಂತಿನ ಮಠದ ಕಾರ್ಯದರ್ಶಿ ವಿ ವಿಶ್ವನಾಥ್, ಶ್ರೀನಗರೇಶ್ವರ ಸ್ವಾಮಿ ಅಭಿವೃದ್ಧಿ ಸಮಿತಿಯ ಪುನೀತ್ ಕುಮಾರ್, ಯುವಕ ಸಂಘದ ಬಿ.ಸಿ.ಸಿದ್ದರಾಜು, ಎನ್.ರುದ್ರಮೂರ್ತಿ, ಮಹೇಶ್, ಶ್ರೀ ವಿನಾಯಕ ಭಕ್ತ ಮಂಡಳಿಯ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.