ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ:ಎಮ್ ಬಿ ಬಿರಾದಾರ

ಇಂಡಿ: ಜು.15:ಜೀವನದಲ್ಲಿ ನಿಶ್ಚಿತ ಗುರಿಯನ್ನು ಇಟ್ಟುಕೊಂಡು ಛಲ ಬಿಡದೆ ನಿರಂತರವಾಗಿ ಪರಿಶ್ರಮ ಪಟ್ಟರೆ ಯಶಸ್ಸು ನಿಮ್ಮ ಮನೆ ಬಾಗಲಿಗೆ ಬರುತ್ತದೆ ಎಂದು ಗುರುಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಬಿರಾದಾರ ಹೇಳಿದರು.

ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಪ್ರೌಢಶಾಲೆ ಮತ್ತು ಪಿ.ಯು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿ.ಯು ಪ್ರಥಮ ವರ್ಷ ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾದ ಇಂಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಎ.ಒ.ಹೂಗಾರ, ಆಡಳಿತ ಅಧಿಕಾರಿ ಎ.ಎಸ್.ಪಾಟೀಲ,ಪ್ರಾಚಾರ್ಯ ಎಸ್.ಆರ್.ರಾಠೋಡ,ಮುಖ್ಯ ಗುರುಗಳಾದ ಎ.ಎಮ್.ಮುಚ್ಚಂಡಿ, ಪುಷ್ಪಾ ಅಥಣಿ,ರಶ್ಮಿ ನಾಗಠಾಣ ಮಾತನಾಡಿದರು.

ವಿದ್ಯಾರ್ಥಿಗಳಾದ ಮೊಹಮ್ಮದ ಸುಫಿಯಾನ ಕಾರಬಾರಿ,ಸುಭಾಷಗೌಡ ಪಾಟೀಲ,ಸುಶ್ಮಿತಾ ಸಾಲಿ,ಶಾಹಿದ ಪಟೇಲ,ಮೇಘಾ ಜೋಡಮೂಟೆ ತಮ್ಮ ಅನಿಸಿಕೆ ಹಂಚಿಕೊಂಡರು.

ಶಿವಾನಂದ ಕೆಂಗನಾಳ,ರಾಗಿಣಿ ಮೇಲಿನಮನಿ,ಭಾಗ್ಯಶ್ರೀ ಪಾಟೀಲ, ಭಾಗ್ಯಶ್ರೀ ನಿಡೋಣಿ ಮಾತನಾಡಿದರು.