ನಿರಂತರ ಪರಿಶ್ರಮದಿಂದ ಮಹತ್ತರ ಬದಲಾವಣೆ ಸಾಧ್ಯ :ಇಸ್ರೋ ವಿಜ್ಞಾನಿ ಡಾ. ದಾರುಕೇಶ್   


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.. ಅ.16 ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ಪರಿಶ್ರಮದಿಂದ ಮಹತ್ತರ ಬದಲಾವಣೆ ಸಾಧ್ಯ ಎಂದು ಇಸ್ರೋ ಸಂಸ್ಥೆಯ ವಿಜ್ಞಾನಿ ಡಾ. ಬಿ. ಹೆಚ್.ಎಂ.ದಾರುಕೇಶ್ ಹೇಳಿದರು
ಪಟ್ಟಣದ ಜಿವಿಪಿಪಿ ಕಾಲೇಜ್ ನ ಬುದ್ಧ ಬಸವ ಅಂಬೇಡ್ಕರ್ ಸಭಾಂಗಣದಲ್ಲಿ ತ್ಯಾಗ ಭೂಮಿ ಸೇವಾ ಟ್ರಸ್ಟ್ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಭಾರತ ರತ್ನ ಮಿಸೈಲ್ ಮ್ಯಾನ್ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು  ಯಾವುದೇ ವಿಷಯ  ಕೆಲಸವಿರಲಿ ಅಸಕ್ತಿಯಿಂದ ತೊಡಗಬೇಕು.ಅವಕಾಶಗಳು ಸವಾಲುಗಳಾಗಿ ಪರಿವರ್ತನೆಯಾದಾಗ  ಸನ್ನಿವೇಶಗಳು ಚಂದ್ರಯಾನದ-3 ನಂತ ಅದ್ಭುತ ಯಶಸ್ಸು ಗೆ ಕಾರಣವಾಗುತ್ತದೆ.ವಿಜ್ಞಾನ ಎಂಬುದು ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಸಾಧನವಾಗಿದ್ದು ನಿಮ್ಮ ಕನಸಿನ ಉದ್ಯೋಗ ಪಡೆಯಲು ನಿಮ್ಮ ಅವಶ್ಯಕತೆ ಇರುವ ಸಂಸ್ಥೆಗಳು ಉದ್ಯೋಗ ನೀಡುವ ಸಂಬಳ ನೀಡುವ ಸಾಧನವಾಗಿದೆ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರು ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ನಾಯಕ ದೊಡ್ಡವನಲ್ಲ ಸಂಸ್ಥೆ ದೊಡ್ಡದು ಎಂಬುದನ್ನು ನಿರೂಪಿಸಿದ್ದರು. ಇಸ್ರೋ ಸಂಸ್ಥೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ನಮ್ಮ ದೇಶ ಕ್ಷಿಪಣಿಗಳನ್ನು ರಾಕೆಟ್ ಗಳನ್ನು  ಬೇರೆ ದೇಶಗಳಿಂದ ಕೊಂಡು ಕೊಳ್ಳುತ್ತಿತ್ತು. ಅಬ್ದುಲ್ ಕಲಾಂ ಅವರ ಪರಿಶ್ರಮ ವಿಜ್ಞಾನ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯಿಂದ ಇಂದು ನಾವು ಜಗತ್ತಿನ ಬೇರೆ ಬೇರೆ ದೇಶಗಳಿಗೆ ರಾಕೇಟ್ ಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದರೆ ವಿಜ್ಞಾನ ಕ್ಷೇತ್ರಕ್ಕೆ ಅಬ್ದುಲ್ ಕಲಾಂ ಅವರ ಕೊಡುಗೆ ಅಪಾರವಾದದ್ದು ಎಂದರು.                           ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಚಂದ್ರಯಾನ -3 ಯಶಸ್ವಿಯಾಗಲು ಪೂರ್ವಸಿದ್ಧತೆ ಕಾರ್ಯನಿರ್ವಹಣೆ ರೂವರ್ ಕಾರ್ಯ ಸ್ಥಗಿತ ಬಗ್ಗೆ ಕೇಳಿದ ಇತರ ಪ್ರಶ್ನೆಗಳಿಗೆ ಉತ್ತರಿಸಿದರು.                                ಈ ಸಂದರ್ಭದಲ್ಲಿ ತ್ಯಾಗ ಭೂಮಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಉಪ್ಪಾರ್ ಪ್ರಾಸ್ತಾವಿಕವಾಗಿ  ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೋರ್, ಡಾ.ವೆಂಕಟೇಶ್,ಪ್ರೊ.ದುರುಗಪ್ಪ, ಬಿ ಗಂಗಾಧರ ವಕೀಲರು,ಉಪ್ಪಾರ ವೀರೇಶ್ ಮಾತನಾಡಿದರು. ಚಂದ್ರಶೇಖರ್ ವಕೀಲ, ಈ ಭರತ್ ,ಬ್ರಹ್ಮಾನಂದ, ಅಕ್ಕಿ ಪ್ರಸನ್ನ, ಸಂತೋಷ್ ಪೂಜಾರ್ ,ತಳವಾರ್ ಕೊಟ್ರೇಶ್, ಆನಂದ್ ಕಡ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಮಹಾದೇವಪ್ಪ ಇತರ ಉಪನ್ಯಾಸಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಿನಯ್ ಉಪ್ಪಾರ್ ಹಾಗೂ ಅವಿನಾಶ್ ಜಾದವ್  ಕಾರ್ಯಕ್ರಮ ನಿರ್ವಹಿಸಿದರು.

One attachment • Scanned by Gmail