
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.07: ನಿರ್ದಿಷ್ಟ ಗುರಿಯೊಂದಿಗೆ ನಿರಂತರ ಪರಿಶ್ರಮ ಪಟ್ಟರೆ ಮಾತ್ರ ಸಾಧನೆ ಸಾಧ್ಯ.ಆರೋಪ ಪ್ರತ್ಯಾರೋಪಗಳಿಂದ ಸಾಧನೆ ಅಸಾಧ್ಯ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತ ದೇಶದ ಹನ್ನೆರಡನೆಯ ರಾಷ್ಟ್ರಪತಿಯಾಗಿ 2007 ರಿಂದ 2012 ವರೆಗೆ ಆಡಳಿತ ಮಾಡಿದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್ ಪಾಟೇಲ್ ಅವರ ಸಾಧನೆ ಪರಿಚಯ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿತರಿಸಿ ಮಾತನಾಡಿ ಪ್ರತಿಭಾದೇವಿ ಅವರು ಬೊಂಬಾಯಿಯಲ್ಲಿ 1934ರಲ್ಲಿ ಜನಿಸಿ, ತಮ್ಮ 27ನೇ ವಯಸ್ಸಿನಲ್ಲೇ 1962 ರಲ್ಲಿ ವಿಧಾನಸಭೆಗೆ ಆಯ್ಕೆ ಆದವರು. ನಿರಂತರ ಐದು ಬಾರಿ ಶಾಸಕರಾಗಿ,ವಿವಿಧ ಖಾತೆಗಳ ಸಚಿವರಾಗಿ,1985 ರಿಂದ 1991ರವರೆಗೆ ರಾಜ್ಯಸಭಾ ಸದಸ್ಯರಾಗಿ,1991 ರಿಂದ 1996 ರವರೆಗೆ ಲೋಕಸಭಾ ಸದಸ್ಯರಾಗಿ,2004 ರಿಂದ 2007 ರವರೆಗೆ ರಾಜ್ಯಸ್ಥಾನ ರಾಜ್ಯದ ರಾಜ್ಯಪಾಲರಾಗಿ ಆಡಳಿತ ಮಾಡಿದವರು.
ವಕೀಲರಾಗಿದ್ದಾಗ ಮಹಿಳೆಯರ ಸಾಮಾಜಿಕ ಪರಿಸ್ಥಿತಿ ಸುಧಾರಣೆ ಮಾಡಲು ಹೋರಾಟಮಾಡಿದ್ದರು ಎಂದು ಹೇಳಿದರು.
ನಲಿಕಲಿ ಮಕ್ಕಳಾದ ಚೈತ್ರ, ಸುಧಾ,ನಂದಿನಿ, ದೀಪ್ತಿ, ಲಾವಣ್ಯ, ಶ್ವೇತಾ ಗೆ ಬಹುಮಾನ ವಿತರಿಸಲಾಯಿತು.
ಹಲಕುಂದಿ ಸಿ.ಆರ್. ಪಿ ಎಂ.ಶ್ರೀನಿವಾಸ ರೆಡ್ಡಿ, ಚರಕುಂಟೆ ಬಡ್ತಿ ಮುಖ್ಯ ಗುರುಗಳಾದ ಓಬಳೇಶಪ್ಪ,ಶಾಲೆಯ ಶಿಕ್ಷಕರಾದ ಬಸವರಾಜ, ದಿಲ್ಷಾದ್ ಬೇಗಂ,ಮೋದಿನ್ ಸಾಬ್,ಚನ್ನಮ್ಮ, ಸುಧಾ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ,ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.