ನಿರಂತರ ಅಭ್ಯಾಸ, ಸ್ವಂತಿಕೆಯಲ್ಲಿ ವಿಶ್ವಾಸ ವಿರಲಿ

ಭಾಲ್ಕಿ: ಮಾ.12:ವಿದ್ಯಾರ್ಥಿಗಳು ಚನ್ನಾಗಿ ಓದಿ, ನಿರಂತರ ಅಭ್ಯಾಸ ಮಾಡುವುದರೊಂದಿಗೆ ಪರೀಕ್ಷೆಯಲ್ಲಿ ಚನ್ನಾಗಿ ಬರೆಯಬೇಕು. ಯಾವುದೇ ವಾಮೋಪಾದ್ಯಗಳಿಗೆ ವಿಧೇಯರಾಗದೇ ಸ್ವಂತಿಕೆಯಲ್ಲಿ ವಿಶ್ವಾಸ ವಿಟ್ಟು ಪರೀಕ್ಷೆ ಎದುರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಹೇಳಿದರು.

ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಾಪಿ ಮಾಡಿ ಪಾಸಾಗುತ್ತೇನೆ ಎನ್ನುವ ವಿಚಾರ ಮನದಲ್ಲಿ ಇಟ್ಟುಕೊಳ್ಳಬಾರದು. ತನ್ನ ಸ್ವಂತಿಕೆಯಿಂದ ಪರೀಕ್ಷೆ ಬರೆಯಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಂಡು ಕೊಳ್ಳಬಹುದು ಎಂದರು. ಮೊಬೈಲ್ ಬಳಕೆ ಒಳ್ಳಯದಕ್ಕಿರಲಿ ಎಂದು ಹೇಳಿದರು.

ಕೆಎಲ್‍ಇ ಸಂಸ್ಥೆಯ ಆಡಳಿತಾಧಿಕಾರಿ ಕ್ರಾಂತಿ ಬಸಪ್ಪಾ ಕಲವಾಡಿಕರ ಮಾತನಾಡಿ, ವಿದ್ಯಾರ್ಥಿಗಳು ಸದಾ ಲವಲವಿಕೆಯಿಂದ ಪಾಠ ಕೇಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದರೊಂದಿಗೆ, ತಂದೆ, ತಾಯಿ ಮತ್ತು ಗುರುಹಿರಿಯರಿಗೆ ವಿಧೇಯಕರಾಗಿಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ| ಶಂಭುಲಿಂಗ ಕಾಮಣ್ಣ, ಅ.ಭಾ.ವಿ.ಮಹಾಸಭಾದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಬಿಆರ್‍ಪಿ ಆನಂದ ಹಳೆಂಬರೆ, ಸಿಆರ್‍ಪಿ ಸಂತೋಷ ಧಬಾಲೆ, ಕ.ರಾ.ಸ.ನೌ. ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ, ಕ.ರಾ.ಪ್ರಾ.ಸಿ. ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ, ನಿವೃತ್ತ ಮುಖ್ಯ ಶಿಕ್ಷಕ ಮನೋಹರ ಮೇತ್ರೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇವೇಳೆ ನಿವೃತ್ತ ಗೊಳ್ಳಲಿರುವ ಶಿಕ್ಷಕರಾದ ರಮೇಶ ಮಾನಶೆಟ್ಟಿ ಮತ್ತು ದೀಪಕ ಗಾಯಕವಾಡ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಮೋಹನ ಬಿರಾದಾರ, ಮುಖ್ಯಗುರುಗಳಾದ ಪ್ರಕಾಶ ಮಾಗಾವೆ, ಬಸವರಾಜ ತೇಗಂಪೂರೆ, ಸಂತೊಷ ವಾಡೆ, ಶರಣಪ್ಪಾ ರುಮ್ಮಾ, ಸಂತೋಷ ಕಾಳೆ, ರಾಜಕುಮಾರ, ನಾಗಶೇಟ್ಟಿ ಚೋಳಾ, ಗುಂಡಪ್ಪ ಸಂಗಮಕರ, ಸಂತೋಷ ಹಡಪದ ಉಪಸ್ಥಿತರಿದ್ದರು. ಶಿವಕುಮಾರ ವಾಡಿಕರ ವರದಿ ವಾಚನ ಮಾಡಿದರು. ವಿದ್ಯಾರ್ಥಿನಿ ಅಂಜಲಿ ದಶರಥ ಪ್ರತಿಜ್ಞಾವಿಧಿ ಬೋದಿಸಿದಳು. ಅಶ್ವಿನಿ ಮತ್ತು ರಾಖಿ ಸ್ವಾಗತಗೀತೆ ಹಾಡಿದರು. ಪಲ್ಲವಿ ಪ್ರಭು ಭಕ್ತಿ ಗೀತೆ ಹಾಡಿದಳು. ಪ್ರವೀಣ ಸಿಂಧೆ ಸ್ವಾಗತಿಸಿದರು. ಶೋಭಾ ಮಾಸಿಮಾಡೆ ನಿರೂಪಿಸಿದರು. ಕಿರಣಕುಮಾರ ಭಾಟಸಿಂಗೆ ವಂದಿಸಿದರು.