
ಕರಜಗಿ :ಮಾ.12:ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬಹುದು.
ಗುರುಗಳ ಮಾರ್ಗದರ್ಶನ ಹಾಗೂ ಕಠಿಣ ಅಭ್ಯಾಸದಿಂದ ನಿರೀಕ್ಷಿತ ಗುರಿ ಸಾಧಿಸಬಹುದು
ಎಂದು ಸುರೇಶ ಕುಲಕರ್ಣಿ ಹೇಳಿದರು.
ಅವರು ಅಫಜಲಪುರ ತಾಲೂಕಿನ ಶಿವೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಗೈಬುಸಾಬ ಆಳಂದ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ನಿರ್ಧರಿಸಿಕೊಳ್ಳಲು ಎಸ್ ಎಸ್ ಎಲ್ ಸಿ ಬಹಳ ಮಹತ್ವವಾಗಿದೆ.ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಓದಿನಲ್ಲಿ ತೊಡಗಿಕೊಂಡು ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಲು ಸಾಧ್ಯವಾಗುತ್ತದೆ.ಉಜ್ವಲ ಭವಿಷ್ಯಕ್ಕೆ ನಾಂದಿಯಾದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಿರ್ಭಯವಾಗಿ ಬರೆದು ಉತ್ತಮ ಅಂಕ ಪಡೆದು ಶಾಲೆಯ ಪಾಲಕರ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು.ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ
ನೀಡುವುದೇ ನಮ್ಮ ಗುರಿಯಾಗಿದೆ.ಶಾಲಾ ಶೈಕ್ಷಣಿಕ ವಾತಾವರಣ ಮಾದರಿಯಾಗಿದೆ’ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು
ಶ್ರೀ ಗಂಗಾಧರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು ಪರಮೇಶ್ವರ ಜಮಾದಾರ ಸಿದ್ದನಗೌಡ ಪಾಟೀಲ.ಗ್ರಾ ಪಂ ಸದಸ್ಯರಾದ ಬಸಣ್ಣ ಅಳ್ಳಗಿ ನೀಲಪ್ಪ ಜಮಾದಾರ ಸಿದ್ದು ಹೊಸಮನಿ ಶಿಕ್ಷಕರಾದ ಸೋಮಶೇಖರ ಸಜ್ಜನ ಜಕ್ಕಪ್ಪ ಹತ್ತಳ್ಳಿ ಪರಮೇಶ್ವರ,
ರಮೇಶ, ಬಸವರಾಜ,ಚಂದ್ರು ಸೇರಿದಂತೆ ವಿದ್ಯಾರ್ಥಿಗಳಿದ್ದರು.