ನಿರಂತರ ಅಭ್ಯಾಸದಿಂದ ಕೌಶಲ್ಯ ಬಲ: ಡಾ.ಅಜಿತಪ್ರಸಾದ


ಧಾರವಾಡ ಜ.2- ವ್ಯಕ್ತಿತ್ವ ವಿಕಸನವು ನಾಗರಿಕ ಸಮಾಜದ ಅತಿ ಮಹತ್ವದ ಭಾಗ.ಸಂವಹ ಕೌಶಲ್ಯಗಳನ್ನು ಆಧುನಿಕ ಕಾಲಘಟ್ಟದಲ್ಲಿ ತುಂಬಾ ಮಹತ್ವ ಪಡೆದಿವೆ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ ಅವರು ಅಭಿಪ್ರಾಯ ಪಟ್ಟರು.
ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಇಂಗ್ಷೀಷ್ ವಿಭಾಗದಿಂದ ಆಯೋಜಿಸಿದ್ದ “ವ್ಯಕ್ತಿತ್ವ ವಿಕಸನ ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯಗಳು” ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸಂವಹನ ಕೌಶಲ್ಯಗಳು ನಿರಂತರ ಅಭ್ಯಾಸದಿಂದ ಬಲಗೊಳ್ಳುತ್ತವೆ. ಉತ್ತಮ ಸಂವಹನ ಕಲೆ ವ್ಯಕ್ತಿಗಳ ಮಧ್ಯೆ ಬಾಂಧವ್ಯ ಗಟ್ಟಿಗೊಳಿಸಲು ನೆರವಾಗುತ್ತದೆ’ ಎಂದು ತಿಳಿಸಿದರು.
ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ಡಿಪಸನ್ ಕನ್ಸಲಂಟೆನ್ಸಿ ಪ್ರೈವೆಟ್ ಲಿಮಿಟೆಡನ್ ನಿರ್ದೇಶಕರಾದ ರಾಘವೇಂದ್ರ ದಿಪಾಲಿ ಅವರು ಮಾತನಾಡಿ ‘ಸಂವಹನ ಕೌಶಲ್ಯವು ಉದ್ಯೋಗ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಮತ್ತು ನಾಯಕತ್ವ ಗುಣಗಳ ಬೆಳವಣಿಗೆ ಸಮಾಜದ ಸ್ವಾಸ್ಥವನ್ನು ಕಾಪಾಡುತ್ತದೆ. ಪ್ರತಿಯೊಬ್ಬರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ನಾಯಕತ್ವ ಗುಣವುಳ್ಳವರು ಯಶಸ್ಸು ಹಾಗೂ ವೈಫಲ್ಯಗಳನ್ನು ಸಮಾನವಾಗಿ ಸ್ವೀಕರಿಸಿ, ಇತರರಿಗೆ ಮಾದರಿಯಾಗಿರುತ್ತಾರೆ. ವ್ಯಕ್ತಿತ್ವ ವಿಕಸನಕ್ಕೆ ಕಲಿಕೆ ತುಂಬಾ ಮುಖ್ಯ ಹೀಗಾಗಿ ವಿದ್ಯಾರ್ಥಿಗಳು ಹೆಚ್ಚು-ಹೆಚ್ಚು ಅಧ್ಯಯನವನ್ನು ಮಾಡಿ, ಕಲಿಕಾ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಪ್ರೊ. ಬಿ.ಜೆ. ಕುಂಬಾರ, ಡಾ. ಜಿನದತ್ತ ಹಡಗಲಿ, ಡಾ. ಶ್ರೀಕಾಂತ ಕುಲಕರ್ಣಿ, ಮಂಜುನಾಥ ಮುನವಳ್ಳಿ, ಶ್ರೀಮತಿ. ಜಯಲಕ್ಷ್ಮಿ ಕುಂಬಾರ, ಕು. ಹರ್ಷಿತಾ ಉಪಾದ್ಯೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕು. ಸೀಮಾ ಮಾದಿಕ್ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಜಿ.ಕೃಷ್ಣಮೂರ್ತಿ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಆಡೂರ ಪರಿಚಯಿಸಿದರು. ಶ್ರೀಮತಿ. ಮೇಘನಾ ಮನೋಹರ ವಂದಿಸಿದರು. ಕು. ಮಂಜರಿ ಕುಲಕರ್ಣಿ ಮತ್ತು ಪ್ರಶಾಂತ ಎ. ತಾಂತ್ರಿಕ ಸಹಾಯ ಒದಗಿಸಿದರು.