ನಿರಂತರ ಅಭ್ಯಾಸದಲ್ಲಿ ತೊಡಗಿದರೆ ಯಶಸ್ಸು ಸಾಧ್ಯ

ಅಫಜಲಪುರ: ಎ.1:ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ತಮ್ಮ ಸಮಯವನ್ನು ವ್ಯರ್ಥ ಮಾಡದೆ ನಿರಂತರ ಅಭ್ಯಾಸದಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ವೈ.ಪಾಟೀಲ್ ತಿಳಿಸಿದರು.

ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಸರಸ್ವತಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬರುತ್ತಿರುವುದು ನಮಗೆ ಸಂತಸ ತಂದಿದೆ. ಹೀಗಾಗಿ ಈ ಶಿಕ್ಷಣ ಸಂಸ್ಥೆಯ ಸವಾರ್ಂಗೀಣ ಅಭಿವೃದ್ಧಿಗೆ ನಮ್ಮ ಸಹಕಾರ ಇರಲಿದೆ ಎಂದರು.

ಖ್ಯಾತ ವೈದ್ಯ ಡಾ.ಸಂಜೀವಕುಮಾರ ಎಂ.ವೈ ಪಾಟೀಲ್ ಮಾತನಾಡಿ, ಇಂದಿನ ಮುಂದುವರಿದ ಅತ್ಯಾಧುನಿಕ ತಂತ್ರಜ್ನಾನದ ಯುಗದಲ್ಲಿ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು.

ಸಾನಿಧ್ಯ ವಹಿಸಿದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಅತನೂರಿನ ಅಭಿನವ ಗುರುಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮುಖಂಡ ಮಹಾಂತೇಶ ಪಾಟೀಲ್ ಮಾತನಾಡಿದರು.

ಶಿಕ್ಷಕ ಬಸವರಾಜ ಪುಲಾರಿ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಗುರುಪಾದಯ್ಯ ಚರಂತಿಮಠ, ಸಿದ್ದಯ್ಯ ಆಕಾಶಮಠ, ಪ್ರಕಾಶ ಜಮಾದಾರ, ಭಗವಂತರಾಯ ಅಳ್ಳಗಿ, ವಿಠ್ಠಲ ನಾಟೀಕಾರ, ರಮೇಶ ಹೂಗಾರ, ಈರಣ್ಣ ಪಂಚಕಟ್ಟಿ, ಡಿ.ಕೆ ಶಿವಕುಮಾರ, ದೇವಿಂದ್ರ ಬಡಿಗೇರ, ರೇವಣಸಿದ್ಧ ಪೂಜಾರಿ, ವಿವೇಕ ಹುಲಸೂರಕರ ಮುಂತಾದವರು ಆಗಮಿಸಿದ್ದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಯಲ್ಲಪ್ಪ ತಳವಾರ, ಕಾರ್ಯದರ್ಶಿ ಚಂದ್ರಕಾಂತ ನಾಯ್ಕೋಡಿ, ನಿರ್ದೇಶಕರಾದ ಶಿವಕುಮಾರ ಚರಂತಿಮಠ, ಭಾಗಪ್ಪ ತಳವಾರ, ಶ್ರೀಮಂತ ಮ್ಯಾಕೇರಿ, ಶಾಮರಾಯ ಡೊಕ್ಕ, ಸಿದ್ದಪ್ಪ ತಳವಾರ, ಮುಖ್ಯಗುರು ಪ್ರಭಾವತಿ ಚಿನಮಳ್ಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಜರುಗಿದ ಸಾಂಸ್ಕøತಿಕ ಚಟುವಟಿಕೆಗಳು ಎಲ್ಲರ ಗಮನ ಸೆಳೆದವು.