ನಿರಂತರ ಅಧ್ಯಯನ ವಕೀಲ ವೃತ್ತಿಯ ಯಶಸ್ಸಿಗೆ ಅನಿವಾರ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ,ಅ.೩೦-`ವಿದ್ವತ್‌ಪೂರ್ಣ’ ಎಂಬ ವಿಶೇಷಣದ ಗೌರವಕ್ಕೆ ಪಾತ್ರರಾಗಿರುವ ವಕೀಲರು ಸದಾ ಅಧ್ಯಯನ ನಿರತ ವಿದ್ಯಾರ್ಥಿಗಳಾಗಿರಬೇಕು. ನ್ಯಾಯವಾದಿ ಅಧ್ಯಯನವನ್ನು ನಿಲ್ಲಿಸಿದ ದಿನವೇ ಆತನಲ್ಲಿರುವ `ವಕೀಲ’ ಸತ್ತು ಹೋಗುತ್ತಾನೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ, ಹಿರಿಯ ವಕೀಲ ಹಾಗೂ “ವಕೀಲ ಸಂರP್ಷÀಣಾ ಮಸೂದೆ” ಕರಡಿನ ರೂವಾರಿ ಕೆ. ಕೋಟೇಶ್ವರರಾವ್ ಪುನರ್‌ಪ್ರತಿಪಾದಿಸಿದರು.ಅವರು ನಗರದ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ಸಿಓಪಿ ಮತ್ತು ವಕೀಲ ಸಂರP್ಷÀಣಾ ಕಾಯ್ದೆಯ ಕುರಿತು ನಡೆದ ಸಮಾಲೋಚನಾ ಸಭೆಯನ್ನು ಉz್ದೆÃಶಿಸಿ ಮಾತನಾಡಿದರು. ಕಾನೂನು ಕಾಲೇಜಿನಲ್ಲಿ ಸಂಪಾದಿಸುವ e್ಞÁನ ಶೇಕಡ ಒಂದು ಮಾತ್ರ. ಉಳಿದ ಶೇ. 99ನ್ನು ವಕೀಲರ ವೃತ್ತಿಯಲ್ಲಿ ನಿರತರಾಗಬೇಕಾದಾಗ ಕಲಿಯಬೇಕಾಗುತ್ತದೆ. ಪ್ರಾಮಾಣಿಕತೆಯನ್ನು ರೂಢಿಸಿಕೊಂಡು ಸತತ ಓದಿನಿಂದ ಕಾನೂನುಗಳ ಮೇಲೆ ಹಿಡಿತ ಮತ್ತು ಪ್ರಭುತ್ವ ಸಾಧಿಸಿ, ಪ್ರತಿಭೆ-ಪಾಂಡಿತ್ಯಗಳ ಮೂಲಕ ನ್ಯಾಯಾಲಯದಲ್ಲಿ ವಾದಿಸಿ, ತಮ್ಮ ಕಕ್ಷಿದಾರರಾಗಿ ಅನುಕೂಲವಾಗುವ ಆದೇಶವನ್ನು ನ್ಯಾಯಾಲಯಗಳಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದರು.ದೇಶಾದ್ಯAತ ವಕೀಲರ ಮೇಲೆ ಹ¯್ಲÉಯ ಪ್ರಕರಣಗಳು ಹಾಗೂ ಪೊಲೀಸ್ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದು, ಅವುಗಳಿಂದ ವಕೀಲರನ್ನು ರಕ್ಷಿಸುವುದೇ, `ವಕೀಲರ ಸಂರP್ಷÀಣೆ ಕಾಯಿದೆ’ ಯ ಉz್ದÉÃಶ. ತಾವು ಸರ್ಕಾರಕ್ಕೆ ಸಲ್ಲಿಸಿರುವ ಕರಡು ಪ್ರತಿಯ ಕನ್ನಡ ಭಾಷಾಂತರ ನಡೆಯುತ್ತಿದ್ದು, ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆ ವiಂಡನೆಯಾಗಲಿರುವ ಭರವಸೆ ಇದೆ. ಮುಖ್ಯಮಂತ್ರಿಯವರು ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸಿರುವುದನ್ನು ಅವರು ಸಭೆಯ ಗಮನಕ್ಕೆ ತಂದರು. ವಕೀಲರನ್ನು ಹ¯್ಲÉಗಳಿಂದ ರಕ್ಷಿಸುವ ಕಾನೂನುಗಳು ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಜಾರಿಯಲ್ಲಿವೆ. ರಾಜಸ್ಥಾನ ರಾಜ್ಯದಲ್ಲಿ ಈ ಬಗೆಯ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದೆ ಎಂದವರು ವಿವರಿಸಿದರು.ದೇಶದ ವಿವಿಧ ನ್ಯಾಯಾಲಯಗಳಲ್ಲಿ ಈಗ ಸುಮಾರು 17 ಲP್ಷÀ ವಕೀಲರು ವೃತ್ತಿ ನಿರತರಾಗಿದ್ದು, ಇವರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ವಕೀಲರು ಇz್ದÁರೆ ಎಂದು ಕೋಟೇಶ್ವರರಾವ್ ಮಾಹಿತಿ ನೀಡಿದರು. ಕೊರೋನ ಮಾರಿಯ ಸಂದರ್ಭದಲ್ಲಿ ಮೃತರಾದ ಸುಮಾರು 320 ವಕೀಲರಿಗೆ ಪರಿಷತ್ತು ಧನಸಹಾಯ ನೀಡಿತ್ತು ಎಂದರು. ವಕೀಲರ ಕಲ್ಯಾಣ ನಿಧಿ, ನೋಂದಣಿ ನವೀಕರಣ, ಪರಿಷತ್ತಿನ ರಾಜ್ಯ ಪ್ರಾತಿನಿಧ್ಯದಲ್ಲಿ ಅಸಮಾನತೆ ಮುಂತಾದ ವೃತ್ತಿ ಸಂಬAಧಿತ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ವಕೀಲರ ಸಂಘಗಳಿಗೆ ಸರ್ಕಾರ ನೀಡುತ್ತಿದ್ದ ವಾರ್ಷಿಕ ಪುಸ್ತಕ ಹಾಗೂ ಪೀಠೋಪಕರಣ ಅನುದಾನ ಈಚಿನ ವರ್ಷಗಳÀಲ್ಲಿ ನಿಲ್ಲಿಸಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.ಸಭೆಯ ಅಧ್ಯP್ಷÀತೆಯನ್ನು ವಹಿಸಿದ್ದ ಜಿ¯್ಲÁ ವಕೀಲರ ಸಂಘದ ಅಧ್ಯP್ಷÀ ಎಲ್.ಹೆಚ್. ಅರುಣ್‌ಕುಮಾರ್ ಅವರು ಮಾತನಾಡಿ, ವಕೀಲರ ಪರಿಷತ್ತಿನ ಹಲವಾರು ಪಾರದರ್ಶಕ ಕಾರ್ಯಗಳಿಗೆ ಸಾಕ್ಷಿಯಾಗಿರುವ ಕೋಟೇಶ್ವರರಾವ್ ಅವರು, ವಕೀಲರ ಸಂರP್ಷÀಣಾ ಕಾಯ್ದೆಯನ್ನು ರೂಪಿಸಿದವರು ಮತ್ತು ರಾಜ್ಯದ ಯಾವುದೇ ಭಾಗದಲ್ಲಿ ವಕೀಲರಿಗೆ ನಡೆಯುವ ಅನ್ಯಾಯದ ವಿರುದ್ಧ ಧ್ವನಿಎತ್ತಿ ಹೋರಾಡುವ ವ್ಯಕ್ತಿಯಾಗಿz್ದÁರೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಜಿ¯್ಲÁ ವಕೀಲರ ಸಂಘದ ಉಪಾಧ್ಯP್ಷÀರಾದ ಜಿ.ಕೆ. ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್. ಬಸವರಾಜ್, ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ್, ಜಗಳೂರು ವಕೀಲರ ಸಂಘದ ಅಧ್ಯP್ಷÀರಾದ ಓಂಕಾರೇಶ್ವರ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ್‌ಕುಮಾರ್ ಜಿ.ಜೆ, ಚೌಡಪ್ಪ, ನೀಲಕಂಠಯ್ಯ ಕೆ.ಎಂ., ಆರ್.ಭಾಗ್ಯಲಕ್ಷ್ಮಿ, ನಾಗರಾಜ್ ಎಲ್., ಚೌಡಪ್ಪ ಎಂ., ರಾಘವೇಂದ್ರ ಎಂ. ಮತ್ತು ವಕೀಲರು ಭಾಗವಹಿಸಿದ್ದರು.