ವಿಜಯಪುರ:ಜೂ.27: ನಿರಂತರ ಅಧ್ಯಯನದಿಂದ ಶಬ್ದಭಂಡಾರ ಹೆಚ್ಚಾಗಿ ಜ್ಞಾನದ ಕ್ಷಿತಿಜ ವಿಸ್ತರಿಸುತ್ತದೆ. ತನ್ಮೂಲಕ ಉತ್ಕøಷ್ಟ ಸಾಹಿತ್ಯ ರಚಿಸಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಡಾ. ಮುರುಗೇಶ ಸಂಗಮ ಹೇಳಿದರು.
ಇಲ್ಲಿನ ಮುರಾನಕೇರಿಯ ಈಶ್ವರಲಿಂಗ ಕಲ್ಯಾಣಮಂಟಪದಲ್ಲಿ ಕಪ್ಪತ್ತಗಿರಿ ಸಾಹಿತ್ಯ? ಸಾಂಸ್ಕೃತಿಕ ಕಲಾ ವೇದಿಕೆ ಉದ್ಘಾಟನೆ ಹಾಗೂ ಪದಗ್ರಹಣ ನಿಮಿತ್ತ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕವಿತೆಗೆ ಭಾವ? ಧ್ವನಿ? ಅರ್ಥವಂತಿಕೆ ಜೊತೆಗೆ ಸಂದೇಶ ಇರಬೇಕು. ಅಂಥ ಅರ್ಥಪೂರ್ಣ ಕವಿತೆಗಳು ಬಹುಬೇಗನೆ ಓದುಗರ ಮನವನ್ನು ಮುಟ್ಟುತ್ತವೆ. ಯುವಕವಿಗಳು ಹಿರಿಯ ಸಾಹಿತಿಗಳ ಕವನಗಳನ್ನು ಇಷ್ಟಪಟ್ಟು ಓದುತ್ತಿದ್ದರೆ? ಗಟ್ಟಿ ಕಾವ್ಯ ರಚನೆ ಸುಲಭಸಾಧ್ಯ. ಕುವೆಂಪು? ಬೇಂದ್ರೆ? ಶಂಗು ಬಿರಾದಾರರ ಸಾಹಿತ್ಯ ಅಲ್ಲದೆ ಇಂದಿನ ಕಾವ್ಯಗಳ ಓದು ತುಂಬ ಅಗತ್ಯ ಎಂದರು.
ಹಿರಿಯ ಸಾಹಿತಿ ಬೌರಮ್ಮ ಪತಂಗಿ? ವೇದಿಕೆಯ ರಾಜ್ಯಾಧ್ಯಕ್ಷೆ ಚಂದ್ರಕಲಾ ಇಟಗಿಮಠ? ಜಿಲ್ಲಾಧ್ಯಕ್ಷೆ ಸುಜ್ಞಾನಿ ಪಾಟೀಲ ಅತಿಥಿಯಾಗಿದ್ದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಶಿವಾಜಿ ಮೋರೆ? ಈರಮ್ಮ ಬೋನೂರ? ಯಮನೂರಪ್ಪ ಅರಬಿ? ಪ್ರಿಯಾ ಹರಿದಾಸ? ಶಿವಲೀಲಾ ಕೋರಿ? ಸೌಮ್ಯ ಕುಲಕರ್ಣಿ? ಸಾಗರ ಕುಲಕರ್ಣಿ? ಆಕಾಶ ಮ್ಯಾಗೇರಿ? ಶಿವಲೀಲಾ ಧನ್ಯಾಳ? ಸಿದ್ರಾಮಪ್ಪ ಗಬಸಾವಳಗಿ? ಸಾವಿತ್ರಿ ಅಂಕಲಗಿ? ರಾಹುಲ್ ಕಾಂಬಳೆ? ಪ್ರಭಯ್ಯ ಹಿರೇಮಠ? ಗಂಗಾಬಾಯಿ ಇಂಡಿ ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ತಾರಾಮತಿ ಪಾಟೀಲ? ಶಿಕ್ಷಕಿ ಮಹಾದೇವಿ ಹತ್ತಿ ? ನಿಂಗನಗೌಡ ಪಾಟೀಲ? ಪ್ರಕಾಶ ಜಹಾಗೀರದಾರ? ನಾಗಮ್ಮ ಉಮರ್ಜಿ? ಜಯಶ್ರೀ ಮಠಪತಿ? ಪೂಜಾ ನಾಶಿ ಸೇರಿದಂತೆ ಇತರರಿದ್ದರು. ಕವಯತ್ರಿ ಕಮಲಾ ಗೆಜ್ಜಿ ಕಾರ್ಯಕ್ರಮ ನಿರೂಪಿಸಿ? ವಂದಿಸಿದರು.