ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಅ.9: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಾಯನ ಮಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ರಾಜು ಪೂಜಾರಿ ಮಾತನಾಡಿದರು.
ತಾಲೂಕಿನ ಘಾಟಬೋರಳ ಗ್ರಾಮದ ಪ್ರಕಾಶ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ನಡೆದ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ವಾತವರಣ ಪ್ರಕಾಶ ವಿದ್ಯಾಲಯದಲ್ಲಿದೆ. ತಂತ್ರಜ್ಞಾನ ಮುಂದುವರಿದಂತೆ ದಿನದಿಂದ ದಿನಕ್ಕೆ ಸ್ಪರ್ಧೆ ಕೂಡ ಹೆಚ್ಚುತ್ತಿದೆ. ಹೀಗಾಗಿ ಶಾಲಾ ಕಾಲೇಜುಗಳ ವ್ಯಾಸಂಗ ಅವಧಿಯಲ್ಲಿ ಬೋಧಕರು ನೀಡಿರುವ ಸಲಹೆ ಸೂಚನೆಗಳನ್ನು ವಿದ್ಯಾರ್ಥಿಗಳು ಚಾಚು ತಪ್ಪದೇ ಪಾಲಿಸಬೇಕು. ಜತೆಗೆ ನಮ್ಮ ಸಂಸ್ಕøತಿ ಪರಂಪರೆಯನ್ನು ಅರಿತು ಗುರು ಹಿರಿಯರನ್ನ ಗೌರವ ಮನೋಭಾವದಿಂದ ಕಾಣಬೇಕು ಎಂದು ತಿಳಿಸಿದರು.
ಪ್ರಕಾಶ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲ ಭೀಮರಾವ ಕುಲಕರ್ಣಿ ಮಾತನಾಡಿ, ಭಾರತ ದೇಶದ ಭವಿಷ್ಯ ಬೆಳಗುವ ಸಾಮಥ್ರ್ಯ ಕೇವಲ ವಿದ್ಯಾರ್ಥಿಗಳಲ್ಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ಸಾಧನೆಗಾಗಿ ಪ್ರತಿಯೊಬ್ಬರ ಸತತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಹಳ್ಳಿಖೇಡ (ಕೆ) ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ದಾಡಗೆ, ರಾಮಚಂದ್ರ ವೀರಪ್ಪ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ ಕಠಳ್ಳಿ, ಉಪನ್ಯಾಕರಾದ ಮಹಾದೇವರಡ್ಡಿ ವಾಡೇಕರ್, ಸಂಜುಕುಮಾರ ಸೋನಕಾಂಬಳೆ, ಅಹಲ್ಯಬಾಯಿ ಕಾಂಬಳೆ, ಸಚೀನ್ ದಾಡಗೆ, ಜಗನಾಥ ಜಮಾದಾರ ಇದ್ದರು. ಆರುತಿ ಔಂಟೆ ಸ್ವಾಗತಿಸಿದರು. ಅಶ್ವಿನಿ ಜಾಧವ ನಿರೂಪಿಸಿದರು. ಅಶ್ವಿನಿ ಜಮಾದಾರ ವಂದಿಸಿದರು.