ನಿರಂತರವಾಗಿ ಕನ್ನಡ ಕಟ್ಟಿ ಬೆಳಸಬೇಕು- ರಂಗನಾಥ

ರಾಯಚೂರು,ನ.೮- ತೆಲುಗು ಮತ್ತು ಉರ್ದು ಭಾಷೆಗಳ ಅತಿಯಾದ ಪ್ರಭಾವವಿರುವ ಗಡಿಭಾಗವಾದ ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡ ಕಟ್ಟಿ ಬೆಳೆಸಬೇಕಾಗಿದೆ ಎಂದು ಗಂಗಾಮತಸ್ಥ ನೌಕರರ ಸಂಘದ ಅಧ್ಯಕ್ಷ ಹಾಗೂ ಎಪಿಎಂಸಿ ಕಾರ್ಯದರ್ಶಿ ರಂಗನಾಥ್ ಅವರು ಹೇಳಿದರು
ಅವರಿಂದು ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ನಗರದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಹಮ್ಮಿಕೊಂಡು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡ ಬೆಳೆಸಬೇಕಾಗಿದೆ. ಕೇವಲ ನವೆಂಬರ್ ಒಂದರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿ ಮರೆಯುವಂತಾಗಬಾರದು. ಕನ್ನಡ ಬೆಳೆಸುವ ಕೆಲಸ ನಿರಂತರವಾಗಿರಬೇಕು. ಕರ್ನಾಟಕ ರಾಜ್ಯವು ಹಲವು ವೈವಿಧ್ಯತೆಗಳಿಂದ ಕೂಡಿದೆ. ಇಲ್ಲಿ ಹುಟ್ಟುವ ಕಾವೇರಿ ನದಿ, ನೆಲ-ಜಲ ಕೋಟೆ ಮುಂತಾದ ಸಂಪತ್ತನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದರು.
ಜಿಲ್ಲೆಯಲ್ಲಿ ತೆಲುಗು ಮಾತನಾಡುವ ಜನರಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸಿ ಕನ್ನಡದ ಅಭಿಮಾನ ಹೆಚ್ಚಿಸಬೇಕಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಜೈನ್ ಹೇಳಿದರು.
ಜಿಲ್ಲೆಯ ಪ್ರತಿಯೊಬ್ಬರಲ್ಲಿ ಕನ್ನಡದ ಅಭಿಮಾನ ಮತ್ತು ಕನ್ನಡದ ಕಿಚ್ಚಿದೆ ಅದನ್ನು ಜಾಗೃತಗೊಳಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಚಳುವಳಿ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜ್, ವೆಂಕಟೇಶ್, ಭೀಮಣ್ಣ, ನರಸಿಂಹ, ಈರಣ್ಣ, ಚಿತ್ರಗಾರ, ರಾಜು ಟೈಲರ್, ಗುರುರಾಜ್, ನಾಗಪ್ಪ, ಶರಣಪ್ಪ ನಕ್ಕಾ, ಶೇರ್ ಮಾರಪ್ಪ, ಶ್ರೀನಿವಾಸ್, ಭರತ್ ಅಂಗಡಿ, ಶ್ರೀನು, ವಿನೋದ್, ಅನಿಲ್, ರಾಘು, ವೇಣು, ಅನಿಲ್ ಕುಮಾರ್, ಹನುಮಂತು, ತುಳಜಾರಾಮ್, ನಾಗರಾಜ್, ಉರುಕುಂದ, ಬೊಂಬಾಯಿ ವೆಂಕಟೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.