ನಿರಂಜನಮಠ ಉಳಿವಿಗಾಗಿ ನಂಜನಗೂಡಿನಿಂದ ಪಾದಯಾತ್ರೆ

ನಂಜನಗೂಡು: ಸೆ.26: ನಂಜನಗೂಡಿನ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಲ್ಲನಮೂಲೆ ಮಠ ದಲ್ಲಿ ಉಪಾಹಾರ ಸೇವಿಸಿ ಪಾದಯಾತ್ರೆಯನ್ನು ಮಠಾಧೀಶರು ಮತ್ತು ಮುಖಂಡರು ನಡೆಸಿದರು.
ನಂಜನಗೂಡಿನ ದೇವಿರಮ್ಮನಹಳ್ಳಿ ಗ್ರಾಮದಲ್ಲಿರುವ ಶ್ರೀ ಶರಣ ಮಠಾಧ್ಯಕ್ಷರಾದ ನಾಗ ರಾಜೇಂದ್ರ ಮಹಾಸ್ವಾಮಿಗಳು ಮತ್ತು ವೀರಶೈವ ಲಿಂಗಾಯಿತ ತಾಲ್ಲೂಕು ಅಧ್ಯಕ್ಷ ದೇವನೂರು ಬುಲೆಟ್ ಮಹದೇವಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯಿತ ಮುಖಂಡರು ಮತ್ತು ಕುಲಬಾಂಧವರು ಪಾದಯಾತ್ರೆಯಲ್ಲಿ ಭಾಗಿಯಾಗಿದರು.
ನಂತರ ಮಾತನಾಡಿದ ವೀರಶೈವ ಲಿಂಗಾಯಿತ ತಾಲ್ಲೂಕು ಅಧ್ಯಕ್ಷ ಬುಲೆಟ್ ಮಹದೇವಪ್ಪ ಮೈಸೂರಿನ ನಿರಂಜನಮಠ ಉಳಿವಿಗಾಗಿ ನಂಜನಗೂಡಿನಿಂದ ಬಹಳಷ್ಟು ಬೆಂಬಲ ಸೂಚಿಸಲಾಗಿದೆ. ರಾಜಕೀಯವನ್ನು ಬದಿಗೊತ್ತಿ ಎಲ್ಲ ಪಕ್ಷದ ಮುಖಂಡರು ವೀರಶೈವ ಸಾರ್ವಜನಿಕರು ಈ ಮಟ್ಟದ ಉಳಿವಿಗಾಗಿ ಇಂದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಸರ್ಕಾರ ಮಧ್ಯಪ್ರವೇಶ ಮಾಡಿ ಮೈಸೂರಿನ ನಿರಂಜನ ಮಠವನ್ನು ವೀರಶೈವ ಲಿಂಗಾಯಿತರ ವಶಕ್ಕೆ ನೀಡಬೇಕು. ಅದರ ಪಾರಂಪರಿಕ ಇತಿಹಾಸವನ್ನು ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡಬೇಕು ಸರ್ಕಾರ ಎಚ್ಚೆತ್ತು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಂದರ್ಭದಲ್ಲಿ ಮಾತನಾಡಿದರು.ನಂಜನಗೂಡಿನ ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿಗಳು ಮಾತನಾಡಿ ಮೈಸೂರಿನ ಪಾರಂಪರಿಕ ನಿರಂಜನ ಮಟ್ಟದ ಉಳಿವಿಗಾಗಿ ಇಂದು ನಂಜನಗೂಡಿನಲ್ಲಿ ಮಠಾಧೀಶರ ಜೊತೆಗೂಡಿ ಸಾರ್ವಜನಿಕ ಕುಲಬಾಂಧವರು ಕೈ ಜೋಡಿಸಿರುವುದು ಸಂತಸದ ಸಂಗತಿ.
ನಿರಂಜನ ಮಠ ಇತಿಹಾಸಪೂರ್ವದ ಪ್ರಸಿದ್ಧ ಮಠವಾಗಿತ್ತು ಅದರ ಉಳಿವಿಗಾಗಿ ಅದನ್ನು ನಮ್ಮ ವಶಕ್ಕೆ ಸರ್ಕಾರ ನೀಡಬೇಕು ಎಂದು ನಾವು ಶಕ್ತಿ ಪ್ರದರ್ಶನ ಮಾಡುತ್ತಿದ್ದೇವೆ. ಇದಕ್ಕೆ ಸಂಪೂರ್ಣವಾಗಿ ನಂಜನಗೂಡಿನ ಮಲ್ಲನಮೂಲೆ ಮಠದ ಶ್ರೀ ಶ್ರೀ ಚನ್ನಕೇಶವ ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ ಅಲ್ಲದೆ ಕುರಹಟ್ಟಿ ಅಲ್ಲರಿ ಮತ್ತು ಇತರ ಮಠಾಧೀಶರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ನಾವು ಯಾವುದೇ ಕಾರಣಕ್ಕೂ ನಿರಂಜನ ಮಟ್ಟವನ್ನು ಬೇರೆಯವರ ವಶಕ್ಕೆ ಕೊಡಲು ಬಿಡುವುದಿಲ್ಲ ಸರ್ಕಾರ ಮಧ್ಯಪ್ರವೇಶ ಮಾಡಿ ನಮ್ಮ ನಮ್ಮ ವಶಕ್ಕೆ ಕೊಡಬೇಕು ಎಂದು ಆಗ್ರಹಪಡಿಸಿದರು. ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಮಲ್ಲನಮೂಲೆ ಮಠದಲ್ಲಿ ಉಪಾಹಾರ ಸೇವಿಸಿ ತಾಲ್ಲೂಕಿನ ವೀರಶೈವ ಲಿಂಗಾಯಿತ ಮುಖಂಡರು ಮತ್ತು ಕುಲಬಾಂಧವರು ಹೆಚ್ಚಿನ ರೀತಿಯಲ್ಲಿ ಪಾದಯಾತ್ರೆಗೆ ಸಹಕಾರ ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ಶ್ರೀ ಶ್ರೀ ಚನ್ನಬಸವ ಸ್ವಾಮೀಜಿಗಳು ಮಲ್ಲಮೂಲೆ ಮಠ ಶರಣ ಸಂಗಮ ಮಠ ದೇವಿರಮ್ಮನಹಳ್ಳಿ ನಾಗ ರಾಜೇಂದ್ರ ಸ್ವಾಮೀಜಿಗಳು, ಕುರಟ್ಟಿ ಗ್ರಾಮದ ಶ್ರೀಗಳು ಎಚ್ ಕಳ್ಳಿ ಗ್ರಾಮದ ಶ್ರೀಗಳು ಭುಜಂಗನ ಉಂಡಿ ಗ್ರಾಮದ ಶ್ರೀಗಳು ಅಲ್ಲ ರೇ ಗ್ರಾಮದ ಶ್ರೀಗಳು, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬುಲೆಟ್ ಮಹಾದೇವಪ್ಪ, ಉಪಾಧ್ಯಕ್ಷ ಚಿನ್ನಸ್ವಾಮಿ ಕಸವನಹಳ್ಳಿ ಮತ್ತು ಮಂಜುಳಾ ಪ್ರಧಾನ ಕಾರ್ಯದರ್ಶಿ ಬದನವಾಳು ಮಂಜು, ಮಧು, ಕಾರ್ಯದರ್ಶಿ ತಾಂಡುಪುರ ಶಿವಬಸಪ್ಪ, ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಪ್ಪ, ಕೆಂಪಣ್ಣ, ಶಿವನಾಗಪ್ಪ, ಬಸವಣ್ಣ, ಅಣ್ಣ, ಬಸವಣ್ಣ, ಗುರುಮಲ್ಲಪ್ಪ, ಸರ್ವಮಂಗಲ, ಪ್ರಕಾಶ್, ನಂಜಪ್ಪ, ಬಸವಟ್ಟಿಗೆ, ಶಿವು, ಯುವ ಘಟಕದ ಅಧ್ಯಕ್ಷ ಅಶೋಕ, ದೇಬೂರು ಕಸುವಿನಹಳ್ಳಿ ಮಹೇಶ್, ಮುದ್ದಳ್ಳಿ ಪ್ರಕಾಶ್, ಮಂಜುಳಾ ಮಧು, ಲೀಲಾವತಿ, ಗೌರಮ್ಮ, ಮಂಜುಳಾ, ಶಶಿಕಲಾ, ಮಹಿಳಾ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಯುವ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.