ನಿಯೋಜಿತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ: ಭರತ್

????????????????????????????????????


ಗದಗ,ನ 18: ಧಾರವಾಡ ಸ್ಥಳೀಯ ಸಂಸ್ಥೆಗಳ ದ್ವೈವಾರ್ಷಿಕ ಚುನಾವಣೆಯನ್ನು ಸುಗಮವಾಗಿ ಜರುಗಿಸಲು ರಚಿಸಲಾದ ವಿವಿಧ ತಂಡಗಳ ಸದಸ್ಯರು ಚುನಾವಣಾ ಕಾರ್ಯ ಮುಕ್ತಾಯವಾಗುವವರೆಗೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡೆಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ ಎಸ್ ಸೂಚಿಸಿದರು.
ಬುಧವಾರ ಸಾಯಂಕಾಲ ಜಿಲ್ಲಾ ಪಂಚಾಯತ ವಿಡೀಯೋ ಸಭಾಂಗಣದಲ್ಲಿ ಜರುಗಿದ ಚುನಾವಣೆಗೆ ನಿಯೋಜಿಸಲಾದ ಜಿಲ್ಲೆಯ ವಿವಿಧ ತಂಡಗಳ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾದರಿ ಸಂಹಿತೆ ಅನುಷ್ಠಾನ ಕುರಿತು ಮಾತನಾಡಿದರು.
ಜಿಲ್ಲಾದ್ಯಂತ ಡಿ.16 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರಲಿದೆ. ಜಿಲ್ಲೆಯ ಆಯಾ ತಾಲೂಕುಗಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮಾದರಿ ನೀತಿ ಸಂಹಿತೆಯ ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ತಾಲೂಕುವಾರು ಈ ಅಧಿಕಾರಿಗಳು ಸಭೆ ಕರೆದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಾಗದಂತೆ ವಿವಿಧ ತಂಡಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತದಾರರು ಅಧಿಕವಾಗಿರುವದರಿಂದ ಗ್ರಾಮೀಣ ಭಾಗದೆಡೆ ನಿಯೋಜಿತ ಅಧಿಕಾರಿಗಳು ನಿಗಾವಹಿಸಬೆಕು. ಹಾಗೂ ಯಾವುದೇ ರೀತಿಯ ಕಾಮಗಾರಿ ಶಂಕು ಸ್ಥಾಪನೆ, ಉದ್ಘಾಟನೆ, ಫಲಾನುಭವಿಗಳ ಆಯ್ಕೆ, ಸವಲತ್ತು ವಿತರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು. ಒಟ್ಟಾರೆ ಚುನಾವಣೆ ಮುಗಿಯುವವರೆಗೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಆಯಾ ತಾಲೂಕುಗಳ ಎಂ.ಸಿ.ಸಿ. ನೋಡೆಲ್ ಅಧಿಕಾರಿಗಳು, ವೀಚಕ್ಷಣಾ ದಳ, ವೀಡಿಯೋ ತಂಡಗಳ ನಿಯೋಜಿತ ಅಧಿಕಾರಿಗಳು ಹಾಜರಿದ್ದರು.