ನಿಯಮ ಮೀರಿ ಸಾರ್ವಜನಿಕರ ಓಡಾಟ

ಹುಬ್ಬಳ್ಳಿ ಏ 30 : ಕೊರೊನಾ ಎರಡನೇ ಅಲೆಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆ. 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲವೆಡೆ 10.30 ಗಂಟೆಯಾದರೂ ಕ್ಯಾರೆ ಎನ್ನದ ಸಾರ್ವಜನಿಕರ ಓಡಾಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪೆÇಲೀಸರು ಕಾರ್ಯಾಚರಣೆ ನಡೆಸುತ್ತಿರುವುದು ಕಂಡು ಬಂದಿತು.
ನಗರದಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವವರನ್ನು ನಗರದ ಪ್ರಮುಖ ವೃತ್ತಗಳಲ್ಲಿ ಪೆÇಲೀಸರು ವಿಚಾರಣೆ ನಡೆಸಿ ಸರ್ಕಾರ ನಿಗದಿಪಡಿಸಿದ ಸಮಯದೊಳಗೆ ಮನೆಗೆ ಸೇರಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಅಗತ್ಯ ಕೆಲಸಗಳಿಗೆ ತೆರಳುವವರಿಗೆ ನಗರದಲ್ಲಿ ಬಿಡಲು ಅವಕಾಶ ನೀಡಿದರು.
ಕೊರೊನಾ ಮಹಾಮಾರಿ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಆದರೇ ಕೊರೊನಾ ಕಠಿಣಾತಿ ಕಠಿಣ ನಿಯಮ ಮರೆತು ಅವಳಿ ನಗರದ ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಸರ್ಕಾರ ನಿಗದಿ ಪಡಿಸಿದ ಸಮಯ ಮೀರಿದರೂ ಕೂಡಾ ಹು-ಧಾದ ಹಳೇ ಹುಬ್ಬಳ್ಳಿ, ಕೇಶ್ವಾಪೂರ, ಗಿರಣಿಚಾಲ ಸೇರಿದಂತೆ ಧಾರವಾಡದ ವಿವಿಧೆಡೆ ವ್ಯಾಪಾರಸ್ಥರು ವ್ಯಾಪಾರ ಸ್ಥಳದಿಂದ ತೆರಳಲು ಹಿಂದೇಟು ಹಾಕುವ ದೃಶ್ಯ ಕಂಡು ಬಂದಿತು.
ವ್ಯಾಪಾರಸ್ಥರು ಹಾಗೂ ಗ್ರಾಹಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು, ಕೊರೊನಾ ತಡೆಯಲು ಸೂಚಿಸಿದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದಾರೆ.
ಪೆÇಲೀಸ್ ರು 10 ಗಂಟೆಯ ರಸ್ತೆಗೆ ಇಳಿದು ಸುಮಾರು ಸಮಯದ ನಂತರ ಸಾರ್ವಜನಿಕರ ಓಡಾಟ ತಗ್ಗಿತು.
ಸಾರ್ವಜನಿಕರು ರಾಜ್ಯ ಸರ್ಕಾರದ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದ್ದು, ಸೋಂಕು ತಡೆಗೆ ಅಗತ್ಯವಾಗಿ ಶ್ರಮಿಸಿದರೇ ಸೋಂಕು ತಡೆಯಬಹುದಾಗಿದೆ.