ನಿಯಮ ಪಾಲನೆ ಮಾಡಿದ್ದರೆ ಎಲ್ಲಾರ ಮೇಲೆ ಕ್ರಮಕೈಗೊಳಿ

ತಾಲೂಕ ಆಡಳಿತ ನಿಗದಿ ಮಾಡಿದ ಸ್ಥಳದಲ್ಲಿಯೆ ತರಕಾರಿ ಮಾರಾಟ ಮಾಡಿ
ಸಿರವಾರ, ಏ.೨೮- ಕೊರೊನಾ ವೈರಸ್ ನಿಯಂತ್ರಣ ನಿಟ್ಟಿನಿಲ್ಲಿ ತೆರೆದ ಪ್ರದೇಶದಲ್ಲಿ ತರಕಾರಿ ಮಾರಾಟಕ್ಕೆ ಅವಕಾಸ ನೀಡಲಾಗಿದ್ದೂ, ಈಗಾಗಲೇ ಪಂಚಾಯತಿ ಹಾಘೂ ತಾಲೂಕ ಆಡಳಿತ ನಿಗದಿ ಮಾಡಿರುವ ಸ್ಥಳದಲ್ಲಿಯೇ ಬೆಳಗ್ಗೆ ೬-೧೦ ರವರೆಗ ಮಾರಾಟ ಮಾಡಬೇಕು ಎಂದು ಸಿರವಾರ ತಹಸೀಲ್ದಾರ ವಿಜೇಂದ್ರ ಹುಲಿನಾಯಕ ಹೇಳಿದರು.
ತಹಸೀಲ್ದಾರ ಕಛೇರಿಯಲ್ಲಿ ಪೊಲೀಸ್, ಪಂಚಾಯತಿ ಅಧಿಕಾರಿಗಳ ಸಭೇಯಲ್ಲಿ ಮಾತನಾಡಿದ ಅವರು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ತರಕಾರಿ ಮಾರಾಟವನ್ನು ತೆರೆದ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ತಿಳಿಸಲಾಗಿದೆ. ಆದರಿಂದ ಪಟ್ಟಣದಲ್ಲಿ ಬಾಲಕರ ಪ್ರೌಢಶಾಲೆ, ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಆವರಣ, ಚುಕ್ಕಿ ತೇಜಸ್ಸ್ ಮಹಲ್ ಪಕ್ಕದಲ್ಲಿ ಸ್ಥಳವನ್ನು ನಿಗದಿ ಮಾಡಲಾಗಿದೆ. ಆದರೆ ತರಕಾರಿ ಮಾರಾಟಗಾರರು ಇದಕ್ಕೆ ಕ್ಯಾತೆ ತೆಗೆದಿದ್ದಾರೆ. ಎಲ್ಲಾರೂ ಮುಂದಿನ ೧೨ ದಿನಗಳ ಕಾಲ ಸರ್ಕಾರ ನಿಗದಿ ಮಾಡಿದ ನಿಯಮಾವಳಿಗಳನ್ನು ಎಲ್ಲಾರೂ ಪಾಲನೆ ಮಾಡಬೇಕು. ಮಾರಾಟಗಾರರ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು, ಕಿರಾಣಿ, ಮಾಂಸ ಮಾರಾಟ ಸೇರಿದಂತೆ ಇನ್ನಿತರ ವ್ಯಾಪಾರಕ್ಕೆ ನಿಯಮಗಳನ್ನು ರೂಪಿಸಲಾಗುವುದು. ೧೦ ಗಂಟೆಯ ನಂತರ ಯಾರು ಸಹ ರಸ್ತೆಯ ಮೇಲೆ ಸುಮ್ಮನೆ ಓಡಾಡುವಂತಿಲ್ಲ. ಆ ರೀತಿ ಕಂಡು ಬಂದರೆ ಅವರ ಮೇಲೆ ಕ್ರಮಕೈಗೊಳಬೇಕು ಎಂದರು.
ಪಿ.ಎಸ್.ಐ ಸುಜಾತ ನಾಯಕ, ಪಂಚಾಯತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ,.ಸಮುದಾಯ ಸಂಘಟನಾಧಿಕಾರಿ ಕಂದಾಯ ನಿರೀಕ್ಷಕ ಶ್ರೀನಾಥ ಸೇರಿದಂತೆ ಇನ್ನಿತರರು ಇದ್ದರು.