ನಿಯಮ ಉಲ್ಲಂಘಿಸಿದ 470 ವಾಹನ ಸೀಜ್

ಬಳ್ಳಾರಿ, ಮೇ.27: ಉಭಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಸಂಪೂರ್ಣ ಲಾಕ್ ಡೌನ್ ನಿಯಮ‌ ಉಲ್ಲಂಘನೆ ಮಾಡಿ ರಸ್ತೆಗಳಿಗೆ ಬಂದ 470 ವಾಹನಗಳನ್ನು ನಿನ್ನೆ ಬೆಳಿಗ್ಗೆಯಿಂದ ಸಂಜೆ ವರೆಗೆ ಪೊಲೀಸರು ಸೀಜ್ ಮಾಡಿದ್ದು ನಾಲ್ಕು ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್ಪಿ ಅಡಾವತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಹಲವಡೆ ವಿನಾಕಾರಣ ವಾಹನಗಳಲ್ಲಿ ಓಡಾಡುವವರ ತಪಾಸಣೆ ನಡೆಯುತ್ತಿದೆ. ಲಾಕ್ ಡೌನ್ ವೇಳೆ ವರದಿಗಾರರಿಗೆ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಓಡಾಟಕ್ಕೆ ಅನುಮತಿ ನೀಡಿರುವುದರಿಮನದ ಕೆಲವರು ತಮ್ಮ ಬೈಕ್ ಗಳ‌ ಮೇಲೆ ಪ್ರೆಸ್ ಎಂದು ಬರೆದು ಕೊಂಡು. ಅಲ್ಲದೆ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ನಕಲಿ ಐಡಿ ಕಾರ್ಡು ಮಾಡಿಕೊಂಡು ಓಡಾಡುತ್ತಿದ್ದಾರೆ.
ಅದಕ್ಕಾಗಿ ಈಗ ಪೊಲೀಸರು ಈ ರೀತಿಯ ನಕಲಿ ಪ್ರೆಸ್, ಪತ್ರಕರ್ತರ ಬಗ್ಗೆಯೂ ತೀವ್ರ ತಪಾಸಣೆ ಮಾಡುತ್ತ ಮತ್ತು ಐಡಿ ಕಾರ್ಡು ತೋರಿಸಿದರೆ ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರಿಂದ ಕರೆ ಮಾಡಿ ನಕಲಿಗಳಲ್ಲ ಎಂದು ಕನ್ಫರ್ಮ್ ಮಾಡಿದ ಮೇಲೆ ಮಾತ್ರ ಬಿಡಲಾಗುತ್ತಿದೆ.