ನಿಯಮ ಉಲ್ಲಂಘಿಸಿದ 309 ವಾಹನಗಳ ವಶ

ಮೈಸೂರು,ಮೇ.4:- ಕೋವಿಡ್-19 ಹರಡು ವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿದ್ದು, 27/04/2021 ರಿಂದ 12/05/2021ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಮಾರ್ಗಸೂಚಿಗಳನ್ನು ಸಹ ಹೊರಡಿಸಿರುತ್ತದೆ.
ಸರ್ಕಾರದ ಕೋವಿಡ್-19 ಮಾರ್ಗಸೂಚಿಗಳ ಜಾರಿ ಸಂಬಂಧ ಮೈಸೂರು ನಗರ ಪೆÇಲೀಸರು ಈ ಕೆಳಕಂಡಂತೆ ಎಲ್ಲಾ ರೀತಿಯ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುತ್ತಾರೆ.
ಸೋಮವಾರ ಮೈಸೂರು ನಗರ ವ್ಯಾಪ್ತಿಯ ಎಲ್ಲಾ ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರನ್ನು ಪೆÇಲೀಸರು ಪರಿಶೀಲಿಸಿದ್ದು, ಈ ಸಮಯದಲ್ಲಿ ಸರ್ಕಾರದ ಲಾಕ್‍ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅನಾವಶ್ಯಕವಾಗಿ ಓಡಾಡುತ್ತಿದ್ದ ಸಾರ್ವಜನಿಕರ 289 ದ್ವಿ ಚಕ್ರ ವಾಹನಗಳು, 10 ಆಟೋ ರಿಕ್ಷಾ, 10 ಕಾರುಗಳು ಸೇರಿದಂತೆ ಒಂದೇ ದಿನದಲ್ಲಿ ಒಟ್ಟು 309 ವಾಹನಗಳನ್ನು ಪೆÇಲೀಸರು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡಿರುತ್ತಾರೆ.
ಕೋವಿಡ್-19 ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಸಂಬಂಧ ಮೈಸೂರು ನಗರದಲ್ಲಿ ಒಟ್ಟು 241 ಪ್ರಕರಣಗಳನ್ನು ದಾಖಲಿಸಿ, 38,500ರೂ. ಸ್ಥಳದಲ್ಲಿಯೇ ದಂಡ ವಿಧಿಸಿರುತ್ತಾರೆ. ಅಲ್ಲದೇ ಕೋವಿಡ್-19 ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಮತ್ತು ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ/ವ್ಯವಹಾರ ನಡೆಸಿರುವ ಅಂಗಡಿಗಳು/ ಸಂಸ್ಥೆಗಳ/ಸಾರ್ವಜನಿಕರ ವಿರುದ್ದ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) ಖಿhe ಆisಚಿsಣeಡಿ ಒಚಿಟಿಚಿgemeಟಿಣ ಚಿಛಿಣ-2005 / ಖಿhe ಏಚಿಡಿಟಿಚಿಣಚಿಞಚಿ ಇಠಿiಜemiಛಿ ಆiseಚಿses ಚಿಛಿಣ 2020 ಗಳ ಅಡಿಯಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿದ್ದಾರೆ.
ಜಯಲಕ್ಷ್ಮೀಪುರಂ ಪೆÇಲೀಸ್ ಠಾಣಾ ವ್ಯಾಪ್ತಿಯ ಗೋಕುಲಂ 2ನೇ ಹಂತ, ಕಂಟೂರ್ ರಸ್ತೆಯಲ್ಲಿರುವ ಗೋಕುಲಂ ಜನರಲ್ ಸ್ಟೋರ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾರ್ವಜನಿಕರೊಂದಿಗೆ ವ್ಯಾಪಾರ ಮಾಡುತ್ತಿದ್ದ ಓಂ ಪ್ರಕಾಶ್ ಎಂಬುವವರ ವಿರುದ್ದ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಜಯಲಕ್ಷ್ಮೀಪುರಂ ಪೆÇಲೀಸ್ ಠಾಣಾ ವ್ಯಾಪ್ತಿಯ ಗೋಕುಲಂ 2ನೇ ಹಂತ, ಕಂಟೂರ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಜೂಸ್ ಸೆಂಟರ್ (ಹಣ್ಣು ಮತ್ತು ತರಕಾರಿ) ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾರ್ವಜನಿಕರೊಂದಿಗೆ ವ್ಯಾಪಾರ ಮಾಡುತ್ತಿದ್ದ ಜವರಪ್ಪ ನಾಯ್ಕ ಎಂಬುವವರ ವಿರುದ್ದ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಕೋವಿಡ್-19 ನಿಯಮಗಳು ಹಾಗೂ ಲಾಕ್‍ಡೌನ್ ನಿಯಮಗಳ ಜಾರಿ ಸಂಬಂಧ ಮೈಸೂರು ನಗರ ಪೆÇಲೀಸರು ಪ್ರತಿ ನಿತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕೋವಿಡ್-19 ಹರಡುವಿಕೆ ನಿಯಂತ್ರಣದಲ್ಲಿ ನಗರದ ಪೆÇಲೀಸರಿಗೆ ಸಾರ್ವಜನಿಕರು ಕೋವಿಡ್-19 ನಿಯಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಪೆÇಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ, ತಿಳಿಸಿರುತ್ತಾರೆ.