ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ – ಸಿಪಿಐ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 12 :- ಹಬ್ಬಗಳು ಸಂತಸದ ಸಂಕೇತವಾಗಬೇಕೆ ಹೊರತು ಕೋಮುಗಲಭೆಗೆ ಆಸ್ಪದವಾಗಬಾರದು ಸರ್ಕಾರದ ಕಟ್ಟುನಿಟ್ಟಿನ ನಿಯಮದಲ್ಲಿ ಆಚರಣೆ ಮಾಡಿದರೆ ಒಳಿತು ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕಾನೂನು ರೀತಿಯಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಕೂಡ್ಲಿಗಿ ಸಿಪಿಐ ಸುರೇಶ ಹೆಚ್ ತಳವಾರ ತಿಳಿಸಿದರು.
ಅವರು ತಾಲೂಕಿನ ಗುಡೇಕೋಟೆ ಗ್ರಾಮದ ಪೊಲೀಸ್ ಠಾಣಾ ಆವರಣದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಕುರಿತ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಉತ್ಸವಗಳು ಶಾಂತಿರೀತಿಯಿಂದ ಸಹಬಾಳ್ವೆಯಲ್ಲಿ ಆಚರಿಸಿ ನಿಯಮಗಳನ್ನು ಪಾಲಿಸುವ ಮೂಲಕ ಕಾನೂನಿಗೆ ಗೌರವಕೊಡಬೇಕು ಎಂದರು.
ಪಿಎಸ್ಐ ಪ್ರಕಾಶ ಮಾತನಾಡಿ ಠಾಣಾ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಿಸುವ ಗಣೇಶ ಮಂಡಳಿಯ ಪದಾಧಿಕಾರಿಗಳು ತಪ್ಪದೆ ಅಧಿಕೃತ  ಪರವಾನಿಗೆ ಪಡೆದುಕೊಳ್ಳಬೇಕು ಶಾಂತರೀತಿಯಲ್ಲಿ ಹಬ್ಬದ ಸಡಗರವನ್ನು ಕಾಣುವ ಮೂಲಕ ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರವಹಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

One attachment • Scanned by Gmail