ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಿ ಪ್ರಕರಣ ದಾಖಲಿಸಿ

ಗದಗ ಏ 24 : ಸರ್ಕಾರ ಜಾರಿಗೊಳಿಸಿದ ಕೋವಿಡ್ ಸೋಂಕು ಕಠಿಣ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಮಾರ್ಗಸೂಚಿಗಳ ಸರಿಯಾದ ಪಾಲನೆಯಾಗುವಂತೆ ನಿಗಾ ವಹಿಸಿ ಉಲ್ಲಂಘಿಸುವವರ ಮೇಲೆ ದಂಡ ವಿಧಿಸಿ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭೆಯಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಷ್ಟಾನ ಕುರಿತಂತೆ ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾÀಡಿದರು.ಎಪ್ರಿಲ್ 21 ರಿಂದ ಮೇ 4 ರವರೆಗೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫೂ?ಯ ಸರಿಯಾಗಿ ಅನುಷ್ಟಾನಗೊಳಿಸಬೇಕು. ಕೆಲವು ಅಗತ್ಯದ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲವನ್ನು ನಿರ್ಬಂಧಿಸಲಾಗಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡಮಟ್ಟದಲ್ಲಿ ಟಾಸ್ಕ್ಫೋರ್ಸ ಸಮಿತಿ ರಚಿಸಬೇಕು. ಅದೇ ತರಹ ಗ್ರಾಮೀಣ ಭಾಗದಲ್ಲಿ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೆÇೀರ್ಸ ಸಮಿತಿ ರಚಿಸಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯಾಗುವಂತೆ ಸಮಿತಿಗಳಿಂದ ನಿಗಾ ವಹಿಸುವ ಕಾರ್ಯ ನಡೆಸಬೇಕು. ಈ ತಂಡಗಳು ಪರಸ್ಥಳದಿಂದ ಆಗಮಿಸುವ ಸಾರ್ವಜನಿಕರ ಮೇಲೆ ನಿಗಾ ವಹಿಸಬೇಕು. ಹಾಗೂ ಆಗಮಿಸಿದ ಸಾರ್ವಜನಿಕರಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆಗೊಳಪಡಿಸುವ ಕಾರ್ಯ ನಿರ್ವಹಿಸಬೇಕು.
ವಾರದ ದಿನಗಳಿಗೆ (ಸೋಮವಾರ ದಿಂದ ಶುಕ್ರವಾರವರೆಗೆ) ಬೆ.6 ರಿಂದ ರಾತ್ರಿ 9 ಗಂಟೆಯವರೆಗೆ ಮಾರ್ಗಸೂಚಿಗಳು ಅನ್ವಯವಾಗುವುದರ ಬಗ್ಗೆ ವಿವರಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.
ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ನಿರ್ಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ ಎಲ್ಲಾ ಅಂಗಡಿಗಳು, ಶೈತ್ಯಾಗಾರಗಳು ಮತ್ತು ಉಗ್ರಾಣ, ಖಾಸಗಿ ಭದ್ರತಾ ಸೇವೆಗಳಿಗೆ,ಕ್ಷೌರದ ಅಂಗಡಿಗಳು/ ಸಲೂನ್/ಬ್ಯೂಟಿಪಾರ್ಲರ್‍ಗಳಿಗೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ.
ಕಂಟೈನ್‍ಮೆಂಟ್‍ವಲಯದ ಹೊರತಾಗಿ ಎಲ್ಲಾ ಕೃಷಿ (ಬೇಸಾಯ)/ಸಂಬಂಧಿತ ಚಟುವಟಿಕೆಗಳಿಗೆ ಪೂರಕವಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸುವ ಅಂಗಡಿಗಳು ಮತ್ತು ದಾಸ್ತಾನು ಮಳಿಗೆಗಳಿಗೆ /ಕೃಷಿ ಯಂತ್ರದಾರಿಕೆಗಳಿಗೆ ಅನುಮತಿ ನೀಡಲಾಗಿದೆ.
ಈ ಮೇಲೆ ಸೂಚಿಸಿಲಾದ ಅಂಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳು ವಾಣಿಜ್ಯ, ಖಾಸಗಿ ಸಂಸ್ಥೆಗಳನ್ನು ಮುಚ್ಚಲು ಸರ್ಕಾರ ಸೂಚಿಸಿದ್ದು ಅದರಂತೆ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿಅಪರಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅನಿಲಕುಮಾರ್ ಮುದ್ದಾ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಡಿ.ಡಿ.ಎಲ್.ಆರ್. ರವಿಕುಮಾರ್ , ಆರೋಗ್ಯ ಇಲಾಖೆಯ ಅಧಿಕಾರಿಗಳು , ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.