
ನವದೆಹಲಿ,ಮಾ.1- ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಈ ವರ್ಷದ ಜನವರಿ ಅಂತ್ಯಕ್ಕೆ 29 ಲಕ್ಷ ವಾಟ್ಸ್ ಅಪ್ ಖಾತೆಗಳನ್ನು ವಾಟ್ಸ್ ಅಪ್ ಸಂಸ್ಥೆ ನಿಷೇಧಿಸಿದೆ.
ಐಟಿ ನಿಯಮಗಳು 2021 ರ ಅನುಸಾರವಾಗಿ, ನಾವು ಜನವರಿ 2023 ಕ್ಕೆ ನಮ್ಮ ವರದಿ ಪ್ರಕಟಿಸಿದ್ದೇವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಈ ವರದಿಯಡಿ ಬಳಕೆದಾರರ ದೂರುಗಳು ಮತ್ತು ವಾಟ್ಸ್ ಅಪ್ ತೆಗೆದುಕೊಂಡ ಕ್ರಮಗಳು ಮತ್ತು ವಾಟ್ಸ್ ಅಪ್ ಸ್ವಂತ ತಡೆಗಟ್ಟುವ ಕ್ರಮಗಳ ವಿವರಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ಜನವರಿಯಲ್ಲಿ ತಿಂಗಳಲ್ಲಿ ವಾಟ್ಸ್ ಅಪ್ ಸಂಸ್ಥೆ 2.9 ದಶಲಕ್ಷ ಖಾತೆಗಳನ್ನು ನಿಷೇಧಿಸಿದೆ. ಮುಂದೆಯೂ ನಿಯಮ ಉಲ್ಲಂಘಿಸುವ ಬಳಕೆದಾರರ ವಿರುದ್ದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾಟ್ಸ್ ಅಪ್ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ವಾಟ್ಸ್ ಅಪ್ ಸಂಸ್ಥೆ, ಕೇಂದ್ರ ಸರ್ಕಾರ ಜಾರಿ ಮಾಡಿದ್ದ 2021ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮೀನಾಮೇಷ ಎಣಿಸಿತ್ತು. ಇದರಿಂದಾಗಿ ವಾಟ್ಸ್ ಅಪ್ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆದಿತ್ತು
ಕೇಂದ್ರ ಸರ್ಕಾರದ ನಿಯಮ ಜಾರಿ ಮಾಡದಿದ್ದರೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೊನೆಗೂ ವಾಟ್ಸ್ ಅಪ್ ಸಂಸ್ಥೆ ಕೇಂದ್ರ ಸರ್ಕಾರದ ನಿಯಮವನ್ನು ಪಾಲಿಸಲು ಒಪ್ಪಿಕೊಂಡಿತ್ತು
ಅದರ ಅನ್ವಯ ನಿಮಯ ಉಲ್ಲಂಘಿಸಿದ 29 ಲಕ್ಷ ಬಳಕೆದಾರರನ್ನು ವಾಟ್ಸ್ ಅಪ್ ಸಂಸ್ಥೆ ನಿಷೇದಿಸಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.