ನಿಯಮ ಉಲ್ಲಂಘನೆ: 25 ಕ್ಕೂ ಹೆಚ್ಚು ಬೈಕ್ ವಶ

ಕೆರೂರ,ಮೇ1: ಪಟ್ಟಣ ಪೊಲೀಸ್ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ-218ರಲ್ಲಿ ಪ್ರಖರವಾದ ಸುಡು ಬಿಸಿಲನ್ನು ನೋಡದೆ ನಾಗರಿಕರಿಗೆ ಕಫ್ರ್ಯೂ ಜಾಗೃತಿ ಮೂಡಿಸುವದರ ಜೊತೆಗೆ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವವರ ದ್ವಿಚಕ್ರವಾಹನಗಳನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ದಂಡ ವಿಧಿಸಿದರು ಮತ್ತು ಕೆಲ ನಾಗರಿಕರಿಗೆ ತಿಳಿ ಹೇಳಿ ಕಳುಹಿಸಿದರು.
ಕಫ್ರ್ಯೂ ಸಡಿಲಿಕೆಯನ್ನು ಬೆಳಿಗ್ಗೆ 6 ರಿಂದ 10 ರವರೆಗೆ ಸಡಿಲಿಸಿದ್ದು ಅದನ್ನೆ ನೆಪ ಮಾಡಿಕೊಂಡು ಕೆಲ ಬೈಕ ಸವಾರರು ರಸ್ತೆಯ ಮೇಲೆ ಎಲ್ಲೇಂದರಲ್ಲಿ ತಿರುಗಾಡುವದನ್ನು ತಡೆದು ಸುಮಾರು 25ಕ್ಕೂ ಹೆಚ್ಚು ಬೈಕಗಳನ್ನು ವಶಕ್ಕೆ ಪಡೆದು ದಂಡ ಹಾಕುವದರ ಮುಖಾಂತರ ಸಾಯಂಕಾಲ ಬಿಡುಗಡೆ ಮಾಡಿದರು. ಕೆಲವರಿಗೆ ಹೀಗೆ ಅನವಾಶ್ಯಕವಾಗಿ ತಿರುಗುವದು ಕಂಡು ಬಂದಲ್ಲಿ ಕೇಸ್ ದಾಖಲಿಸಿ ಉಗ್ರ ಕ್ರಮ ಕೈಗೊಳ್ಳಲಾಗುವದು ಎಂದು ಪಿಎಸ್‍ಐ ರಮೇಶ ಜಲಗೇರಿ ಹೇಳಿದರು.
ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪಿಎಸ್‍ಐ ಆರ್‍ಬಿ.ಸೌದಾಗರ, ಎಎಸ್‍ಐ ಎಫ್ ಬಿ ತಳವಾರ ಹಾಗೂ ಚಂದ್ರಶೇಖರ ಆಕಳವಾಡಿ, ದುರ್ಗೇಶ ಬಂಡಿವಡ್ಡರ, ರಮೇಶ ದೊಡಮನಿ, ರಾಣಪ್ಪ ಹಂಚಿನಾಳ ಸೇರಿದಂತೆ ಹೊಮಗಾರ್ಡ ಸಿಬ್ಬಂದಿ ಭಾಗವಹಿಸಿದ್ದರು.