ನಿಯಮ ಉಲ್ಲಂಘನೆ: ಕುಸ್ತಿ ಒಕ್ಕೂಟ ಅಮಾನತು

ನವದೆಹಲಿ,ಡಿ,೨೪- ಭಾರತೀಯ ಕುಸ್ತಿ ಒಕ್ಕೂಟಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂಜಯ್ ಸಿಂಗ್ ನೇತೃತ್ವದ ನೂತನ ಪದಾಧಿಕಾರಿಗಳ ಆಯ್ಕೆನ್ನು ಸಂವಿಧಾನದ ನಿಯಮಾವಳಿ ಪಾಲಿಸದ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದೆ.
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯ ಬಗ್ಗೆ ಅನೇಕ ಕುಸ್ತಿ ಪಟುಗಳು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ತಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೂ ತನ್ನ ಆಪ್ತ ಸಂಜಯ್ ಸಿಂಗ್ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಿ ಪರೋಕ್ಷವಾಗಿ ಆಡಳಿತ ನಡೆಸಲು ಮುಂದಾಗಿದ್ದ ಒಕ್ಕೂಟ ಮಾಜಿ ಅಧ್ಯಕ್ಷ ಹಾಗು ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಭಾರಿ ಮುಖಭಂಗವಾಗಿದೆ.
ಹೊಸ ಅಧ್ಯಕ್ಷ ಸಂಜಯ್ ಸಿಂಗ್ ಅವರು ಉತ್ತರ ಪ್ರದೇಶದ ಗೋಂಡಾದಲ್ಲಿ ವರ್ಷಾಂತ್ಯದಲ್ಲಿ ತರಾತುರಿಯಲ್ಲಿ ಹದಿನೈದು ಮತ್ತು ಇಪ್ಪತ್ತು ವರ್ಷ ಒಳಗಿನ ಯು- ೧೫ ಮತ್ತು ಯು- ೨೦ ರಾಷ್ಟ್ರೀಯ ಕ್ರೀಡಾಕೂಟವನ್ನು ಕ್ರೀಡಾಪಟುಗಳಿಗೆ ಯಾವುದೇ ಮುನ್ಸೂಚನೆ ನೀಡದ ಪ್ರಕಟ ಮಾಡಿದ್ದೂ ಕೂಡ ನೂತನ ಪದಾಧಿಕಾರಿಗಳ ಪಟ್ಟಿ ಅಮಾನತು ಮಾಡಲು ಕಾರಣ ಎಂದು ತಿಳಿಸಲಾಗಿದೆ.
ಭಾರತೀಯ ಕುಸ್ತಿ ಒಕ್ಕೂಟ- “ಡಬ್ಲ್ಯುಎಫ್‌ಐನ ಸಂವಿಧಾನದ ಪೀಠಿಕೆಯ ಷರತ್ತು ೩ (ಇ) ಪ್ರಕಾರ, ಡಬ್ಲ್ಯುಎಫ್‌ಐನ ಉದ್ದೇಶ, ಇತರವುಗಳಲ್ಲಿ, ಹಿರಿಯ, ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದ ಸ್ಥಳಗಳಲ್ಲಿ ಆಯೋಜಿಸಬೇಕು ಎಂದಿದೆ. ಆದರೆ ಯಾವುದಕ್ಕೂ ಮನ್ನಣೆ ನೀಡದ ಕಿರಿಯರ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿದ್ದು ಕ್ರೀಡಾ ಸಚಿವಾಲಯದ ಕೆಂಗಣ್ಣಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಮೊನ್ನೆಯಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿ ಎರಡೇ ದಿನದಲ್ಲಿ ಕ್ರೀಡಾ ಕೂಟ ಘೋಸಿಲಾಗಿದೆ. ಕುಸ್ತಿ ಒಕ್ಕೂಟದ ಸಂವಿಧಾನ ಮತ್ತು ನಿಯಮಾವಳಿ ಪಾಲಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ತಿಳಿಸಿದೆ.
“ಹೊಸದಾಗಿ ಚುನಾಯಿತ ಸಂಸ್ಥೆ ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣದಲ್ಲಿರುವಂತೆ ತೋರುತ್ತಿದೆ. ಆಟಗಾರರ ಲೈಂಗಿಕ ಕಿರುಕುಳದ ಆರೋಪದ ಆವರಣವಾಗಿದೆ. ಆರೋಪ ಮಾಡಲಾಗಿದೆ ಮತ್ತು ನ್ಯಾಯಾಲಯ ಈ ವಿಷಯವನ್ನು ವಿಚಾರಣೆ ನಡೆಸುತ್ತಿದೆ, ”ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ
ಸಂವಿಧಾನದ ಉಲ್ಲಂಘನೆಯಡಿ ಕ್ರಮ

ಕುಸ್ತಿಪಟುಗಳಿಗೆ ಸಾಕಷ್ಟು ಸೂಚನೆ ನೀಡದೆ ’ತರಾತುರಿ’ಯಲ್ಲಿ ಉತ್ತರ ಪ್ರದೇಶದ ಗೋಂಡಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆ ಮಾಡಿದ ನೂತನ ಕುಸ್ತಿ ಅಧ್ಯಕ್ಷರ ನಡೆಯ ಬಗ್ಗೆ ತೀವ್ರ ಅಸಮಾಧಾನ ಅತೃಪ್ತಿ ವ್ಯಕ್ತಪಡಿಸಿ, ಕ್ರೀಡಾ ಸಚಿವಾಲು ನೂತನ ಪಧಾದಿಕಾರಿಗಳನ್ನು ಅಮಾನತು ಮಾಡಿದೆ.
“ಇಂತಹ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿ ತೆಗೆದುಕೊಳ್ಳಬೇಕು, ಅದರ ಮೊದಲು ಅಜೆಂಡಾಗಳನ್ನು ಪರಿಗಣನೆಗೆ ಇರಿಸಬೇಕಾಗುತ್ತದೆ. ಒಕ್ಕೂಟದ ಸಂವಿಧಾನದ ಪ್ರಕಾರ ’ನೋಟಿಸ್ ನೀಡಬೇಕು.ಸಭೆಗೆ ಮುನ್ನೆ ೧೫ ದಿನ ನೋಟಿಸ್ ನೀಡಬೇಕು. ಕನಿಷ್ಠ ಸೂಚನೆಯ ಅವಧಿ ೭ ದಿನಗಳು ಮತ್ತು ೧/೩ ಪ್ರತಿನಿಧಿಗಳ ಕೋರಂ ಅಗತ್ಯತೆಯೊಂದಿಗೆ ನಿರ್ಧಾರ ಕೈಗೊಳ್ಳಬೇಕು. ಯಾವುದೂ ಇಲ್ಲದೆ ಕ್ರೀಡಾ ಕೂಟ ಆಯೋಜನೆ ಮಾಡಿದ್ದು ದುರದುಷ್ಟಕರ ಎಂದು” ಸಚಿವಾಲಯ ಹೇಳಿದೆ
ಕುಸ್ತಿ ಪಟುಗಳ ಅಸಮಾಧಾನ
ಭಾರತೀಯ ಕುಸ್ತಿ ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ಆಯ್ಕೆಗೆ ಕುಸ್ತಿಪಟುಗಳು ಬಹಿರಂಗವಾಗಿ ಅತೃಪ್ತಿ ಅಸಮಾಧಾನ ಹೊರಹಾಕಿದ್ದರು.
ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಗ್ ಒಕ್ಕೂಟದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ. ಹೀಗಾಗಿಯೇ ಆಪ್ತನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ ಎಂದು ಆರೋಪಿ ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಪ್ರಕಟಿಸಿದ್ದಾರೆ.ಜೊತೆಗೆ ಬಜರಂಗ್ ಪೂನಿಯಾ ತನಗೆ ಬಂದ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯ ಕ್ರಮಕೈಗೊಂಡಿದೆ.