ನಿಯಮಿತ ವ್ಯಾಯಾಮಕ್ಕೆ ಮಂಜುನಾಥ್ ಸಲಹೆ

ಕೋಲಾರ,ಜ.೧೦: ಕ್ರೀಡಾಪಟುಗಳು ಜಿಲ್ಲೆಯ ಕೀರ್ತಿಯನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಬೆಳಗಲು ನಿಯಮಿತ ಅಭ್ಯಾಸ,ವ್ಯಾಯಾಮ ಮಾಡಬೇಕು ಎಂದು ಜಿಲ್ಲಾ ಯವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್ ಕರೆ ನೀಡಿದರು.
ಜಿಲ್ಲೆಯ ಮಾಲೂರು ಪಟ್ಟಣದ ಕ್ರಿಡಾಂಗಣದಲ್ಲಿ ಕ್ರೀಡಾ ವಸತಿನಿಲಯಗಳ ಪ್ರವೇಶಕ್ಕಾಗಿ ನಡೆದ ದೈಹಿಕ ಪರೀಕ್ಷೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಜಿಲ್ಲೆ ಹಿಂದೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸ್ಥಾನದಲ್ಲಿತ್ತು, ಇತ್ತೀಚಿನ ದಿನಗಳಲ್ಲಿ ಕ್ರೀಡಾಸಕ್ತಿ ಕುಸಿದಿದೆ ಎಂದು ವಿಷಾದಿಸಿದ ಅವರು, ಕ್ರೀಡೆಗಳು ದೈಹಿಕ ಆರೋಗ್ಯ ಮಾತ್ರವಲ್ಲ, ನಿಮ್ಮಲ್ಲಿ ಶಿಸ್ತು,ಸಂಯಮ ಬೆಳೆಸುತ್ತವೆ ಎಂದ ಅವರು, ನಿಮ್ಮ ಬದುಕಿನಲ್ಲಿ ಉದ್ಯೋಗ,ಉನ್ನತ ಶಿಕ್ಷಣಕ್ಕೆ ಮೀಸಲಾತಿ ಕಲ್ಪಿಸುತ್ತವೆ ಎಂದರು.
ಸರ್ಕಾರಿ ಕ್ರೀಡಾಪಟುಗಳಿಗೆ ಉತ್ತಮ ಆರೋಗ್ಯ,ಆಹಾರ ಒದಗಿಸಿ ಕ್ರೀಡಾ ತರಬೇತಿ ನೀಡುವ ಉದ್ದೇಶದಿಂದ ಕ್ರೀಡಾಹಾಸ್ಟೇಲ್‌ಗಳನ್ನು ಸ್ಥಾಪಿಸಿ ಸೌಲಭ್ಯ ಕಲ್ಪಿಸಿದೆ ಎಂದರು.
ವಿದ್ಯಾರ್ಥಿಗಳು ಕ್ರೀಡಾಹಾಸ್ಟೆಲ್‌ಗಳಲ್ಲಿ ದಾಖಲಾದ ನಂತರ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಮತ್ತು ಉತ್ತಮ ಕ್ರೀಡಾಪಟುಗಳಾಗಿ ಜಿಲ್ಲೆಗೆ ಕೀರ್ತಿ ತನ್ನಿ ಎಂದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರ ಅಪ್ಸರ್ ಪಾಷ, ದೈಹಿಕ ಶಿಕ್ಷಕರಾದ ವೆಂಕಟೇಶ್, ಜಗದೀಶ್, ಪುರುಷೋತ್ತಮ್, ಆಂಜಿನಪ್ಪ,ಗೋಪಿನಾಥ್,ನಾಗರಾಜ್ ಮತ್ತಿತರರು ನೇತೃತ್ವ ವಹಿಸಿದ್ದರು.