ನಿಯಮಾನುಸಾರ ರಾಮನವಮಿ ಆಚರಣೆ

ಮೈಸೂರು:ಏ:21: ಸಾಂಸ್ಕøತಿಕ ನಗರಿಯಲ್ಲಿ ಅರ್ಥಪೂರ್ಣ ರಾಮನವಮಿ ಅಚರಣೆ.
ನಗರದ ವಿವೇಕಾನಂದನಗರದ ವೃತ್ತದಲ್ಲಿ ಶ್ರೀರಾಮನವಮಿಯ ಅಂಗವಾಗಿ ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿ.ಕೆ.ಎಸ್ ಫೌಂಡೇಶನ್ ವತಿಯಿಂದ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕೊರೋನಾದಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನಿಮಾನುಸಾರ ಪಾಲಿಸುವಂತೆ “ಮಾಸ್ಕ್ ಧರಿಸಿ ಕೊರೋನಾ ಓಡಿಸಿ” ಕೊರೋನಮುಕ್ತ ಪ್ರತಿಜ್ಞಾವಿಧಿಯನ್ನು ಪಧಾದಿಕಾರಿಗಳು ಸ್ವೀಕರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷರಾದ ವಿಕಾಸ್ ಶಾಸ್ತ್ರಿ ಮಾತನಾಡಿ ಕೊರೋನಾ ಮುಕ್ತ ಮೈಸೂರು ಕಾಪಾಡಲು ಪ್ರತಿಯೊಬ್ಬ ನಸಹರೀಕನೂ ಸಹ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ, ಹಿರಿಯನಾಗರೀಕರು ಮತ್ತು ಸಣ್ಣಮಕ್ಕಳ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕು, ಕೋವಿಡ್ ಲಸಿಕೆ ಪಡೆದುಕೊಳ್ಳಲು ಸ್ಥಳೀಯ ಆರೋಗ್ಯ ಪ್ರಾರ್ಥಮಿಕ ಕೇಂದ್ರಗಳು ಆಸ್ಪತ್ರೆ ಲಸಿಕಾ ಘಟಕಗಳಿಗೆ ಭೇಟಿ ನೀಡಬೇಕು, ವಿವೇಕಾನಂದನಗರ ಅರವಿಂದನಗರ ಬಡಾವಣೆಯ ನಿವಾಸಿಗಳಿಗೆ ಕೊವಿಡ್ ಲಸಿಕೆ ಪಡೆಯಲು ಆಸ್ಪತ್ರೆಗೆ ತೆರಳಲು ಸಂಚಾರಿ ವ್ಯವಸ್ಥೆಗೆ ಸಹಾಯವಾಗುವಂತೆ ರಾಷ್ಟ್ರೀಯ ಹಿಂದೂ ಸಮಿತಿಯ ವತಿಯಿಂದ ಸಹಾಯವಾಣಿ ಯುವಕರ ತಂಡ ರಚಿಸಲಾಗಿದೆ ಇದರ ಉಪಯೋಗ ಪಡೆಯಲು ಹಿರಿಯ ನಾಗರೀಕರು 7406224633 ಸಂಪರ್ಕಿಸಬಹುದು ಎಂದರು.
ಇದೇ ಸಂಧರ್ಭದಲ್ಲಿ ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಬಿಜೆಪಿ ಮುಖಂಡರಾದ ಮಂಜುನಾಥ್, ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷರಾದ ವಿಕಾಸ್ ಶಾಸ್ತ್ರಿ, ನವೀನ್ ಕೆಂಪಿ, ಮಹೇಶ್, ಪ್ರದೀಪ್, ಗಗನ್, ಮನೋಜ್, ಚೇತನ್, ಮಲ್ಲಿಕಾರ್ಜುನ, ಕಾರ್ತಿಕ್ ಇನ್ನಿತರರು ಇದ್ದರು