ನಿಯಮಾನುಸಾರ ಕೊಚಿಮಲ್ ವಿಭಜನೆಗೆ ಮನವಿ

ಕೋಲಾರ,ಜು,೬:ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟದ ವಿಭಜನೆಗೆ ಸಂಬಂಧಿಸಿದಂತೆ ಮಾಜಿ ಮಂತ್ರಿ ಡಾ. ಸುಧಾಕರ್ ಅವರು ನಮ್ಮ ಸರ್ಕಾರದ ಬಗ್ಗೆ ಹಾಗೂ ನಮ್ಮ ಬಗ್ಗೆ ಮಾತನಾಡಿದ್ದಾರೆ ಅದಕ್ಕೆ ಮೊದಲೂ ಅವರು ಏನು ಮಾಡಿದ್ದಾರೆಂದು ತಿಳಿದು ಮಾತನಾಡ ಬೇಕಾಗಿತ್ತು, ಕಾನೂನಿನ ನಿಯಮಗಳನ್ನು ಮೀರಿ ಅವರು ತೆಗೆದು ಕೊಂಡಿದ್ದ ತೀರ್ಮಾನ ವಿರುದ್ದ ನ್ಯಾಯಾಲಯವು ತೀರ್ಪು ನೀಡಿದೆ. ಸರ್ಕಾರವು ನಿಯಮಗಳ ಉಲ್ಲಂಘಿಸಿರುವ ನಿಯಮಗಳನ್ನು ಸರಿಪಡೆಸಿ ವಿಭಜನೆ ಮಾಡುವುದಾಗಿ ಮಾಡುವುದಾಗಿ ತಿಳಿಸಿದೆ ಹೊರತಾಗಿ ವಿಭಜನೆ ಮಾಡುವುದಿಲ್ಲ ಎಂದು ಹೇಳಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಸ್ವಷ್ಟ ಪಡೆಸಿದರು,
ನಗರದ ಹೊರವಲಯದ ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟದಲ್ಲಿ ಇಂದು ನಡೆದ ಸರ್ವಸದಸ್ಯರ ಸಭೆಯ ನಂತರ ಅವರು ಮಾದ್ಯದವರೊಂದಿಗೆ ಮಾತನಾಡುತ್ತಾ ನಾವು ಸಹ ಅಷ್ಟೆ ವಿಭಜನೆ ಬೇಡಾವೆಂದು ಹೇಳಿಲ್ಲ ಕೋಲಾರದಲ್ಲೇ ಪ್ರತ್ಯೇಕವಾಗಿರ ಬೇಕೆಂದು ಹೇಳಿಲ್ಲ. ಈಗಾಗಲೇ ಏನೇನು ವ್ಯತ್ಯಾಸಗಳಾಗಿದೆ ಅವುಗಳನ್ನು ಸರಿಪಡೆಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಸುಧಾಕರ್ ಮತ್ತು ಎರಡು ಜಿಲ್ಲಾ ಶಾಸಕರುಗಳು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣ ಇತ್ಯಾರ್ಥವಾಗದೆ ಬಾಕಿ ಉಳಿದಿತ್ತು.ಇದರಿಂದ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿ ಮತ್ತು ಕೋಲಾರದಲ್ಲಿ ಎಂ.ವಿ.ಕೆ ಗೋಲ್ಡ್‌ನ್ ಡೈರಿ ಎರಡು ಸಹ ನೆನಗುದಿಗೆ ಬಿದ್ದಿದ್ದು ಎರಡೂ ಕಾಮಗಾರಿಗಳ ಅಭಿವೃದ್ದಿಗೆ ಅವಕಾಶವೇ ಸಿಕ್ಕಿರಲಿಲ್ಲ ಎಂದು ತಿಳಿಸಿದರು
ಇವೆಲ್ಲಾದಕ್ಕೆ ಪರಿಹಾರವೆಂದರೆ ಕೋರ್ಟ್‌ನಲ್ಲಿರುವ ಪ್ರಕರಣವನ್ನು ವಾಪಸ್ ಪಡೆದು, ಚಿಕ್ಕಬಳ್ಳಾಪುರದಲ್ಲಿ ಮೆಗಾಡೈರಿ ಬಾಕಿ ಕೆಲಸಗಳು ಮತ್ತು ಕೋಲಾರದಲ್ಲಿ ಎಂ.ವಿ.ಕೆ.ಡೈರಿಗಳನ್ನು ಪ್ರಾರಂಭಿಸ ಬೇಕಾಗಿದೆ. ಚಿಕ್ಕಬಳ್ಳಾಪುರದ ಮಾಜಿ ಸಚಿವ ಡಾ. ಸುಧಾಕರ್ ಅವರ ಸರ್ಕಾರದಲ್ಲಿ ಅನ್ಯಾಯವಾಗಿತ್ತು,ಇದನ್ನು ಸರಿಪಡೆಸ ಬೇಕಾದರೆ ನ್ಯಾಯಾದಲ್ಲಿರುವ ಪ್ರಕರಣ ವಾಪಸ್ ಪಡೆದು ಅಭಿವೃದ್ದಿ ಕೆಲಸವನ್ನು ಮುಂದುವರೆಸ ಬೇಕಾಗಿದೆ. ಮುಂದಿನ ವರ್ಷ ವಿಭಜನೆ ಮಾಡ ಬೇಕಾಗಿದೆ. ಈಗಾಗಲೇ ೪ ವರ್ಷಗಳು ಕಳೆದಿದ್ದು ಇನ್ನು ೧ ವರ್ಷ ಮಾತ್ರ ಬಾಕಿ ಉಳಿದಿದೆ ಅದು ಸಹ ಪೂರ್ಣಗೊಳಿಸ ಬೇಕಾಗಿದೆ ನ್ಯಾಯಾಲಯದಲ್ಲಿ ಪ್ರಕರಣ ವಾಪಸ್ ಪಡೆದು ಬಾಕಿ ಇರುವ ಕೆಲಸಗಳೆಲ್ಲಾ ಪೂರ್ಣಗೊಳಸ ಬೇಕಾಗಿದೆ ಬೋರ್ಡ್ ಅಫ್ ಡೈರೆಕ್ಟರ್‍ಸ್ ಮಿಟಿಂಗ್ ನಡೆಯ ಬೇಕಾಗಿತ್ತು. ಎಂದರು,
ಹಾಲಿನ ಉತ್ಪಾದನೆ ಹೆಚ್ಚಾಗಿ ಬೇಡಿಕೆ ಕಡಿಮೆ ಅಗಿದ್ದಾಗ ಹಾಲಿನ ಪೌಡರ್‌ಗಳಿಗೆ ಕಳುಹಿಸ ಬೇಕು ಪೌಡರ್‌ಗೆ ಹಾಲು ಕಳುಹಿಸಿದರೆ ನಷ್ಟವಾಗಲಿದೆ ಹಾಗಾಗಿ ಹಾಲಿನ ಉತ್ಪಾಕರಿಗೆ ನೀಡುವ ದರವನ್ನು ಕಡಿಮೆ ಮಾಡಿದಾಗ ಮಾತ್ರ ಒಕ್ಕೂಟದ ನಷ್ಟವನ್ನು ತೊಗಿಸಲು ಸಾಧ್ಯ ಇದನ್ನು ಮುಖ್ಯ ಮಂತ್ರಿಗಳಿಗೆ ವಿವರಿಸಲಾಗುವುದು ಎಂದು ಹೇಳಿದರು.